See also 2get
1get ಗೆಟ್‍
ಕ್ರಿಯಾಪದ
[ಭೂತರೂಪ got, (ಪ್ರಾಚೀನ ಪ್ರಯೋಗ) gat; ಭೂತಕೃದಂತ got;

ಸಮಾಸದಲ್ಲಿ, ಪ್ರಾಚೀನ ಪ್ರಯೋಗದಲ್ಲಿ ಮತ್ತು ಅಮೆರಿಕನ್‍ ಪ್ರಯೋಗಗಳಲ್ಲಿ ಮಾತ್ರgotten; ಉದಾಹರಣೆಗೆ illgotten].

ಸಕರ್ಮಕ ಕ್ರಿಯಾಪದ
  1. (ಪ್ರಯತ್ನದಿಂದ, ಉಪಾಯದಿಂದ, ಯಂತ್ರೋಪಕರಣದಿಂದ) ಪಡೆ; ತೆಗೆ; ಹೊಂದು: get coal from mine ಗಣಿಯಿಂದ ಕಲ್ಲಿದ್ದಲನ್ನು (ಅಗೆದು) ತೆಗೆ, ಪಡೆ.
  2. ಗಳಿಸು; ದೊರಕಿಸಿಕೊ; ಸಂಪಾದಿಸು; ಅರ್ಜಿಸು: cannot get a living ಜೀವನೋಪಾಯ ದೊರಕಿಸಿಕೊಳ್ಳುವುದು ಕಷ್ಟ.
  3. ಲಾಭ – ಪಡೆ, ಗಳಿಸು: got little by it ಅದರಿಂದ ಏನೂ ಲಾಭ ಸಿಕ್ಕಲಿಲ್ಲ.
  4. (ಹೇಗಾದರೂ ಮಾಡಿ) ಜಯಗಳಿಸು; (ಏನನ್ನಾದರೂ) ಗೆಲ್ಲು, ಪಡೆ: get fame, credit or glory ಒಳ್ಳೆಯಾ ಹೆಸರು, ಹೆಚ್ಚಳಿಕೆ ಯಾ ಕೀರ್ತಿ ಗಳಿಸು, ಪಡೆ. get runs (ಕ್ರಿಕೆಟ್ಟಿನಲ್ಲಿ)ರನ್ನುಗಳನ್ನು ಗಳಿಸು, ಹೊಡೆ. get wickets (ಕ್ರಿಕೆಟ್ಟಿನಲ್ಲಿ) ವಿಕೆಟ್ಟುಗಳನ್ನು ಪಡೆ, ಉರುಳಿಸು.
  5. ಕಂಠಪಾಠ ಮಾಡು; ಬಾಯಿಪಾಠ ಮಾಡು; ಗಟ್ಟಿಮಾಡು: to get the part without the book ಪುಸ್ತಕವಿಲ್ಲದೆ ಪಾತ್ರದ ಮಾತುಗಳನ್ನು ಗಟ್ಟಿಮಾಡು.
  6. ಲೆಕ್ಕಾಚಾರದ ಫಲವಾಗಿ ಪಡೆ; ಲೆಕ್ಕಾಚಾರದಿಂದ ಪಡೆ: we get 9.5 as the average ಸರಾಸರಿ 9.5ನ್ನು ಪಡೆಯುತ್ತೇವೆ.
  7. (ಕೂಲಿ, ಸಂಬಳ, ಉಡುಗೊರೆ, ಮೊದಲಾದವನ್ನು) ಪಡೆ; ಹೊಂದು; ಗಳಿಸು.
  8. (ಕಾಡಿ, ಬೇಡಿ, ವಿಚಾರಿಸಿ) ಪಡೆ; ಸಿಗು; ಗಿಟ್ಟಿಸು; ಸಂಪಾದಿಸು: could not get leave ಅವನಿಗೆ ರಜ ಸಿಕ್ಕಲಿಲ್ಲ. got his father’s consent to use the car ಮೋಟಾರು ಕಾರನ್ನು ಬಳಸಲು ತಂದೆಯನ್ನು ಕಾಡಿ ಸಮ್ಮತಿ ಗಿಟ್ಟಿಸಿದ.
  9. (ಇಷ್ಟವಾದ ವಸ್ತು ಮೊದಲಾದವನ್ನು) ಪಡೆ; ಪಡೆಯುವಂತಾಗು: get rest ವಿಶ್ರಾಂತಿ ಪಡೆ. get one’s way ತನಗೆ ಬೇಕಾದುದನ್ನು ಸಾಧಿಸಿಕೊ. get speech of (some one) (ಒಬ್ಬರಿಂದ) ಮಾತು ಹೊರಡಿಸು; (ಒಬ್ಬನು) ಮಾತನಾಡುವಂತೆ ಮಾಡು. get a sight of ದರ್ಶನಲಾಭ ಪಡೆ. get possession of ವಶಪಡಿಸಿಕೊ; ಸ್ವಾಧೀನ ಪಡೆ. get religion ಧರ್ಮವನ್ನು ಸ್ವೀಕರಿಸು; ಮತಾಂತರ ಹೊಂದು.
  10. (ಭಾವನೆ ಮೊದಲಾದವುಗಳನ್ನು) ಹಚ್ಚಿಸಿಕೊ; ಹಚ್ಚಿಕೊ; ಅಂಟಿಸಿಕೊ: get measles ದಡಾರ ಅಂಟು; ತಟ್ಟಮ್ಮ ಏಳು.
  11. (ಒಬ್ಬನ ಮೇಲೆ) ಹೊರಿಸು; ವಿಧಿಸು.
  12. (ಪಾಲಿಗೆ ಬಂದ ಅಹಿತ ಮೊದಲಾದವನ್ನು) ಅನುಭವಿಸು: get a fall ಬೀಳು. get a cold ನೆಗಡಿ ಹತ್ತು; ನೆಗಡಿಯಿಂದ ತೊಂದರೆ ಪಡು. get a blow ಏಟು ತಿನ್ನು. get six months in prison ಆರು ತಿಂಗಳು ಸಜ ವಿಧಿಸಲ್ಪಡು.
  13. ಕೊಡಿಸು; ತರಿಸಿಕೊಡು; ಸಿಗುವಂತೆ ಮಾಡು: got him a place ಅವನಿಗೊಂದು ಕೆಲಸ ಕೊಡಿಸಿದ. we can get it for you ನಾವು ಅದನ್ನು ನಿನಗೆ ತರಿಸಿಕೊಡಬಲ್ಲೆವು.
  14. (ಈನು, ಬೇಟೆ, ಪ್ರಾಣಿ, ಮೊದಲಾದವನ್ನು) ಹಿಡಿ: got several trout before breakfast ಬೆಳಗಿನ ಉಪಾಹಾರಕ್ಕೆ ಮುಂಚೆ ಹಲವು ಟ್ರೌಟ್‍ ಈನುಗಳನ್ನು ಹಿಡಿದ.
  15. (ಉದ್ದೇಶಪೂರ್ವಕವಾಗಿ) ಕೊಲ್ಲು ಯಾ ಗಾಯಗೊಳಿಸು.
  16. (ಪೈರು, ಉತ್ಪತ್ತಿ, ಮೊದಲಾದವನ್ನು) ಬೆಳೆ; ಫಸಲು ತೆಗೆ, ಪಡೆ: got a good crop of wheat ಒಂದು ಸೊಗಸಾದ ಗೋದಿ ಫಸಲು ತೆಗೆದ.
