gestalt ಗಸ್ಟಾಲ್ಟ್‍
ನಾಮವಾಚಕ
  1. ಸಮಗ್ರಸಮಷ್ಟಿ; ತನ್ನ ಅವಯವಗಳ, ಅಂಗಭಾಗಗಳ ಯಾ ಘಟಕಾಂಶಗಳ ಬರಿ ಸಂಕಲನ ಯಾ ಮೊತ್ತಕ್ಕಿಂತಲೂ ಹೆಚ್ಚಿನದಾಗಿರುವುದಾಗಿ– ಉದಾಹರಣೆಗೆ ತನ್ನ ಘಟಕಗಳಾದ ಬಿಡಿ ಸ್ವರಗಳಿಗಿಂತಲೂ ಭಿನ್ನವಾಗಿ ತೋರುವ ರಾಗದಂತೆ ಗ್ರಹಿಸಲ್ಪಡುವ ಸುವ್ಯವಸ್ಥಿತ ಪೂರ್ಣಾಕೃತಿ, ಪೂರ್ಣರೂಪ; ತನ್ನ ಘಟಕಾಂಶಗಳ ಕೇವಲ ಮೊತ್ತದಿಂದ ಪಡೆಯಲಾಗದ ವಿಶಿಷ್ಟ ಗುಣಲಕ್ಷಣವನ್ನು ಹೊಂದಿರುವ ಆಕೃತಿ, ವಿನ್ಯಾಸ ಯಾ ವ್ಯವಸ್ಥಿತ ರಚನೆ.
  2. ಅಂಥ ಸಮಗ್ರ ಸಮಷ್ಟಿಯ ಒಂದು ನಿದರ್ಶನ.