See also 2giddy
1giddy ಗಿಡಿ
ಗುಣವಾಚಕ
  1. (ಕಾಯಿಲೆ, ವಿಜಯೋತ್ಸಾಹ, ಮೊದಲಾದವುಗಳಿಂದ) ತಲೆ ತಿರುಗುವ; ತಲೆ ಸುತ್ತುವ; ತಲೆಸುತ್ತಿ – ಬೀಳುವಂತಾಗುವ ಯಾ ಬೀಳುವ; ಗಿರಕಿ ಹೊಡೆಯುವ.
  2. ತಲೆ ತಿರುಗಿಸುವಂತೆ ಮಾಡುವ; ತಲೆ ಗಿರಕಿ ಹೊಡೆಸುವ: a giddy precipice ತಲೆ ತಿರುಗುವಂತೆ ಮಾಡುವ ಪ್ರಪಾತ.
  3. ಗಿರ್ರನೆ ತಿರುಗುವ; ಅತಿವೇಗದಲ್ಲಿ ಸುತ್ತುವ, ತಿರುಗುವ: giddy round of Fortune’s wheel ಗಿರ್ರನೆ ತಿರುಗುವ ಅದೃಷ್ಟ ದೇವತೆಯ ಚಕ್ರದ ಸುತ್ತು, ತಿರುಗು.
  4. (ವ್ಯಕ್ತಿಗಳ ವಿಷಯದಲ್ಲಿ) (ಅಧಿಕಾರ ಮೊದಲಾದ ಕಾರಣದಿಂದ)
    1. ಮದಿಸಿದ; ತಲೆ ತಿರುಗಿದ; ತಲೆ ತಿರುಕ.
    2. ಬುದ್ಧಿಗೆಟ್ಟ; ವಿವೇಚನೆಗೆಟ್ಟ; ದ್ವಾತದ್ವಾ ನಡೆದುಕೊಳ್ಳುವ; ತಿಳಿಗೇಡಿತನ ತೋರಿಸುವ.
  5. ಚಂಚಲ; ಸುಲಭವಾಗಿ ಉತ್ಸಾಹಭರಕ್ಕೆ ಒಳಗಾಗುವ.
  6. ತಿಕ್ಕಲಿನ; ಹುಡುಗಾಟದ; ಐಲುಪೈಲಿನ.
  7. (ಮುಖ್ಯವಾಗಿ ವ್ಯಂಗ್ಯವಾಗಿ) ಆಧಿಕ್ಯ, ತೀವ್ರತೆ ಸೂಚಿಸುವ ಪ್ರಯೋಗ.
ನುಡಿಗಟ್ಟು
  1. my giddy aunt! (ಆಶ್ಚರ್ಯಸೂಚಕ ಉದ್ಗಾರ) ಅಯ್ಯೋ ನನ್ನ ಚಿಕ್ಕಮ್ಮ!
  2. play the giddy goat (or ox) ಶುದ್ಧ ಕುರಿಯಂತೆ ಯಾ ತಿಳಿಗೇಡಿಯಂತೆ ವರ್ತಿಸು; ಹುಚ್ಚುಹುಚ್ಚಾಗಿ ವರ್ತಿಸು.
See also 1giddy
2giddy ಗಿಡಿ
ಸಕರ್ಮಕ ಕ್ರಿಯಾಪದ

ತಲೆ ತಿರುಗುವಂತೆ ಮಾಡು; ತಲೆ ಸುತ್ತಿ ಬೀಳುವಂತೆ ಮಾಡು; ತಲೆ ಗಿರಕಿ ಹೊಡೆಸು: the sight giddied his sense ಆ ದೃಶ್ಯ ಅವನನ್ನು ತಲೆ ಸುತ್ತಿ ಬೀಳುವಂತೆ ಮಾಡಿತು.

ಅಕರ್ಮಕ ಕ್ರಿಯಾಪದ

ತಲೆ – ತಿರುಗು, ಸುತ್ತು; ತಲೆ ಸುತ್ತಿ ಬೀಳುವಂತಾಗು; ತಲೆಸುತ್ತಿ ಬೀಳು; ತಲೆ ಗಿರಕಿ ಹೊಡೆ.