  17. (ಪ್ರಸಾರ ಮಾಡಿದ ಸಂಕೇತವನ್ನು) ಗ್ರಹಿಸು.
  18. (ವ್ಯಕ್ತಿ ಯಾ ಸ್ಥಳವನ್ನು) ದೂರವಾಣಿಯ ಮೂಲಕ ಸಂಪರ್ಕಿಸು.
  19. ಪೇಚಿಗೆ ಸಿಕ್ಕಿಸು; ಕಕ್ಕಾಬಿಕ್ಕಿಯನ್ನುಂಟುಮಾಡು; ದಿಗ್ಭ್ರಮೆ ಹಿಡಿಸು; ವಾದದಲ್ಲಿ ಸೋಲಿಸು, ಹಿಡಿದು ಹಾಕು: this problem really gets me ನಿಜವಾಗಿಯೂ ಈ ಸಮಸ್ಯೆ ನನಗೆ ದಿಗ್ಭ್ರಮೆ ಹಿಡಿಸುತ್ತದೆ.
  20. (ಆಡುಮಾತು) (ವ್ಯಕ್ತಿ ಯಾ ವಸ್ತುವನ್ನು) ಅರ್ಥಮಾಡಿಕೊ; ಹಿಡಿ; ಗ್ರಹಿಸು; ತಿಳಿದುಕೊ: sorry, I didn’t get your name ಕ್ಷಮಿಸಿ, ನಿಮ್ಮ ಹೆಸರು ನನಗೆ ಗೊತ್ತಾಗಲಿಲ್ಲ (ಕೇಳಿಸಲಿಲ್ಲ). the audience readily got the speaker’s point ಶ್ರೋತೃಗಳು ಭಾಷಣಕಾರನ ಮಾತಿನ ಅರ್ಥವನ್ನು (ಇಂಗಿತವನ್ನು) ಕೂಡಲೇ ಹಿಡಿದರು. don’t get me wrong ನನ್ನನ್ನು ತಪ್ಪಾಗಿ ಭಾವಿಸಬೇಡ.
  21. (ಆಡುಮಾತು) ರೇಗಿಸು; ಕೆರಳಿಸು; ಕಿರಿಕಿರಿಗೊಳಿಸು: It got me, her talking that way ಅವಳು ಹಾಗೆ ಮಾತಾಡಿದ್ದು ನನ್ನನ್ನು ಕೆರಳಿಸಿತು.
  22. (ಆಡುಮಾತು)ಆಕರ್ಷಿಸು; ಮನಸ್ಸು ಸೆಳೆ; ಗೀಳು ಹುಟ್ಟಿಸು; ಹುಚ್ಚುಹಿಡಿಸು: It’s the rhythm that gets you ಲಯ ನಿನ್ನನ್ನು ಆಕರ್ಷಿಸುವುದು.
  23. (ಆಡುಮಾತು) (ಊಟ, ಉಪಾಹಾರ, ಮೊದಲಾದವನ್ನು) ಸೇವಿಸು; ತೆಗೆದುಕೊ: come and get your tea with us ಬನ್ನಿ, ನಮ್ಮ ಜೊತೆ ಟೀ ತೆಗೆದುಕೊಳ್ಳಿ.
  24. (ಈಗ ಪ್ರಾಣಿಗಳ ವಿಷಯದಲ್ಲಿಮಾತ್ರ beget) ಹುಟ್ಟಿಸು; ಪಡೆ; ಸಂತಾನೋತ್ಪತ್ತಿಮಾಡು.
  25. (ತರುವುದು, ಸಾಗಿಸುವುದು, ಇಡುವುದು, ಒಳಕ್ಕೆ ಬರಮಾಡಿಕೊಳ್ಳುವುದು, ಹೊರಕ್ಕೆ ಕಳುಹಿಸುವುದು, ಮೊದಲಾದವನ್ನು) ಮಾಡು; ಮಾಡಿ ಮುಗಿಸು: got it through the door ಬಾಗಿಲಿನ ಮೂಲಕ ಸಾಗಿಸಿದ್ದಾಯಿತು. got it into the room ಕೊಠಡಿಯ ಒಳಕ್ಕೆ ತಂದದ್ದಾಯಿತು. (ರೂಪಕವಾಗಿ) flattery will get you nowhere ಮುಖಸ್ತುತಿ ನಿನ್ನನ್ನು ಎಲ್ಲಿಗೂ ಕೊಂಡೊಯ್ಯುವುದಿಲ್ಲ, ನಿನಗೆ ಏನೂ ತರುವುದಿಲ್ಲ.
  26. (ಯಾವುದೋ) ಒಂದು ಸ್ಥಿತಿಗೆ ತರು; ಒಂದು ಸ್ಥಿತಿಯನ್ನುಂಟುಮಾಡು: get wet ತೊಯ್ದುಹೋಗು; ಒದ್ದೆಯಾಗು. get them ready (ಅವನ್ನು) ತಯಾರಿಸಿಡು; ಸಿದ್ಧಮಾಡು; (ಅವರನ್ನು) ಸಿದ್ಧರಾಗಿರುವಂತೆ ಮಾಡು. get your hair cut ನಿನ್ನ ತಲೆ ಕ್ಷೌರಮಾಡಿಸಿಕೊ. get it done ಅದನ್ನು ಮಾಡಿ ಮುಗಿಸು. get oneself elected ಚುನಾಯಿತನಾಗು; ಚುನಾಯಿಸಲ್ಪಡು. get him arrested ಅವನನ್ನು ದಸ್ತಗಿರಿ ಮಾಡು.
  27. (ಒಬ್ಬ ವ್ಯಕ್ತಿ ಒಂದು ಕೆಲಸವನ್ನು ಮಾಡುವಂತೆ) ಮನವೊಲಿಸು; ಪ್ರೇರಿಸು; ಒಪ್ಪಿಸು; ಒಡಂಬಡಿಸು; ಪುಸಲಾಯಿಸು: we’ll get him to go with us ನಮ್ಮ ಜೊತೆ ಬರುವಂತೆ ಅವನನ್ನು ಒಪ್ಪಿಸುತ್ತೇವೆ. got the publisher to bring out a new deluxe edition ಗ್ರಂಥದ ಹೊಸ ಶ್ರೀಮಂತ ಆವೃತ್ತಿಯನ್ನು ಪ್ರಕಟಿಸುವಂತೆ ಪ್ರಕಾಶಕನ ಮನವೊಲಿಸಿದ.
  28. (ಊಟ ಮೊದಲಾದವನ್ನು) ತಯಾರಿಸು; ಸಿದ್ಧಪಡಿಸು: get dinner ಊಟ ಸಿದ್ಧಮಾಡು.
  29. ಸೆರೆಹಿಡಿ; ವಶಪಡಿಸಿಕೊ.
  30. ಸೇಡು ತೀರಿಸಿಕೊ; ಪ್ರತೀಕಾರ ಮಾಡು.
  31. (ಭಾವುಕ) ಪರಿಣಾಮ ಬೀರು: her tears got me ಅವಳ ಕಣ್ಣೀರು ನನ್ನ ಮೇಲೆ ಪ್ರಭಾವ ಉಂಟುಮಾಡಿತು, ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿತು.
  32. ಆಗಮಾಡಿಸು; ಯಾರನ್ನೇ ಯಾ ಯಾವುದನ್ನೇ ಕೆಲಸ ಮಾಡುವಂತೆ ಮಾಡು: get the old car going again ಆ ಹಳೆ ಕಾರು ಮತ್ತೆ ಚಲಿಸುವಂತೆ ಮಾಡು.
