See also 2gentle  3gentle
1gentle ಜೆಂಟ್‍ಲ್‍
ಗುಣವಾಚಕ
  1. ಕುಲೀನ ವಂಶದ; ಉತ್ತಮ ಕುಲದ; ವಂಶಲಾಂಛನ ಧರಿಸುವ ಹಕ್ಕುಳ್ಳ.
  2. (gentleman ಮೊದಲಾದ ಸಮಸ್ತ ಪದಗಳಲ್ಲಿ) ಅಭಿಜಾತ; ಸದ್ವಂಶೀಯ; ಸತ್ಕುಲಪ್ರಸೂತ; ಉತ್ತಮ ಕುಲದಲ್ಲಿ ಹುಟ್ಟಿದ.
  3. (ಹುಟ್ಟು, ರಕ್ತ, ವಂಶ, ಉದ್ಯಮ, ಮೊದಲಾದವುಗಳ ವಿಷಯದಲ್ಲಿ) ಮಾನ್ಯ; ಗೌರವಾರ್ಹ; ಶಿಷ್ಟ; ಶಿಷ್ಟೋಚಿತ.
  4. (ಪ್ರಾಚೀನ ಪ್ರಯೋಗ) (ಈಗಲೂ ವಿನೋದವಾಗಿ ಗ್ರಂಥಕರ್ತನು ಓದುಗರನ್ನು ಸಂಬೋಧಿಸುವಾಗ): ಉದಾರ; ವಿನೀತ; ಸಂಭಾವಿತ: gentle reader! ಉದಾರ ಪಾಠಕ ಮಹಾಶಯ!
  5. ಸಾಧು; ಸೌಮ್ಯ; ಶಾಂತ.
  6. ಸಾಧು; ಸುಲಭವಾಗಿ ನಿರ್ವಹಿಸಲಾಗುವ; ಹತೋಟಿಯಲ್ಲಿಟ್ಟುಕೊಳ್ಳಲಾಗುವ: a gentle horse ಸಾಧುವಾದ ಕುದುರೆ.
  7. ಮೃದು; ಮೆತ್ತನೆಯ; ಸೌಮ್ಯ; ಬಿರುಸು, ಒರಟುತನ, ಕಾಠಿಣ್ಯ, ಉಗ್ರತೆಗಳಿಲ್ಲದ: gentle breeze ಮೃದು ಮಾರುತ; ಮಂದಾನಿಲ.
  8. (ಔಷಧಿ) ಸೌಮ್ಯ; ತೀಕ್ಷ್ಣವಲ್ಲದ.
  9. (ನಿಯಮ, ವಿಧಿ, ಮೊದಲಾದವು) ಸೌಮ್ಯ; ಕಠಿಣವಲ್ಲದ; ಹಿತವಾದ; ಮಿತವಾದ.
  10. ನಸು; ಮಂದ; ಸಾಧಾರಣ; ಹಾಳತವಾದ: a gentle heat ನಸು ಕಾವು; ಮಂದೋಷ್ಣ.
  11. ಅನುಕ್ರಮವಾದ; ನಿಧಾನವಾಗಿ, ಕ್ರಮಕ್ರಮವಾಗಿ, ಕ್ರಮೇಣ – ಆಗುವ: a gentle slope ನಸುವೋರೆ; ಸ್ವಲ್ಪಸ್ವಲ್ಪವಾಗಿ ಏರುವ ಯಾ ಇಳಿಯುವ ಓರೆ, ಇಳುಕಲು.
  12. ದಯಾಪರ; ಮೃದು ಹೃದಯದ; ಕೋಮಲ; ಸುಕುಮಾರ: the gentle touch of her hand ಅವಳ ಕೈಯ ಮೃದು ಸ್ಪರ್ಶ.
ಪದಗುಚ್ಛ
  1. the gentle art (or craft)
    1. ಗಾಳಗಾರಿಕೆ; ಗಾಳದಿಂದ ಈನು ಹಿಡಿಯುವುದು.
    2. ನಯಗಾರಿಕೆ; ತಾಳ್ಮೆ ಅಥವಾ (ವ್ಯಂಗ್ಯವಾಗಿ ಹೇಳುವಾಗ) ಒತ್ತಾಯ ಬೇಕಾಗುವ ಯಾವುದೇ ಕಾರ್ಯ, ಚಟುವಟಿಕೆ.
  2. the gentle sex ಕೋಮಲೆಯರು; ಸ್ತ್ರೀಯರು.
See also 1gentle  3gentle
2gentle ಜೆಂಟ್‍ಲ್‍
ನಾಮವಾಚಕ

ಗಾಳದ ಹುಳು; ಈನಿನ ಗಾಳದಲ್ಲಿ ಉಪಯೋಗಿಸುವ ಮಾಂಸದ ನೊಣ ಮೊದಲಾದವುಗಳ ಹುಳುಮರಿ.

See also 1gentle  2gentle
3gentle ಜೆಂಟ್‍ಲ್‍
ಸಕರ್ಮಕ ಕ್ರಿಯಾಪದ
  1. ಕುದುರೆಯನ್ನು – ಪಳಗಿಸು, ಸಾಧುಮಾಡು.
  2. ಕುದುರೆಯನ್ನು ದೃಢವಾಗಿ, ಆದರೆ ಮೃದುವಾಗಿ ಹಿಡಿದು ನಡೆಸು.
  3. ಉಚ್ಛ್ರಾಯಕ್ಕೆ ತರು; ಮೇಲಿನ ಪದವಿಗೆ ಎತ್ತು, ಏರಿಸು; ಶ್ರೀಮಂತರ ಜತೆಗೆ ಸೇರಿಸು: trading class which having enriched itself, sought desperately to gentle itself ಬೇಕಾದಷ್ಟು ದುಡ್ಡು ಮಾಡಿದ ವರ್ತಕವರ್ಗ ಶ್ರೀಮಂತರ ಸಾಲಿಗೆ ಏರಲು ಬಹು ಪ್ರಯಾಸ ಪಟ್ಟಿತು.
  4. ಪಳಗಿಸು; ನಯಗೊಳಿಸು; ಮೃದುಗೊಳಿಸು; ನಡತೆಯ ರೀತಿನೀತಿಗಳಲ್ಲಿ ಮೃದುವಾಗಿ ಮಾಡು: honoured for gentling the barbarian ಅನಾಗರಿಕನನ್ನು ಪಳಗಿಸಿದನೆಂಬ ಕೀರ್ತಿಗೆ ಪಾತ್ರನಾಗಿ.
  5. ಸಾಂತ್ವನಗೊಳಿಸು; ಸಮಾಧಾನಪಡಿಸು; ಸಂತಯಿಸು; ಬೋಳೈಸು: the old man is in a rage and has to be gentled ಮುದುಕ ಅತಿ ಕೋಪದಲ್ಲಿದ್ದಾನೆ, ಅವನನ್ನು ಸಮಾಧಾನ ಮಾಡಬೇಕು.
  6. ನಿಧಾನವಾಗಿ, ಮಂದಗತಿಯಲ್ಲಿ – ಸಾಗು, ನಡೆ: the broad shouldered train gentles its way ಮಹಾಭುಜದ ರೈಲು ಮಂದಗತಿಯಲ್ಲಿ ಸಾಗುತ್ತದೆ.