See also 2gill  3gill  4gill  5gill
1gill ಗಿಲ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ)

  1. ಕಿವಿರು; ಟೊಳ್ಳೆ; ಈನು ಮತ್ತಿತರ ಜಲಶ್ವಾಸ ಪ್ರಾಣಿಗಳ ಶ್ವಾಸಾಂಗ.
  2. (ಕೋಳಿಯ) ತೊಂಗುದೊವಲು.
  3. ಕಿವಿರು; ನಾಯಿಕೊಡೆಯ ಕೆಳಮುಖದಲ್ಲಿ ಕೇಂದ್ರದಿಂದ ಅಂಚಿನ ಕಡೆಗೆ ಹೊರಡುವ ಪಟ್ಟಿಗಳಲ್ಲೊಂದು.
  4. ಗಲ್ಲದ ಸುತ್ತಮುತ್ತಲ ಮಾಂಸ.
ನುಡಿಗಟ್ಟು
  1. green about the gills ರೋಗದ ಚಿಹ್ನೆ ಇರುವ.
  2. rosy about the gills ಆರೋಗ್ಯದ ಚಿಹ್ನೆ ಇರುವ.
See also 1gill  3gill  4gill  5gill
2gill ಗಿಲ್‍
ಸಕರ್ಮಕ ಕ್ರಿಯಾಪದ
  1. (ಈನಿನ) ಕರುಳು ತೆಗೆ.
  2. ನಾಯಿಕೊಡೆಯ ಕಿವಿರುಗಳನ್ನು ಕತ್ತರಿಸಿ ಹಾಕು.
  3. ಕಿವಿರುಬಲೆಯಲ್ಲಿ ಈನು ಹಿಡಿ.
See also 1gill  2gill  4gill  5gill
3gill ಗಿಲ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. (ಸಾಮಾನ್ಯವಾಗಿ ಕಾಡು ಬೆಳೆದ) ಆಳವಾದ ಕಮರಿ.
  2. ಬೆಟ್ಟದ ಕಿರು ಝರಿ, ತೊರೆ.
See also 1gill  2gill  3gill  5gill
4gill ಜಿಲ್‍
ನಾಮವಾಚಕ

ಜಿಲ್‍:

  1. ಕಾಲು ಪೈಂಟಿನ ದ್ರವದ ಅಳತೆ.
  2. (ಪ್ರಾಂತೀಯ ಪ್ರಯೋಗ) ಅರ್ಧ ಪೈಂಟು.
See also 1gill  2gill  3gill  4gill
5gill ಜಿಲ್‍
ನಾಮವಾಚಕ
  1. (ಹೀನಾರ್ಥಕ ಪ್ರಯೋಗ) ಹುಡುಗಿ; ತರುಣಿ.
  2. (ಆಡುಮಾತು) ಹೆಣ್ಣು ಹೆರೆಟ್‍ ಬೆಕ್ಕು.
ಪದಗುಚ್ಛ