See also 2gentile
1gentile ಜೆಂಟೈಲ್‍
ಗುಣವಾಚಕ
  1. (ಯೆಹೂದ್ಯರ ಬಳಕೆಯಲ್ಲಿ) ಯೆಹೂದ್ಯೇತರ.
  2. (ಮಾರ್ಮನರ ಬಳಕೆಯಲ್ಲಿ) ಮಾರ್ಮನೇತರ; ಮಾರ್ಮನ್‍ ಗುಂಪಿಗೆ ಸೇರಿರದ.
  3. (ವ್ಯಾಕರಣ) ದೇಶವಾಚಕ ಯಾ ಜನಾಂಗವಾಚಕ; ಒಂದೇ ದೇಶ ಯಾ ಜನಾಂಗವನ್ನು ಸೂಚಿಸುವ: British, German, Irish, etc. are gentile adjectives ಬ್ರಿಟಿಷ್‍, ಜರ್ಮನ್‍, ಐರಿಷ್‍, ಮೊದಲಾದವುಗಳು ಜನಾಂಗಸೂಚಕ ಗುಣವಾಚಕಗಳು.
  4. ‘ಪೇಗನ್‍’; ಕ್ರೈಸ್ತ, ಯೆಹೂದ್ಯ, ಯಾ ಮುಸ್ಲಿಂ ಅಲ್ಲದ.
  5. ಯಾವುದೇ ಜನಾಂಗ ಯಾ ಬಣವನ್ನು ಸೂಚಿಸುವ.
See also 1gentile
2gentile ಜೆಂಟೈಲ್‍
ನಾಮವಾಚಕ
  1. (ಯೆಹೂದ್ಯರ ಬಳಕೆಯಲ್ಲಿ) ಯೆಹೂದ್ಯೇತರ (ವ್ಯಕ್ತಿ).
  2. (ಮಾರ್ಮನರ ಬಳಕೆಯಲ್ಲಿ) ಮಾರ್ಮನೇತರ (ವ್ಯಕ್ತಿ); ಮಾರ್ಮನ್‍ ಮತೀಯನಲ್ಲದವನು.
  3. (ವ್ಯಾಕರಣ) ದೇಶವಾಚಕ ಯಾ ಜನಾಂಗವಾಚಕ (ಪದ): the words Italian, American are gentiles ಇಟ್ಯಾಲಿಯನ್‍, ಅಮೆರಿಕನ್‍ ಎಂಬ ಪದಗಳು ದೇಶವಾಚಕಗಳು, ಜನಾಂಗವಾಚಕ ಪದಗಳು.
  4. ‘ಪೇಗನ್‍’; ಕ್ರೈಸ್ತ, ಯೆಹೂದ್ಯ ಯಾ ಮುಸ್ಲಿಂ ಅಲ್ಲದವನು.