See also 2germ
1germ ಜರ್ಮ್‍
ನಾಮವಾಚಕ
  1. ಜೀವಾಂಕುರ; ಹೊಸ ಜೀವಿವ್ಯಕ್ತಿಯಾಗಿ ರೂಪುಗೊಳ್ಳಬಲ್ಲ ಜೀವಿಯ ಭಾಗ (ಬೀಜ, ಮೊಗ್ಗು, ಕೊಂಬೆ, ಮೊದಲಾದವು).
  2. ಅಂಕುರ; ಮೊಳಕೆ; ಅಗೆ; ಜೀವಿಯ ಮುಮ್ಮೊದಲ ರೂಪ.
  3. ಸೂಕ್ಷ್ಮಜೀವಿ; ಸೂಕ್ಷ್ಮಜೀವಾಣು, ಮುಖ್ಯವಾಗಿ ರೋಗಾಣು.
  4. (ರೂಪಕವಾಗಿ) ಮೂಲ; ಮೂಲ ಕಾರಣ; ಯಾವುದೇ ಒಂದು ಹುಟ್ಟಿಗೆ ಕಾರಣವಾಗುವಂಥದು.
ಪದಗುಚ್ಛ

in germ ಇನ್ನೂ – ಅರಳಿಲ್ಲದ, ವಿಕಸಿಸದ; ಇನ್ನೂ ಮೊಳಕೆಯಲ್ಲಿರುವ.

See also 1germ
2germ ಜರ್ಮ್‍
ಅಕರ್ಮಕ ಕ್ರಿಯಾಪದ

(ರೂಪಕವಾಗಿ) ಮೊಳಕೆಯಾಗು; ಅಂಕುರಿಸು; ಮೊಳೆ; ಕುಡಿಯಿಡು.