  33. (ಆಡುಮಾತು) ಹೊಂದಿರು; ಪಡೆದಿರು: have not got a penny ನನ್ನಲ್ಲಿ ಒಂದು ಚಿಕ್ಕಾಸೂ ಇಲ್ಲ.
  34. (ಯಾವುದಾದರೂ) ಒಂದು ಅಂಗ, ಅವಯವ – ಊನ ಮಾಡಿಕೊ, ಘಾಸಿ ಮಾಡಿಕೊ: got my wrist dislocated ನನ್ನ ಮಣಿಕಟ್ಟು ತಿರುಚಿಹೋಯಿತು, ಕೀಲು ತಪ್ಪಿತು.
ಅಕರ್ಮಕ ಕ್ರಿಯಾಪದ
  1. (ಹೋಗಿ ಯಾ ಬಂದು) ತಲಪು; ಸೇರು; ಮುಟ್ಟು: when do we get there? ಯಾವಾಗ ಅಲ್ಲಿ ತಲುಪುತ್ತೇವೆ? where has it got to! ಅದು ಎಲ್ಲಿಗೆ ಮುಟ್ಟಿತು?
  2. (ಅಶಿಷ್ಟ) ಹೊರಡು; ಹೊರಟುಹೋಗು; ತೊಲಗು; ನಿಕಲಾಯಿಸು.
  3. (ಧಾತ್ವರ್ಥವಾಚಿಯೊಡನೆ) ಅಭ್ಯಾಸವಾಗು; ಬಳಕೆಯಾಗು; ರೂಢಿಯಾಗು: one soon gets to like it ಅದು ಬೇಗ ಅಭ್ಯಾಸವಾಗುತ್ತದೆ, ರೂಢಿಯಾಗುತ್ತದೆ.
  4. (ಏನನ್ನಾದರೂ ಆಡಲು ಯಾ ಮಾಡಲು) ತೊಡಗು; ಶುರು ಮಾಡು; ಪ್ರಾರಂಭಿಸು; ಆಡ ಹತ್ತು: they got talking ಅವರು ಮಾತನಾಡತೊಡಗಿದರು. get going ಹೊರಡಲು ಶುರುಮಾಡು.
  5. ಆಗು; ಉಂಟಾಗು: get hot ಬಿಸಿಯಾಗು. get tired ಸುಸ್ತಾಗು. get marriedಮದುವೆಯಾಗು. get shelved ಮೂಲೆಗೆ ಬೀಳು; ಮೂಲೆಗೆ ಹಾಕಿಸು. get used to it (ಅದನ್ನು) ಅಭ್ಯಾಸ, ರೂಢಿ, ಬಳಕೆ – ಮಾಡಿಕೊ. get caught in the rain ಮಳೆಯಲ್ಲಿ ಸಿಕ್ಕಿಬೀಳು; ಸಿಕ್ಕಿಹಾಕಿಕೊ. get in a panic ಗಾಬರಿಯಾಗು; ಗೊಂದಲಕ್ಕೆ ಬೀಳು.
ಪದಗುಚ್ಛ
  1. get about
    1. ಎಡೆಯಿಂದೆಡೆಗೆ ಹೋಗು, ಅಡ್ಡಾಡು.
    2. (ರೋಗ ಗುಣವಾಗಿ) ಎದ್ದು – ಓಡಾಡು, ತಿರುಗಾಡು.
    3. (ಸುದ್ದಿಯ ವಿಷಯದಲ್ಲಿ ಮುಖ್ಯವಾಗಿ ಕರ್ಣಾಕರ್ಣಿಕೆಯಾಗಿ, ಬಾಯಿಂದ ಬಾಯಿಗೆ) ಹರಡು; ಪ್ರಚಾರವಾಗು.
  2. get abroad = ನುಡಿಗಟ್ಟು \((1c)\).
  3. get along
    1. ಮುಂದುವರಿ.
    2. (ಚೆನ್ನಾಗಿಯೋ, ಅಲ್ಲದೆಯೋ, ಹೇಗೋ) ಇರು; ಬಾಳು.
    3. (ಆವಶ್ಯಕವಾದದ್ದು ಇಲ್ಲದಿದ್ದರೂ) ಹೇಗೋ – ನಿರ್ವಹಿಸು, ಸಾವರಿಸಿಕೊಂಡು ಹೋಗು, ಅನುಸರಿಸಿಕೊಂಡು ನಡೆ.
    4. (-ಒಡನೆ) ಸಾಮರಸ್ಯದಿಂದಿರು; ಕೂಡಿಕೊಂಡು, ಹೊಂದಿಕೊಂಡು – ಹೋಗು.
    5. (ರೂಪಕ) ಜಯಗಳಿಸು; ಯಶಸ್ವಿಯಾಗು.
  4. get along with you!
    1. ನಡೆ! ತೊಲಗು!
    2. (ನಿನ್ನ ಮಾತು, ವರ್ತನೆ) ಶುದ್ಧ ಅಸಂಬದ್ಧ!
  5. get away
    1. ತಪ್ಪಿಸಿಕೊಂಡು ಹೋಗು; ತಪ್ಪಿಸಿಕೊ.
    2. ಹೊರಡು.
    3. (ವಿಧಿಯಾಗಿ) ಹೊರಟು ಹೋಗು! ತೊಲಗು! ನಡೆ!
  6. get back
    1. (ಮನೆಗೆ) ಹಿಂದಿರುಗು.
    2. ಕಳೆದುಹೋದದ್ದನ್ನು ಹಿಂದಕ್ಕೆ ಪಡೆ.
    3. (ಆಜ್ಞೆಯಾಗಿ) ಹಿಂದಕ್ಕೆ ಹೋಗು! ಹಿಂದೆ ಇದ್ದ ಜಾಗಕ್ಕೆ ಹೋಗು!
  7. get down
    1. (ವಾಹನದಿಂದ) ಇಳಿ.
    2. ನುಂಗು: the pill was so large that he couldn’t get it down ಗುಳಿಗೆ ನುಂಗಲಾರದಷ್ಟು ದಪ್ಪಗಿತ್ತು.
    3. ಬರವಣಿಗೆಯಲ್ಲಿ ಇಡು, ದಾಖಲು ಮಾಡು.
    4. (ಆಡುಮಾತು) ನಿರುತ್ಸಾಹಗೊಳಿಸು; ಕುಗ್ಗಿಸು; ದಣಿಸು; ಆಯಾಸಪಡಿಸು: nothing gets me down so much as cold ನೆಗಡಿಯಷ್ಟು ನನ್ನನ್ನು ಇನ್ನಾವ ರೋಗವೂ ದಣಿಸುವುದಿಲ್ಲ.
  8. get down to (ಯಾವುದರದೇ ಬಗ್ಗೆ) ಕೆಲಸ ಪ್ರಾರಂಭಿಸು; ಕಾರ್ಯಾರಂಭಮಾಡು; ಕಾರ್ಯಪ್ರವೃತ್ತನಾಗು.
  9. get in
    1. (ಶಾಸನಸಭೆ ಮೊದಲಾದವುಗಳಿಗೆ)ಚುನಾಯಿತನಾಗು.
    2. (ಗಾಡಿ ಮೊದಲಾದವನ್ನು) ಏರು; ಹತ್ತು; ಹೋಗು.
