genus ಜೀ(ಜೆ)ನಸ್‍
ನಾಮವಾಚಕ
(ಬಹುವಚನ genera ಉಚ್ಚಾರಣೆ ಜೆನರ).
  1. (ತರ್ಕ) (ಉಪಪಂಗಡಗಳೂ, ವಂಶಗಳೂ ಉಳ್ಳ) ಜಾತಿ.
  2. (ಜೀವವಿಜ್ಞಾನ) ಕುಲ; ಜೀವಿಗಳ ವರ್ಗೀಕರಣದಲ್ಲಿ ವಂಶಕ್ಕಿಂತ (family) ಸಂಕುಚಿತವಾದ ಮತ್ತು ಜಾತಿ (species) ಗಿಂತ ವಿಸ್ತಾರವಾದ ಗುಂಪು: the species of oak collectively form the genus quercus ಓಕ್‍ ಮರದ ಜಾತಿಗಳೆಲ್ಲ ಒಟ್ಟುಗೂಡಿ ಕ್ವೆರ್ಕಸ್‍ ಕುಲವಾಗುತ್ತದೆ.
  3. (ಸಡಿಲವಾಗಿ) ವರ್ಗ; ತರಗತಿ; ಪಂಗಡ; ಬುಡಕಟ್ಟು; ಬಣ; ಕುಲ; ಕುಟುಂಬ; ಗುಂಪು.
ಪದಗುಚ್ಛ
  1. highest genus (ಮತ್ತೊಂದರ ಉಪಪಂಗಡವಲ್ಲದ) ಪ್ರಧಾನ ಜಾತಿ.
  2. subaltern genus ಉಪಜಾತಿ.