See also 2gird  3gird
1gird ಗರ್ಡ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ girded ಯಾ girt).

(ಸಾಹಿತ್ಯಕ)

  1. (ಸೊಂಟವನ್ನು) ಪಟ್ಟಿನಿಂದ – ಕಟ್ಟು, ಸುತ್ತುವರಿ.
  2. (ನಡುಪಟ್ಟಿಯಿಂದ ಮುಖ್ಯವಾಗಿ ಉಡುಪನ್ನು ಬಂಧಿಸಲು, ವ್ಯಕ್ತಿಯ) ಸೊಂಟಕ್ಕೆ ಕಟ್ಟು, ಬಿಗಿ; ನಡುವಿಗೆ ಕಟ್ಟು.
  3. (ಪ್ರಾಚೀನ ಪ್ರಯೋಗ) ಶಕ್ತಿ ನೀಡು, ಒದಗಿಸು; ಅಧಿಕಾರ ಕೊಡು: thou hast girded me with strength into the battle ಯುದ್ಧ ಮಾಡಲು ನೀನು ನನಗೆ ಶಕ್ತಿ ಒದಗಿಸಿದ್ದೀಯೆ.
  4. (ಯಾರೊಬ್ಬನಿಗೆ) ಕತ್ತಿಯುಳ್ಳ ನಡುಪಟ್ಟಿ ತೊಡಿಸು.
  5. (ಕತ್ತಿಯನ್ನು) ನಡುಪಟ್ಟಿಗೆ ಹಾಕು, ಸೇರಿಸು.
  6. (ನಡುಪಟ್ಟಿ, ಡಾಬು, ಮೊದಲಾದವುಗಳಿಂದ) ಸುತ್ತುವರಿ.
  7. (ನಡುಕಟ್ಟು, ಸಮುದ್ರ, ಬೇಲಿ, ಮೊದಲಾದವುಗಳ ವಿಷಯದಲ್ಲಿ) ಸುತ್ತುಗಟ್ಟು; ಸುತ್ತುವರಿ; ಬಳಸು.
  8. (ಪಟ್ಟಣ ಮೊದಲಾದವನ್ನು) ಆಕ್ರಮಣಕಾರರಿಂದ ಯಾ ಕೋಟೆಕೊತ್ತಲಗಳಿಂದ ಸುತ್ತುವರಿ, ಸುತ್ತುಗಟ್ಟು.
ನುಡಿಗಟ್ಟು
  1. gird oneself (up) ಸೊಂಟಕಟ್ಟಿ ನಿಲ್ಲು; ಕಾರ್ಯಕ್ಕೆ ಸಿದ್ಧನಾಗು.
  2. gird one’s loins = ನುಡಿಗಟ್ಟು \((1)\).
  3. gird up = 1gird \((1, 2)\).
See also 1gird  3gird
2gird ಗರ್ಡ್‍
ಅಕರ್ಮಕ ಕ್ರಿಯಾಪದ

ಹಾಸ್ಯ, ನಕಲಿ, ಗೇಲಿ, ಪರಿಹಾಸ – ಮಾಡು; ಅಣಕಿಸು: girding at the wrong-headedness of the officials ಅಧಿಕಾರಿಗಳ ವಕ್ರತನವನ್ನು ಗೇಲಿಮಾಡುತ್ತ.

See also 1gird  2gird
3gird ಗರ್ಡ್‍
ನಾಮವಾಚಕ

ಹಾಸ್ಯ(ದ ಮಾತು); ನಕಲಿ; ಗೇಲಿ; ಪರಿಹಾಸ.