geotropism ಜೀಓಟ್ರಪಿಸಮ್‍
ನಾಮವಾಚಕ

ಜ್ಯಾವರ್ತನೆ:

  1. (ಸಾಮಾನ್ಯವಾಗಿ ಸಸ್ಯಗಳ ವಿಷಯದಲ್ಲಿ, ಮತ್ತು ಕೆಲವು ವೇಳೆ ಪ್ರಾಣಿಗಳ ವಿಷಯದಲ್ಲಿ) ಭೂಮಿಯ ಗುರುತ್ವಾಕರ್ಷಣೆಗೆ ಪ್ರತಿಕ್ರಿಯೆಯಾಗಿ ನಿರ್ದಿಷ್ಟ ದಿಕ್ಕಿಗೆ ತಿರುಗುವಿಕೆ.
  2. ಭೂಕೇಂದ್ರಕ್ಕೆ ಅಭಿಮುಖವಾಗಿ ಬೆಳೆಯುವುದು ಯಾ ಚಲಿಸುವುದು.
ಪದಗುಚ್ಛ

negative geotropism ಜ್ಯಾಪವರ್ತನೆ; ಗಿಡಗಳ ಕಾಂಡಗಳು ಮೊದಲಾದವು ಭೂಕೇಂದ್ರಕ್ಕೆ ವಿಮುಖವಾಗಿ ಬೆಳೆಯುವುದು ಯಾ ಚಲಿಸುವುದು.

  1. positive geotropism ಜ್ಯಾಭಿವರ್ತನೆ; ಗಿಡಗಳ ಬೇರುಗಳು ಮೊದಲಾದವು ಭೂಕೇಂದ್ರಕ್ಕೆ ಅಭಿಮುಖವಾಗಿ ಬೆಳೆಯುವುದು ಯಾ ಚಲಿಸುವುದು.