See also 2ghost
1ghost ಗೋಸ್ಟ್‍
ನಾಮವಾಚಕ
  1. ಜೀವ (ತತ್ತ್ವ); ಪ್ರಾಣ; ಆತ್ಮ; ಪ್ರಾಣವಾಯು.
  2. ಪವಿತ್ರಾತ್ಮ; ಕ್ರೈಸ್ತರ ತ್ರಿಮೂರ್ತಿ ಕಲ್ಪನೆಯಲ್ಲಿ ಮೂರನೆಯದು.
  3. (ಹೇಡೀಸ್‍ ಎಂಬ ಮೃತಲೋಕ ಮೊದಲಾದವುಗಳಲ್ಲಿರುವ) ಸತ್ತವನ – ಆತ್ಮ, ಪ್ರೇತ.
  4. ಪ್ರೇತ; ಭೂತ; ದೆವ್ವ; ಬದುಕಿರುವವರಿಗೆ ಕಾಣಿಸುವುದೆನ್ನಲಾದ ಸತ್ತವನ ರೂಪ, ಆಕಾರ.
  5. ಹೆಣದತ್ತ; ಜೀವಚ್ಛವ; ನರಪೇತ(ಲ).
  6. ಒಂದಿಷ್ಟು; ಚೂರು; ಲವಲೇಶ: not the ghost of a chance (ಆಗುವ) ಸಂಭವ ಒಂದಿಷ್ಟೂ ಇಲ್ಲ; (ಆಗುವ) ಲಕ್ಷಣವೇ ಇಲ್ಲ.
  7. (ದೃಗ್‍ವಿಜ್ಞಾನ) ಪ್ರೇತ; ಮಸೂರದ ದೋಷದಿಂದಾಗಿ ದೂರದರ್ಶಕದ ದೃಶ್ಯದಲ್ಲಿ ಕಾಣಬರುವ ಪ್ರಕಾಶಮಾನವಾದ ಬೊಟ್ಟು ಯಾ ದ್ವಿತೀಯಕ ಬಿಂಬ.
  8. ಪ್ರೇತಲೇಖಕ; ಭೂತಬರಹಗಾರ; ತನ್ನ ಯಜಮಾನನ ಖ್ಯಾತಿಗಾಗಿ ದುಡಿಯುವ ಬರಹಗಾರ, ಸಾಹಿತಿ.
  9. ಛಾಯೆ; ನೆರಳು; ಪ್ರೇತ; ಅಸ್ಪಷ್ಟ ಆಕೃತಿ ಯಾ ಹೋಲಿಕೆ: he is the ghost of his former self ಈಗ ಅವನು ತನ್ನ ಪೂರ್ವರೂಪದ ಪ್ರೇತ ಮಾತ್ರ.
  10. (ಬಹುವಚನದಲ್ಲಿ) ಪದವನ್ನು ಪೂರ್ಣಗೊಳಿಸದಂತೆ, ಒಬ್ಬೊಬ್ಬನೂ ಒಂದೊಂದು ಅಕ್ಷರವನ್ನು ಸೇರಿಸಿ ಪದವನ್ನು ರಚಿಸುವ ಒಂದು ತೆರನ ಆಟ.
ಪದಗುಚ್ಛ

the Holy Ghost = 1ghost (2).

ನುಡಿಗಟ್ಟು
  1. give up the ghost
    1. ಸಾಯು.
    2. (ಯಾವುದರದೇ ಬಗ್ಗೆ) ಆಸೆಯನ್ನು, ನಂಬಿಕೆಯನ್ನು ಬಿಡು.
  2. lay ghost ಪ್ರೇತವನ್ನು ಅಡಗಿಸು; ಪ್ರೇತ ಕಾಣದಂತೆ ಮಾಡು.
  3. raise ghost ಪ್ರೇತವನ್ನು ಎಬ್ಬಿಸು; ಪ್ರೇತ ಕಾಣುವಂತೆ ಮಾಡು.
  4. the ghost walks (ನಾಟಕ) (ಅಶಿಷ್ಟ) ಸಂಬಳ ಕೊಡುತ್ತಾರೆ, ಸದ್ಯದಲ್ಲಿ ಕೊಡಲಾಗುತ್ತದೆ.
  5. yield up the ghost (ಪ್ರಾಚೀನ ಪ್ರಯೋಗ) = ನುಡಿಗಟ್ಟು \((1)\).
See also 1ghost
2ghost ಗೋಸ್ಟ್‍
ಸಕರ್ಮಕ ಕ್ರಿಯಾಪದ
  1. (ಒಂದು ಸ್ಥಳಕ್ಕೆ ಪ್ರೇತದಂತೆ) ಪದೇ ಪದೇ ಹೋಗುತ್ತಿರು.
  2. ಪ್ರೇತದಂತೆ – ಕಾಡು, ಬೆನ್ನುಹತ್ತು.
ಅಕರ್ಮಕ ಕ್ರಿಯಾಪದ
  1. ಪ್ರೇತದಂತೆ ಸುಳಿದಾಡು.
  2. ಪ್ರೇತಲೇಖನದಲ್ಲಿ ತೊಡಗು; (ಒಬ್ಬನಿಗಾಗಿ) ಪ್ರೆತಲೇಖಕ ಆಗು.