geography ಜಿಆಗ್ರಹಿ
ನಾಮವಾಚಕ
  1. ಭೂಗೋಳಶಾಸ್ತ್ರ; ಭೂವಿವರಣೆ; ಭೂಮಿಯ ಮೇಲ್ಮೈ, ರೂಪ, ಪ್ರಾಕೃತಿಕ ಲಕ್ಷಣಗಳು, ನೈಸರ್ಗಿಕ ಮತ್ತು ರಾಜಕೀಯ ವಿಭಾಗಗಳು, ಹವಾಗುಣ, ಉತ್ಪನ್ನಗಳು, ಜನಸಂಖ್ಯೆ, ಮೊದಲಾದವನ್ನು ಕುರಿತ ಶಾಸ್ತ್ರ.
  2. ಭೌಗೋಳಿಕ ವಿಷಯ, ವಸ್ತು; ಭೂಗೋಳಶಾಸ್ತ್ರದ ವಿಷಯ, ವಸ್ತು.
  3. ಪ್ರಾದೇಶಿಕ ಭೂಗೋಳ; ಭೂವಿವರಣೆ; ಒಂದು ಪ್ರದೇಶದ ಭೂಲಕ್ಷಣಗಳು, ಭೂವಿನ್ಯಾಸ.
  4. ಭೂಗೋಳಶಾಸ್ತ್ರ (ಗ್ರಂಥ).
  5. (ಆಡುಮಾತು) ಮನೆವಿವರ; ಮನೆಯಲ್ಲಿ ಕಕ್ಕಸು ಯಾ ಇತರ ಕೋಣೆಗಳು ಇರುವ ಸ್ಥಳ, ಸ್ಥಾನ.
ಪದಗುಚ್ಛ
  1. mathematical geography ಗಣಿತ ಭೂಗೋಳಶಾಸ್ತ್ರ; ಗಣಿತದ ನೆರವಿನಿಂದ ಅಧ್ಯಯನ ಮಾಡತಕ್ಕ ಭೂಗೋಳಶಾಸ್ತ್ರದ ವಿಷಯಗಳು.
  2. physical geography ಪ್ರಾಕೃತಿಕ ಭೂಗೋಳಶಾಸ್ತ್ರ; ಭೂಮಿಯ ಮೇಲ್ಮೈಯ ಪ್ರಾಕೃತಿಕ ಲಕ್ಷಣಗಳಿಗೆ ಸೀಮಿತವಾದ ಭೂಗೋಳಶಾಸ್ತ್ರ.
  3. political geography ರಾಜಕೀಯ ಭೂಗೋಳಶಾಸ್ತ್ರ; ರಾಜಕೀಯಕ್ಕೆ ಸಂಬಂಧಿಸಿದ ಭೂಗೋಳಶಾಸ್ತ್ರದ ವಿಷಯಗಳು.