    3. (ಬೆಳೆಯನ್ನು) (ಮನೆಗೆ) ತಂದುಕೊ; ತುಂಬಿಕೊ; ಶೇಖರಿಸು: get in the crops ಫಸಲನ್ನು ಮನೆಗೆ ತಂದು ತುಂಬಿಕೊ.
    4. (ಸಾಲ ಮೊದಲಾದವನ್ನು) ವಸೂಲು ಮಾಡು.
    5. (ಕೆಲಸ ಮೊದಲಾದವನ್ನು) ಗೊತ್ತಾದ ಕಾಲಾವಧಿಗೆ ಹೊಂದಿಸು; ನಿಗದಿಯಾದ ಕಾಲಾವಧಿಯೊಳಗೆ ಮಾಡಿ ಮುಗಿಸು ಯಾ ಮುಗಿಸುವಂತೆ ಏರ್ಪಾಡು ಮಾಡು: we are not bound to get in by a certain date ನಿರ್ದಿಷ್ಟ ತಾರೀಖಿನೊಳಗೆ ಮಾಡಿ ಮುಗಿಸಬೇಕೆಂಬ ನಿರ್ಬಂಧ ನಮಗಿಲ್ಲ.
    6. (ಏಟನ್ನು) ಆಯ ನೋಡಿ ಹೊಡೆ; (ಪರಿಣಾಮಕಾರಿಯಾಗುವಂತೆ) ಹಾಕು: the youngster got in a nasty blow on his opponent’s face ಎದುರಾಳಿಯ ಮೋರೆಯ ಮೇಲೆ ಆ ಹುಡುಗ ಬಲವಾದ ಏಟನ್ನು ಹಾಕಿದ.
    7. (ಬರಬೇಕಾದ ಹಣ, ಸಾಲ, ಮೊದಲಾದವನ್ನು) ವಸೂಲು ಮಾಡು.
    8. (ಕಾಲೇಜು ಮೊದಲಾದವುಗಳಿಗೆ) ಸೇರು.
    9. ಸ್ನೇಹ ಗಳಿಸು.
    10. (ಒಂದು ಸ್ಥಳ) ತಲುಪು; ಸೇರು.
  10. get into (ಆಡುಮಾತು)
    1. (ಪಾದರಕ್ಷೆ, ಬಟ್ಟೆ) ಹಾಕಿಕೊ; ಸಿಕ್ಕಿಸಿಕೊ.
    2. (ಯಾವುದೇ ಒಂದರಲ್ಲಿ)ಆಸಕ್ತಿ ಹುಟ್ಟು; ಮುಳುಗು: ‘What are you reading?’ ‘logic’. ‘I couldn’t get into it’ ‘ನೀನು ಏನು ಓದುತ್ತಿದ್ದೇಯೆ? ‘ತರ್ಕಶಾಸ್ತ್ರ’. ‘ನನಗೆ ಅದರಲ್ಲಿ ಆಸಕ್ತಿಯಿಲ್ಲ.’
    3. (ಮದ್ಯದ ವಿಷಯದಲ್ಲಿ) (ಸಾಮಾನ್ಯವಾಗಿ get into one’s head) ತಲೆಗೇರು; ತಲೆಕೆಡಿಸು; ಬುದ್ಧಿಭ್ರಮಣೆ ಉಂಟುಮಾಡು.
    4. ಹಿಡಿ; ವಶಪಡಿಸಿಕೊ; ಸ್ವಾಧೀನಪಡಿಸಿಕೊ: what’s got into you tonight ಈ ರಾತ್ರಿ ನಿನಗೆ ಏನು ಹಿಡಿದಿದೆ, ನಿನಗೇನಾಗಿದೆ?
  11. get off
    1. (ವಾಹನದಿಂದ) ಇಳಿ; ಕೆಳಕ್ಕಿಳಿ.
    2. (ಯಾವುದೋ ಒಂದು ಜಾಗದಿಂದ) ಆಚೆ ಹೋಗು; ಹೊರಗೆ ನಿಲ್ಲು: get off the grass (ಹುಲ್ಲಿನ ಮೇಲೆ ನಡೆಯಬೇಡ ಎಂಬರ್ಥದಲ್ಲಿ) ಹುಲ್ಲಿನಿಂದಾಚೆ ನಿಲ್ಲಿ.
    3. (ಒಪ್ಪಂದ, ಮಾತು, ಮೊದಲಾದವುಗಳಿಂದ) ಬಿಡುಗಡೆ ಪಡೆ; ವಿಮೋಚನೆ ಹೊಂದು; ವಿಮುಕ್ತನಾಗು.
    4. (ಯಾವುದರಿಂದಲೇ) ಪಾರಾಗು; ತಪ್ಪಿಸಿಕೊ.
    5. (ಪ್ರಯಾಣ, ಕೆಲಸ, ಮೊದಲಾದವನ್ನು) ಪ್ರಾರಂಭಿಸು; ಶುರುಮಾಡು.
    6. ನಿದ್ದೆ – ಮಾಡಹತ್ತು, ಮಾಡಲು ಪ್ರಾರಂಭಿಸು.
    7. ನಿದ್ದೆ ಹೋಗುವಂತೆ, ಪ್ರಾರಂಭಿಸುವಂತೆ ಮಾಡು.
    8. (ಯಾವುದೇ ಶಿಕ್ಷೆಯಿಂದ) ಪಾರಾಗು; ಬಿಡುಗಡೆ ಹೊಂದು.
    9. (ಯಾವುದೇ ಅಪರಾಧಕ್ಕಾಗಿ) ಶಿಕ್ಷೆಯಿಂದ ಸಂಪೂರ್ಣವಾಗಿ ಯಾ ಅಲ್ಪ ಶಿಕ್ಷೆಯೊಡನೆ ಬಿಡುಗಡೆ ಹೊಂದು: he had got off very well with a reprimand ಅವನು ಕೇವಲ ಛೀಮಾರಿಯೊಡನೆ ಪೂರ್ಣವಾಗಿ ಬಿಡುಗಡೆ ಪಡೆದ.
    10. (ಶಿಕ್ಷೆಯಿಂದ) ತಪ್ಪಿಸು; ಪಾರುಮಾಡು; ಬಿಡುಗಡೆ ದೊರಕಿಸು.
    11. (ಕಾಗದ ಮೊದಲಾದವನ್ನು) ರವಾನಿಸು.
  12. get on
    1. (ಕುದುರೆ, ಸೈಕಲ್ಲು, ಮೊದಲಾದವನ್ನು) ಹತ್ತು; ಏರು.
    2. (ಉಡುಪು ಮೊದಲಾದವನ್ನು) ಹಾಕಿಕೊ; ಧರಿಸು; ಏರಿಸು.
    3. (ವೇಗವನ್ನು) ಪಡೆ; ಹೆಚ್ಚಿಸು.
    4. ಮುಂದುವರಿ; ಮುಂದಕ್ಕೆ ಚಲಿಸು; ಹೆಜ್ಜೆಹಾಕು.
    5. ಮುಂದುವರಿ; ಪ್ರಗತಿಪಡೆ.
    6. ಏಳಿಗೆಹೊಂದು; ಅಭಿವೃದ್ಧಿ ಪಡೆ: get on in the world ಐಶ್ವರ್ಯ, ಅಧಿಕಾರ ಗಳಿಸು.
