gigantism ಜೈಗ್ಯಾಂಟಿಸಮ್‍
ನಾಮವಾಚಕ
  1. (ರೋಗಶಾಸ್ತ್ರ) ದೈತ್ಯತೆ; ಪಿಟ್ಯೂಟರಿ ಗ್ರಂಥಿಯ ಅತಿಯಾದ ಚಟುವಟಿಕೆಯಿಂದ ಉಂಟಾಗುವ ಬಹಳ ಭಾರಿ ಬೆಳವಣಿಗೆ ಹಾಗೂ ಅದನ್ನನುಸರಿಸಿ ಬರುವ ಸ್ನಾಯುಗಳ ದುರ್ಬಲತೆ ಮತ್ತು ನಪುಂಸಕತ್ವ.
  2. (ಸಸಿಗಳಲ್ಲಿ) ಅತಿಯಾದ ಬೆಳವಣಿಗೆ.