gentleman ಜೆಂಟ್‍ಲ್‍ಮನ್‍
ನಾಮವಾಚಕ
(ಬಹುವಚನ gentlemen).
  1. (ಶ್ರೀಮಂತ ವರ್ಗದವನಲ್ಲದಿದ್ದರೂ ವಂಶಲಾಂಛನ ಧರಿಸುವ ಹಕ್ಕುಳ್ಳ) ಸದ್ವಂಶದವನು; ಕುಲೀನ.
  2. (ಪ್ರಾಚೀನ ಪ್ರಯೋಗ) ಸೈನ್ಯ, ವಕೀಲಿ, ಮೊದಲಾದ ಕೆಲವು ವೃತ್ತಿಗಳಿಗೆ ಸೇರಿದವನು.
  3. ರಾಜನ ಯಾ ದೊಡ್ಡ ಪದವಿಯಲ್ಲಿರುವವನ ಪರಿವಾರಕ್ಕೆ ಸೇರಿದ ಸದ್ವಂಶೀಯ.
  4. (ಉದಾರ ಪ್ರವೃತ್ತಿ, ಉತ್ತಮ ನಡೆನುಡಿ ಮತ್ತು ಸುಶಿಕ್ಷಣ ಉಳ್ಳ) ಸಂಭಾವಿತ; ಸಭ್ಯ.
  5. ಸಮಾಜದಲ್ಲಿ ಒಳ್ಳೆಯ ಸ್ಥಾನವುಳ್ಳ ವ್ಯಕ್ತಿ.
  6. ಆರಾಮ ಶ್ರೀಮಂತ; ಐಶ್ವರ್ಯ ಮತ್ತು ವಿರಾಮ ಉಳ್ಳವನು; ದುಡ್ಡಿದ್ದು ಜೀವನಕ್ಕಾಗಿ ದುಡಿಯಬೇಕಾಗಿಲ್ಲದೆ ಇರುವವನು.
  7. (ಪಾರ್ಲಿಮೆಂಟು ಮೊದಲಾದವುಗಳಲ್ಲಿ, ಮರ್ಯಾದೆಯ ಮಾತಾಗಿ) ಮನುಷ್ಯ.
  8. (ಬಹುವಚನದಲ್ಲಿ) (ಸಭೆಯಲ್ಲಿನ ಪುರುಷವರ್ಗವನ್ನು ಸಂಬೋಧಿಸುವ ಮಾತಾಗಿ) ಮಹನೀಯರೆ!
  9. (ಪತ್ರವ್ಯವಹಾರದಲ್ಲಿ ಸಂಬೋಧನೆ ಮಾಡುವಾಗ) ಮಹಾಶಯ!
  10. (ಚರಿತ್ರೆ) ಹಣಕ್ಕಾಗಿ ಆಡದ ಕ್ರಿಕೆಟ್‍ ಆಟಗಾರ; ವೃತ್ತಿಪರನಲ್ಲದ ಕ್ರಿಕೆಟ್‍ ಆಟಗಾರ.
  11. (ಸೌಮ್ಯೋಕ್ತಿ) ಕಳ್ಳಸಾಗಾಣಿಕೆಗಾರ.
ಪದಗುಚ್ಛ
  1. gentleman at $^2$large.
  2. gentleman in waiting (ಅರಮನೆ ಯಾ ಶ್ರೀಮಂತರ ಮನೆಯಲ್ಲಿನ) ಹಾಜರುಭಾಷಿ; ಅಪ್ಪಣೆ ಕಾಯುವ ಸದ್ವಂಶೀಯ, ದೊಡ್ಡ ಮನುಷ್ಯ.
  3. gentleman’s gentleman ದೊಡ್ಡ ಮನುಷ್ಯನ ಅನುಚರ, ಸೇವಕ.
  4. my gentleman ನಾನು ಹೇಳುತ್ತಿದ್ದ ವ್ಯಕ್ತಿ.
  5. old gentleman (ವಿನೋದವಾಗಿ) ಸೈತಾನ.
  6. the Gentlemen(’s) (ಬ್ರಿಟಿಷ್‍ ಪ್ರಯೋಗ) (ಏಕವಚನವಾಗಿ ಪ್ರಯೋಗ) ಪುರುಷರ, ಗಂಡಸರ ಸಾರ್ವಜನಿಕ ಶೌಚಗೃಹ, ಶೌಚಾಲಯ.
ನುಡಿಗಟ್ಟು

gentleman’s (or gentlemen’s) agreement ಸಭ್ಯರ ಒಪ್ಪಂದ; ಸಂಭಾವಿತರ ಕರಾರು; ನೀತಿಬದ್ಧವಾದ, ಆದರೆ ಕಾನೂನಿನ ಮೇರೆಗೆ ಕ್ರಮ ನಡೆಸಲಾಗದ ಒಪ್ಪಂದ.