    7. (ಯಾವುದಾದರೂ ರೀತಿಯಲ್ಲಿ) ಇರು; ಆಗು: tell me how you got on up there ಅಲ್ಲಿ ನೀನು ಹೇಗೆ ಇದ್ದೆ ಎನ್ನುವುದನ್ನು ನನಗೆ ಹೇಳು.
    8. (ಗಾಡಿ, ರೈಲು, ಬಸ್ಸು, ಮೊದಲಾದವನ್ನು) ಹತ್ತು; ಏರು; ಹೋಗು.
  13. go on one’s feet to speak (in public) (ಸಭೆಯಲ್ಲಿ ಮಾತನಾಡಲು) ಎದ್ದು ನಿಲ್ಲು; ಮೇಲೇಳು.
  14. get on one’s legs to speak in public = ಪದಗುಚ್ಛ \((13)\).
  15. get on something etc. about (person) (ವ್ಯಕ್ತಿಯೊಬ್ಬನ ಮೇಲೆ ತಪ್ಪು ಅಪರಾಧ ಹೊರಿಸುವ) ಯಾವುದನ್ನಾದರೂ ಕಂಡುಹಿಡಿ, ಕಂಡುಕೊ.
  16. get on or get out ಕೆಲಸಮಾಡು, ಇಲ್ಲದಿದ್ದರೆ ನಡೆ, ಹೊರಟುಹೋಗು.
  17. get on with
    1. ಒಡನೆ ಕೂಡಿಕೊಂಡು, ಹೊಂದಿಕೊಂಡು – ಹೋಗು.
  18. get on without (something) (ಆವಶ್ಯಕವಾದದ್ದು ಇಲ್ಲದಿದ್ದರೂ) ಸಾವರಿಸಿಕೊಂಡು ಹೋಗು.
  19. get out
    1. (ಆಡುಮಾತು) (ವಿಧಿ ರೂಪ) ಹೊರಡು; ತೊಲಗು.
    2. (ಹವಾಮಾನ ಮೊದಲಾದವು) ಆಗು; ಉಂಟಾಗು; ಸಂಭವಿಸು: the afternoon got out very well ಮಧ್ಯಾಹ್ನ ಹವಾ ತುಂಬ ಉತ್ತಮವಾಯಿತು.
    3. (ಒಬ್ಬರಿಂದ ಸಮಾಚಾರ) ಹೊರಡಿಸು; ಹೊರತೆಗೆ.
    4. ಪ್ರಯತ್ನದಿಂದ ಉಚ್ಚರಿಸು.
    5. ಪ್ರಕಟಿಸು.
    6. (ಕ್ರಿಕೆಟ್‍) (ಒಬ್ಬನನ್ನು)ಔಟ್‍ ಮಾಡು ಯಾ (ಒಬ್ಬನು) ಔಟಾಗು.
    7. (ಸಮಸ್ಯೆ) ಬಿಡಿಸು.
    8. ಮನೆ ಬಿಡು; ಮನೆಯಿಂದ ಹೊರಡು, ನಿರ್ಗಮಿಸು.
    9. ವಾಹನದಿಂದ ಇಳಿ.
  20. get out of hand
    1. ಕೈಈರಿ ಹೋಗು; ಹತೋಟಿ ತಪ್ಪಿಹೋಗು.
    2. (ಕೆಲಸ ಮೊದಲಾದವನ್ನು) ಪೂರೈಸಿಬಿಡು; ಮಾಡಿ ಮುಗಿಸಿಬಿಡು.
  21. get out of sight ಕಣ್ಮರೆಯಾಗು; ಕಾಣದೆ ಹೋಗು.
  22. get over
    1. (ಕಷ್ಟದ ಕೆಲಸವನ್ನು) ಕೊನೆಗಾಣಿಸು; ಕೊನೆ ಮುಟ್ಟಿಸು.
    2. (ಕಷ್ಟ ಮೊದಲಾದವನ್ನು) ದಾಟು; ಕಷ್ಟದಿಂದ ಪಾರಾಗು.
    3. (ರುಜುವಾತು, ವಾದ, ಮೊದಲಾದವನ್ನು) ತಪ್ಪೆಂದು ತೋರಿಸು; ಅಸಮಂಜಸವೆಂದು, ಒಪ್ಪಿಗೆಯಾಗದೆಂದು – ತೋರಿಸು.
    4. (ರೋಗದಿಂದ) ಪಾರಾಗು; ಗುಣಹೊಂದು.
    5. (ಆಶ್ಚರ್ಯದಿಂದ, ದಿಗ್ಭ್ರಮೆಯ ಸ್ಥಿತಿಯಿಂದ) ಎಚ್ಚೆತ್ತುಕೊ.
    6. (ದಾರಿಯನ್ನು) ನಡೆದು ಮುಗಿಸು.
    7. (ಅಶಿಷ್ಟ) ಸಿಕ್ಕಿಸಿಕೊ; ಉಪಾಯದಿಂದ ಬಲೆಗೆ ಕೆಡವು.
    8. (ಅಶಿಷ್ಟ) ಉಪಾಯದಿಂದ – ತಪ್ಪಿಸಿಕೊ, ನುಣುಚಿಕೊ.
  23. get round
    1. ಒಪ್ಪಿಸು; ಒಡಂಬಡಿಸು.
    2. (ಉಪಾಯ ಮಾಡಿ) ತಪ್ಪಿಸಿಕೊ; ಕೈಯಿಂದ ನುಣುಚಿಕೊ.
    3. (ಸುದ್ದಿಯ ವಿಷಯದಲ್ಲಿ) = ಪದಗುಚ್ಛ \((1c)\).
  24. get through
    1. ಮುಗಿಸು; ಸಮಾಪ್ತಿಗೊಳಿಸು; ಕೊನೆ ಮುಟ್ಟಿಸು.
    2. (ಮಸೂದೆ ಮೊದಲಾದವು ಶಾಸನಸಭೆಯಲ್ಲಿ) ಅಂಗೀಕೃತವಾಗು; ಒಪ್ಪಿಗೆ, ಅಂಗೀಕಾರ – ಪಡೆ.
    3. (ಹಣವನ್ನು) ಖರ್ಚುಮಾಡಿ ಮುಗಿಸು.
    4. (ಕಾಲ ಮೊದಲಾದವನ್ನು) ಕಳೆ; ವ್ಯಯ ಮಾಡು.
    5. (ಪರೀಕ್ಷೆಯಲ್ಲಿ) ತೇರ್ಗಡೆಯಾಗು.
    6. (ರೇಡಿಯೋ ಯಾ ದೂರವಾಣಿಯ ಮೂಲಕ) ಸಂಪರ್ಕಿಸು.
  25. get through with ಮಾಡಿ ಮುಗಿಸು; ನಿಭಾಯಿಸು.
  26. get to
    1. (ಕೆಲಸ ಮೊದಲಾದವನ್ನು) ಆರಂಭಿಸು.
    2. (ಕೆಲಸ ಮೊದಲಾದವನ್ನು) ಮಾಡುವುದರಲ್ಲಿ ಯಶಸ್ವಿಯಾಗು.
    3. ತಲುಪು; ಸೇರು.
  27. get together
    1. (ವಾದ, ಯೋಜನೆಯ ಕಾರ್ಯಾಚರಣೆ, ಮೊದಲಾದವುಗಳಲ್ಲಿ) ಕೂಡು; ಒಟ್ಟಾಗು; ಒಟ್ಟುಗೂಡು; ಒಟ್ಟು ಸೇರು.
