genuine ಜೆನ್ಯುಇನ್‍
ಗುಣವಾಚಕ
  1. ಆದಿತಳಿಯ; ಶುದ್ಧ ಜಾತಿಯ; ಅಪ್ಪಟ, ಅಚ್ಚ – ತಳಿಯ: the genuine breed of mastiff ಶುದ್ಧತಳಿಯ ಮ್ಯಾಸ್ಟಿಹ್‍ ನಾಯಿಗಳು.
  2. ನಿಜವಾದ; ಯಥಾರ್ಥ; ನೈಜ; ಮೂಲಸ್ಥಾನದಿಂದ, ನೈಜ ಕರ್ತೃವಿನಿಂದ ನಿಜವಾಗಿ ಬಂದ: a genuine text ಯಥಾರ್ಥ ಗ್ರಂಥಪಾಠ.
  3. ನಿಜವಾದ; ನಿಷ್ಕಪಟವಾದ; ಅಕೃತ್ರಿಮವಾದ; ಸಾಚ: questions that are asked are genuine questions ಕೇಳಿದ ಪ್ರಶ್ನೆಗಳು ಸಾಚ ಪ್ರಶ್ನೆಗಳು.
  4. ನಿಜವಾದ; ಪ್ರಾಮಾಣಿಕವಾದ; ಖರೆ; ಸತ್ಯವಾದ; ಕೃತಕವಲ್ಲದ: a genuine signature ಸತ್ಯವಾದ ರುಜು, ದಸ್ಕತ್ತು.
  5. ಹೆಸರಿಗೆ ತಕ್ಕಂತಿರುವ; ಯಥಾನಾಮ; ಯಥಾಂಕಿತ; ನಿಜವಾದ; ಯಥಾರ್ಥವಾಗಿರುವ: a genuine conservative ನಿಜವಾದ ಸಂಪ್ರದಾಯವಾದಿ. a genuine idealist ನಿಜವಾದ ಆದರ್ಶವಾದಿ.