See also 2gift
1gift ಗಿಹ್ಟ್‍
ನಾಮವಾಚಕ
  1. ಕೊಡುಗೆ; ದಾನ; ಕೋಡು; ಕೊಟ್ಟದ್ದು; ಕೊಡುವುದು; ದಾನಮಾಡುವುದು: came to me by free gift ಅದು ನನಗೆ ಪುಕ್ಕಟೆ ದಾನವಾಗಿ ಬಂತು. (ಪ್ರಾಚೀನ ಪ್ರಯೋಗ) would not have it at a gift ಕೊಡುಗೆಯಾಗಿ ಬಂದರೂ ಬೇಡ; ಪುಕ್ಕಟೆ ಕೊಟ್ಟರೂ ಬೇಡ.
  2. (ನ್ಯಾಯಶಾಸ್ತ್ರ) ದಾನ; ಪ್ರತಿಫಲಾಪೇಕ್ಷೆಯಿಲ್ಲದೆ ಮನಸಾರ ವರ್ಗಾಯಿಸಿಕೊಟ್ಟ ಆಸ್ತಿ.
  3. ದಾನ ಕೊಟ್ಟ ವಸ್ತು; ಕೊಡುಗೆ; ಉಪಾಯನ; ದಾನ; ದತ್ತಿ.
  4. ವರ; ದೇವರ ವರಪ್ರಸಾದವೆಂದು ಪರಿಗಣಿಸುವ ಗುಣ, ಶಕ್ತಿ.
  5. ಸ್ವಾಭಾವಿಕ ಯಾ ನೈಸರ್ಗಿಕ ಶಕ್ತಿ ಯಾ ಗುಣ; ಹುಟ್ಟು – ಶಕ್ತಿ, ಕೌಶಲ; ಸಹಜ ಪ್ರತಿಭೆ.
  6. ಸುಲಭವಾದ ಕೆಲಸ ಮೊದಲಾದವು.
ಪದಗುಚ್ಛ

gift of tongues

  1. (ಮುಖ್ಯವಾಗಿ ಆದ್ಯ ಕ್ರೈಸ್ತರಿಗೆ ದೈವವರವಾಗಿ ಬಂದ) ಅಪರಿಚಿತ ಭಾಷೆಗಳಲ್ಲಿ ಮಾತನಾಡುವ ಶಕ್ತಿ.
  2. ಬಹುಭಾಷಾಭಿಜ್ಞತೆ; ಬಹುಭಾಷಿಕತೆ.
ನುಡಿಗಟ್ಟು
  1. gift of the gab.
  2. is in the gift of ಕೊಡುಗೆ (ಒಬ್ಬನ) ವಶದಲ್ಲಿದೆ: the living is in the gitf of the Bishop ಆ ವೃತ್ತಿಯ ಕೊಡುಗೆ ಬಿಷಪ್ಪನ ಕಯಲ್ಲಿದೆ, ವಶದಲ್ಲಿದೆ.
See also 1gift
2gift ಗಿಹ್ಟ್‍
ಸಕರ್ಮಕ ಕ್ರಿಯಾಪದ
  1. ದತ್ತಿ ಯಾ ಕೊಡುಗೆ ಬಿಡು.
  2. ದಾನ ಮಾಡು; ಬಹುಮಾನವಾಗಿ ಕೊಡು.
  3. ವರವಾಗಿ ನೀಡು, ಕೊಡು.