    2. (ವಾದ, ಯೋಜನೆಯ ಕಾರ್ಯಾಚರಣೆ, ಮೊದಲಾದವುಗಳಲ್ಲಿ) ಕೂಡಿಸು; ಒಟ್ಟು ಸೇರಿಸು; ಒಟ್ಟುಗೂಡಿಸು.
    3. (ಅಶಿಷ್ಟ) ವ್ಯವಸ್ಥೆಗೊಳಿಸು; ಕ್ರಮದಲ್ಲಿ ಸಂಯೋಜಿಸು.
  28. get up
    1. (ಮುಖ್ಯವಾಗಿ ಹಾಸಿಗೆಯಿಂದ) ಏಳು; ಎದ್ದೇಳು.
    2. (ಮುಖ್ಯವಾಗಿ ಕುದುರೆಯ ಮೇಲೆ) ಏರು; ಹತ್ತು.
    3. (ಬೆಂಕಿ, ಗಾಳಿ, ಕಡಲು) ಜೋರಾಗು; ಬಿರುಸಾಗು; ರಭಸಗೊಳ್ಳು.
    4. (ಬೇಟೆಯ ಪ್ರಾಣಿ) ಮರೆಬಿಟ್ಟು ಹೊರಡು; ಮರೆಯಿಂದಾಚೆ ಓಡು.
    5. (ಕ್ರಿಕೆಟ್‍ ಚೆಂಡು) ಬಿರುಸಿನಿಂದ ಪುಟವೇಳು.
    6. ಅಣಿಮಾಡು; ಸಜ್ಜುಗೊಳಿಸು; ವ್ಯವಸ್ಥೆಗೊಳಿಸು.
    7. ಸಿದ್ಧಮಾಡು; ಏರ್ಪಾಟುಮಾಡು.
    8. (ಬಟ್ಟೆ) ತೊಡಲು ಸಿದ್ಧಗೊಳಿಸು.
    9. ಚೆಂದಗಾಣಿಸು.
    10. (ಕೂದಲನ್ನು, ವ್ಯಕ್ತಿಯನ್ನು, ನಾಟಕದಲ್ಲಿ ವೇಷವನ್ನು, ಪುಸ್ತಕ ಮುದ್ರಣ, ರಟ್ಟು, ಮೊದಲಾದವನ್ನು) ಅಂದಗೊಳಿಸು; ಚೆನ್ನಾಗಿ ರೂಪಿಸು: she was got up like a filmstar ಅವಳನ್ನು ಸಿನಿಮಾತಾರೆಯಂತೆ ಸಿಂಗರಿಸಲಾಗಿತ್ತು.
    11. ಮೇಲಕ್ಕೆತ್ತು; ಏಳಿಸು; ಎಬ್ಬಿಸು; ಎದ್ದು ನಿಲ್ಲುವಂತೆ ಮಾಡು.
    12. ಉಂಟುಮಾಡು: get up speed ವೇಗಗೊಳಿಸು; ವೇಗ ಹೆಚ್ಚಿಸು.
    13. (ಕೃತಕವಾದ ಭಾವ, ಉದ್ರೇಕ) ಎಬ್ಬಿಸು; ಪ್ರಚೋದಿಸು.
    14. (ಪರೀಕ್ಷೆಯ ವಿಷಯ ಮೊದಲಾದವಕ್ಕೆ) ತಯಾರಾಗು; ಸಿದ್ಧವಾಗು; ಆವಶ್ಯಕವಾದ ಜ್ಞಾನ ಸಂಪಾದಿಸು; ಕಷ್ಟಪಟ್ಟು ಓದು; ಅಧ್ಯಯನ ಮಾಡು: what subjects have you to get up for the exam? ಪರೀಕ್ಷೆಗೆ ನೀನು ಯಾವ ವಿಷಯಗಳನ್ನು ಓದಬೇಕು? ಯಾವ ವಿಷಯಗಳಿಗೆ ತಯಾರಾಗಬೇಕು?
  29. get upon = ಪದಗುಚ್ಛ \((12)\).
  30. get up to (ಕೀಟಲೆ ಮೊದಲಾದವುಗಳಲ್ಲಿ) ತೊಡಗು.
  31. get well
    1. ಅಭಿವೃದ್ಧಿಗೆ ಬರು.
    2. ಆರೋಗ್ಯ ಸುಧಾರಿಸು; ಗುಣಮುಖನಾಗು.
  32. has got ಹೊಂದಿರು; ಪಡೆದಿರು: have not got a penny ಒಂದು ಪೆನ್ನಿಯೂ ಇಲ್ಲ.
  33. has got to = must: It has got to be done ಅದನ್ನು ಮಾಡಿಯೇ ತೀರಬೇಕು.
ನುಡಿಗಟ್ಟು
  1. be getting on for (or to) (ಒಂದು ವಯಸ್ಸು, ಸಂಖ್ಯೆ, ಮೊದಲಾದವನ್ನು) ಮುಟ್ಟು; ಸಈಪಿಸು: an over crowded population getting on to 90 million ತೊಂಬತ್ತು ಮಿಲಿಯನ್ನನ್ನು ಮುಟ್ಟುತ್ತಿರುವ ದಟ್ಟ ಜನಸಂಖ್ಯೆ.
  2. be getting on towards = ನುಡಿಗಟ್ಟು \((1)\).
  3. get across
    1. (ಆಡುಮಾತು) ಪರಿಣಾಮಕಾರಿಯಾಗಿರು; ಪ್ರಭಾವಬೀರು.
    2. ಪರಿಣಾಮಕಾರಿಯನ್ನಾಗಿ ಮಾಡು; ಪ್ರಭಾವಕಾರಿಯಾಗಿಸು.
    3. ಸಮ್ಮತವಾಗು; ಒಪ್ಪಿಗೆಯಾಗು.
    4. ಒಪ್ಪುವಂತಾಗಿಸು; ಮ್ಮತವಾಗುವಂತೆ ಮಾಡು.
    5. (ಅಶಿಷ್ಟ) ರೇಗಿಸು; ಕಿರಿಕಿರಿಯುಂಟುಮಾಡು.
    6. ಅರ್ಥವಾಗು ಯಾ ಅರ್ಥವಾಗಿಸು: I spoke slowly, but my meaning did not get across ನಾನು ನಿಧಾನವಾಗಿ ಮಾತಾಡಿದೆ, ಆದರೂ ನನ್ನ ಅರ್ಥ ಶ್ರೋತೃಗಳಿಗೆ ತಿಳಿಯಲಿಲ್ಲ, ನನ್ನ ಉದ್ದೇಶ ಅರ್ಥವಾಗಲಿಲ್ಲ.
  4. get around (ಅಮೆರಿಕನ್‍ ಪ್ರಯೋಗ)
    1. ಊರೂರು ಅಲೆಯುತ್ತಿರು; ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುತ್ತುತ್ತಿರು.
    2. ಗೊತ್ತಾಗು; ಪ್ರಚಲಿತವಾಗು; ತಿಳಿ: sooner or later everybody’s business gets around ಇವತ್ತಲ್ಲ ನಾಳೆ ಪ್ರತಿಯೊಬ್ಬರ ವ್ಯವಹಾರವೂ ಗೊತ್ತಾಗುತ್ತದೆ.
    3. (ಸುದ್ದಿಯ ವಿಷಯದಲ್ಲಿ) (ಮುಖ್ಯವಾಗಿ ಬಾಯಿಂದ ಬಾಯಿಗೆ) ಹರಡು; ಪ್ರಚಾರವಾಗು.
