See also 2giant
1giant ಜೈಅಂಟ್‍
ನಾಮವಾಚಕ
  1. ದೈತ್ಯ; ರಾಕ್ಷಸ; ಅಸುರ; ಅಮಾನುಷ ದೇಹಪ್ರಮಾಣವುಳ್ಳ, ಪುರಾಣ ಪ್ರಸಿದ್ಧ ಮನುಷ್ಯರೂಪಿ ವ್ಯಕ್ತಿ.
  2. (ಗ್ರೀಕ್‍ ಪುರಾಣ) ಅಸುರ; ದೈತ್ಯ; ಭೂಮ್ಯಧಿದೇವತೆ, ‘ಗೇಯ’ ಯಾ ಸ್ವರ್ಗಾಧಿದೇವತೆ ‘ಯುರೇನೆಸ್‍’ ಯಾ ನರಕಾಧಿದೇವತೆ ಟಾರ್ಟರಸ್‍ಗೂ ಹುಟ್ಟಿದ ಮಕ್ಕಳಲ್ಲಿ ದೇವತೆಗಳೊಡನೆ ಯುದ್ಧ ಮಾಡಿದವನು.
  3. ಮಹಾಬಲಿ; ಮಹಾಶಕ್ತಿಯುಳ್ಳದ್ದು.
  4. ದೈತ್ಯ; ಭಾರಿ; ಬೃಹದ್ದೇಹಿ; ಅಸಾಧಾರಣ ಎತ್ತರದ ಮನುಷ್ಯ, ಪ್ರಾಣಿ ಯಾ ಸಸ್ಯ.
  5. ರಾಕ್ಷಸ; ದೈತ್ಯ; (ಮಹಾ) ಪ್ರಚಂಡ; ಅಸಾಮಾನ್ಯ ಸಾಮರ್ಥ್ಯ, ಧೈರ್ಯ, ಶಕ್ತಿ, ಮೊದಲಾದವುಗಳುಳ್ಳ ವ್ಯಕ್ತಿ: there were giants in those days ಆ ದಿನಗಳಲ್ಲಿ ನಮಗಿಂತ ಮಹಾಪ್ರಚಂಡರಿದ್ದರು; ನಮ್ಮ ಪೂರ್ವಿಕರು ನಮಗಿಂತ ಬಹಳ ಉತ್ತಮರಾಗಿದ್ದರು.
  6. ದೈತ್ಯ; ರಾಕ್ಷಸ; ಅಸಾಧಾರಣ ಶಕ್ತಿಯುಳ್ಳದ್ದು.
See also 1giant
2giant ಜೈಅಂಟ್‍
ಗುಣವಾಚಕ
  1. ಭೂತಾಕಾರದ; ವಿಪರೀತ ದೊಡ್ಡ ಗಾತ್ರದ.
  2. ರಾಕ್ಷಸೀ; ಅಸಾಧಾರಣ ಬಲದ; ದೈತ್ಯಶಕ್ತಿಯ.
  3. (ಸಸ್ಯದ ವಿಷಯದಲ್ಲಿ) ದೈತ್ಯ; ಅಸಾಧಾರಣ ಗಾತ್ರದ; ವಿಪರೀತ ದೊಡ್ಡ.