  5. get at
    1. ಮುಟ್ಟು; ಸೇರು; ತಲುಪು.
    2. ಎಟುಕಿಸಿಕೊ (ರೂಪ ಸಹ).
    3. (ವಿಚಾರಿಸಿ) ಕಂಡುಹಿಡಿ.
    4. (ಅಶಿಷ್ಟ) ಹಸ್ತಕ್ಷೇಪ ನಡೆಸು; ನ್ಯಾಯವಿರುದ್ಧವಾಗಿ ಪ್ರವರ್ತಿಸು.
    5. (ಅಶಿಷ್ಟ) ಲಂಚಕೊಡು.
    6. (ಅಶಿಷ್ಟ) ಖಂಡಿಸು: the author’s burning anxiety to get at capital ಬಂಡವಾಳಶಾಹಿಯನ್ನು ಖಂಡಿಸಬೇಕೆಂಬ ಗ್ರಂಥಕರ್ತನ ಉತ್ಕಟೇಚ್ಛೆ.
    7. (ಅಶಿಷ್ಟ) ಕುಚೋದ್ಯ ಮಾಡು; ಗೇಲಿಮಾಡು: who are you getting at? ಯಾರನ್ನು ಕುಚೋದ್ಯ ಮಾಡುತ್ತಿದ್ದೀಯೆ? (ಅನೇಕ ವೇಳೆ) ಯಾರನ್ನು ವಂಚಿಸುತ್ತಿದ್ದೀಯೆ? (ಹಾಗೆ ವಂಚಿಸಲು ಸಾಧ್ಯವಿಲ್ಲ ಎಂಬ ಅರ್ಥದಲ್ಲಿ).
    8. (ಆಡುಮಾತು) ಇಂಗಿತಕೊಡು; ಅಭಿಪ್ರಾಯ ಸೂಚಿಸು: what are you getting at? ನಿನ್ನ ಇಂಗಿತವಾದರೂ ಏನು?
  6. get away with it (ಆಡುಮಾತು)
    1. (ಕೆಲಸದ ವಿಷಯದಲ್ಲಿ) (ಸಿಕ್ಕಿಬೀಳದೆ ಯಾ ಕಷ್ಟನಷ್ಟಗಳಿಗೆ ಒಳಗಾಗದೆ) ಮಾಡುವ ಪ್ರಯತ್ನದಲ್ಲಿ ಜಯಶೀಲನಾಗು, ಯಶಸ್ವಿಯಾಗು.
    2. (ಕೊಲೆ ಮೊದಲಾದವುಗಳ ವಿಷಯದಲ್ಲಿ) ಪ್ರತೀಕಾರ, ದಂಡ, ಶಿಕ್ಷೆ – ತಪ್ಪಿಸಿಕೊ.
    3. ಹೆದರದೆ, ಹೇಸದೆ, ಧಾರ್ಷ್ಟ್ಯದಿಂದ ವರ್ತಿಸು, ನಡೆದುಕೊ, ನಿಭಾಯಿಸು, ಕೆಲಸ ಮಾಡು, ಕಾರ್ಯನಿರ್ವಹಿಸು.
  7. get back at
    1. (ಆಡುಮಾತು) (ಒಬ್ಬನ ಮೇಲೆ) (ಮಾಡಿದ್ದಕ್ಕೆ, ಆಗಿದ್ದಕ್ಕೆ) ಪ್ರತಿಮಾಡು; ಮುಯ್ಯಿ ತೀರಿಸು.
    2. (ಆಡುಮಾತು) (ಒಬ್ಬನ ಮೇಲೆ) ಪ್ರತ್ಯಾರೋಪ, ಪ್ರತ್ಯಾಪಾದನೆ ಹೊರಿಸು.
  8. get back some of one’s own (ಅಶಿಷ್ಟ) ಸೇಡು, ಮುಯ್ಯಿ ತೀರಿಸಿಕೊ; ಪ್ರತೀಕಾರ ಮಾಡು; ತಕ್ಕ ಶಾಸ್ತಿ ಮಾಡು.
  9. get better ಆರೋಗ್ಯ ಸುಧಾರಿಸು; ಕಾಯಿಲೆಯಿಂದ ಗುಣಮುಖನಾಗು.
  10. get by (ಆಡುಮಾತು)
    1. (ಸರಿಯಾಗಿ) ಸಾಕಾಗುವಷ್ಟಿರು.
    2. (ಯಾವುದೇ ಇಲ್ಲದೆ ಹೋದರೂ, ಮಾಡಬೇಕಾದ್ದನ್ನು) ನಿರ್ವಹಿಸು; ನಿಭಾಯಿಸು.
  11. get by heart ಕಂಠಪಾಠ ಮಾಡು; ಬಾಯಿಪಾಠ ಮಾಡು; ಕಲಿ; ಗಟ್ಟಿಮಾಡು.
  12. get by rote = ನುಡಿಗಟ್ಟು \((11)\).
  13. get his (or theirs) (ಅಶಿಷ್ಟ) ಕೊಲೆಯಾಗು; ಕೊಲೆಗೀಡಾಗು: He’ll get his one of these days ಅವನು ಇನ್ನು ಕೆಲವೇ ದಿವಸಗಳಲ್ಲಿ ಕೊಲೆಗೀಡಾಗುತ್ತಾನೆ.
  14. get it ಬೈಗುಳ ತಿನ್ನು; ಶಿಕ್ಷೆಗೆ, ಆಕ್ಷೇಪಣೆಗೆ ಗುರಿಯಾಗು.
  15. get it into one’s head (ಮನಸ್ಸಿನಲ್ಲಿ) ಅಂದುಕೊ; ಅಂದುಕೊಂಡುಬಿಡು; ಭಾವಿಸು.
  16. get knowledge of (ಒಂದು ವಿಷಯದ ಬಗ್ಗೆ) ಸುದ್ದಿ ಕೇಳು; ಸುಳಿವುಪಡೆ; ಗಾಳಿ ವರ್ತಮಾನ ಕೇಳು.
  17. get off with (ಆಡುಮಾತು) ವಿರುದ್ಧಲಿಂಗದ ವ್ಯಕ್ತಿಯೊಡನೆ ಸ್ನೇಹದಿಂದ ಯಾ ಪ್ರಣಯದಿಂದ ವರ್ತಿಸು.
  18. get on one’s nerves ತಲೆಚಿಟ್ಟು ಹಿಡಿಸು; (ಒಬ್ಬನನ್ನು) ಸಿಡಿಮಿಡಿಗೊಳಿಸು.
  19. get on to
    1. (ಆಡುಮಾತು) ಅರ್ಥಮಾಡಿಕೊ; ತಿಳಿದುಕೊ; ಅರ್ಥವನ್ನು ಹಿಡಿ, ಗ್ರಹಿಸು: he soon got on to the racket they were working ಅವರು ನಡೆಸುತ್ತಿದ್ದ ಹಂಚಿಕೆಯನ್ನು ಅವನು ಬೇಗ ತಿಳಿದುಕೊಂಡ.
    2. (ಆಡುಮಾತು) (ವ್ಯಕ್ತಿಯನ್ನು ಉದಾಹರಣೆಗೆ ಟೆಲಿಹೋನ್‍ ಮೂಲಕ) ಸಂಪರ್ಕಿಸು: if you are not satisfied with us, get on to the manager ನಾವು ನಿಮಗೆ ಹಿಡಿಸದಿದ್ದರೆ, ನಿಮಗೆ ತೃಪ್ತಿ ನೀಡದಿದ್ದರೆ ಮ್ಯಾನೇಜರನ್ನು ಸಂಪರ್ಕಿಸಿ.
  20. get (one) with child ಬಸಿರುಮಾಡು.
  21. get one’s hand in (ಒಂದು ಕೆಲಸದಲ್ಲಿ) ಕೈ ಕುದುರಿಸಿಕೊ; ಪಳಗು: you won’t find it difficult, once you get your hand in it ಕೈಕುದುರಿದರೆ ತೀರಿತು, ನಿನಗೇನೂ ಕಷ್ಟವಾಗುವುದಿಲ್ಲ.
  22. get out of
    1. (ಅಭ್ಯಾಸ ಮೊದಲಾದವನ್ನು) ಕ್ರಮೇಣ ಬಿಟ್ಟುಬಿಡು.
    2. (ಮಾಡದೆ) ತಪ್ಪಿಸಿಕೊ.
    3. (ಒಬ್ಬನಿಂದ) ಹಣ, ದುಡ್ಡು – ಕೀಳು, ವಸೂಲಿಮಾಡು.
  23. get out of one’s depth ತನ್ನ ಆಳ ಈರಿ ಹೋಗು; ತನ್ನ ಕೈಲಾಗದ ಕೆಲಸಕ್ಕೆ ಕೈಹಾಕು.
  24. get over = ನುಡಿಗಟ್ಟು \((3)\).
  25. get person or thing on the brain ಒಂದೇ ವ್ಯಕ್ತಿ ಯಾ ವಿಷಯವನ್ನು ಕುರಿತು ಯಾವಾಗಲೂ ಚಿಂತಿಸು.
  26. get quit of = ನುಡಿಗಟ್ಟು \((27)\).
  27. get rid of ತಪ್ಪಿಸಿಕೊ; ತೊಲಗಿಸಿಕೊ; ಪಾರಾಗು.
  28. get round to (ಯಾವುದನ್ನೇ ಮಾಡಲು) ಕಾಲ, ಶಕ್ತಿ, ಯಾ ಒಲವನ್ನು ಪಡೆದುಕೊ.
  29. get the advantage of a person (ಒಬ್ಬನನ್ನು) ಈರಿಸು; (ಒಬ್ಬನಿಗೆ) ಮೇಲುಗೈ ಆಗು.
  30. get the best of it ಗೆಲ್ಲು; ಜಯಶೀಲನಾಗು.
  31. get the better of a person = ನುಡಿಗಟ್ಟು \((29)\).
  32. get the $^1$boot.
  33. get the mitten ಕೆಲಸದಿಂದ ತೆಗೆದುಹಾಕಲ್ಪಡು.
  34. get there (ಅಶಿಷ್ಟ)
    1. ಯಶಸ್ವಿಯಾಗು; ಜಯಗಳಿಸು.
    2. ಅರ್ಥ, ಸೂಚನೆ – ಗ್ರಹಿಸು; ಇಂಗಿತ ತಿಳಿದುಕೊ.
  35. get the sack ಕೆಲಸ ಕಳೆದುಕೊ; ಕೆಲಸದಿಂದ ವಜಾ ಆಗು.
  36. get the start of a person = ನುಡಿಗಟ್ಟು \((29)\).
  37. get the sun of a person = ನುಡಿಗಟ್ಟು \((29)\).
  38. get the upper hand of a person = ನುಡಿಗಟ್ಟು \((29)\).
  39. get the wind of a person = ನುಡಿಗಟ್ಟು \((29)\).
  40. get the wind up (ಅಶಿಷ್ಟ) ಭಯಪಡು; ಹೆದರು.
  41. get to do (ಅಮೆರಿಕನ್‍ ಪ್ರಯೋಗ) ಮಾಡಿ ಮುಗಿಸು; ಮಾಡುವುದರಲ್ಲಿ ಯಶಸ್ವಿಯಾಗು.
  42. get together
    1. ಸಂಗ್ರಹಿಸು; ಸಂಗ್ರಹವಾಗು.
    2. ಚರ್ಚೆಯಲ್ಲಿ, ಯೋಜನೆ ಮೊದಲಾದವನ್ನು ಈಡೇರಿಸುವಲ್ಲಿ – ಒಂದಾಗು.
    3. (ಅಶಿಷ್ಟ) ಕ್ರಮವಾಗಿಡು; ಸುವ್ಯವಸ್ಥೆಗೊಳಿಸು.
  43. get under (ಬೆಂಕಿ) ಆರಿಸು; ಹತೋಟಿಗೆ ತರು; ಅಡಗಿಸು.
  44. get under way
    1. ಹೊರಡುವಂತೆ, ಚಲಿಸುವಂತೆ ಮಾಡು: get ship under way ಹಡಗನ್ನು ಚಾಲನೆ ಮಾಡು.
    2. ಪ್ರಾರಂಭವಾಗು.
  45. get used to it ಅದಕ್ಕೆ ಹೊಂದಿಕೊ; ಅದನ್ನು ರೂಢಿಸಿಕೊ.
  46. get well = ನುಡಿಗಟ್ಟು \((9)\).
  47. get wind (ಸಮಾಚಾರ ಮೊದಲಾದವು) ಹರಡು; ಪ್ರಸಾರವಾಗು; ಎಲ್ಲರಿಗೂ ಗೊತ್ತಾಗು.
  48. get wind of = ನುಡಿಗಟ್ಟು \((16)\).
  49. get wise to ಅರಿವಾಗು; ಮನವರಿಕೆಯಾಗು.
  50. got out of $^2$bed on wrong side.
  51. have got it bad (or badly) (ಅಶಿಷ್ಟ) ಮೋಹಪರವಶನಾಗಿರು; ಮೋಹಕ್ಕೆ ಬಿದ್ದಿರು; ಗೀಳು ಹತ್ತಿರು; ಹುಚ್ಚು ಹಿಡಿದಿರು.
  52. to get another’s back up
    1. ರೇಗಿಸು; ರೇಗುವಂತೆ ಮಾಡು.
    2. ಹಟ, ಮುಷ್ಕರ ಹಿಡಿಯುವಂತೆ ಮಾಡು.
  53. to get one’s back up
    1. ರೇಗಿ ಬೀಳು.
    2. ಹಟ, ಮುಷ್ಕರ – ಹಿಡಿ.
See also 1get
2get ಗೆಟ್‍
ನಾಮವಾಚಕ
  1. (ಮುಖ್ಯವಾಗಿ ಬೇಟೆಯ ಭಾಷೆಯಲ್ಲಿ, ಪ್ರಾಣಿಗಳ ವಿಷಯದಲ್ಲಿ)
    1. ಈನುವುದು; ಸಂತಾನೋತ್ಪತ್ತಿ.
    2. ಸಂತಾನ; ಸಂತತಿ.
  2. (ಬ್ರಿಟನ್‍) (ಅಶಿಷ್ಟ) ಸಂಪಾದನೆ; ಆದಾಯ; ವರಮಾನ; ಸಂಬಳ, ಲಾಭ, ಮೊದಲಾದವು: what is your week’s get? ವಾರದಲ್ಲಿ ನಿನ್ನ ಸಂಪಾದನೆ ಎಷ್ಟು?
  3. (ಅಶಿಷ್ಟ) ದಡ್ಡ; ಮುಟ್ಠಾಳ.