genius ಜೀನಿಅಸ್‍, ಜೀನ್ಯಸ್‍
ನಾಮವಾಚಕ
(ಬಹುವಚನ geniuses, ಯಾ genii ಉಚ್ಚಾರಣೆ ಜೀನಿಐ).
  1. ರಕ್ಷಕ ದೇವತೆ; ಅಭಿಮಾನಿ ದೇವತೆ.
  2. ಸ್ಥಳದೇವತೆ; ಗ್ರಾಮದೇವತೆ.
  3. ಕುಲದೇವತೆ; ಗೃಹದೇವತೆ.
  4. ಅಧಿದೇವತೆ: good genius ಭಾಗ್ಯದೇವತೆ; ವ್ಯಕ್ತಿಯು ಮೋಕ್ಷ ಯಾ ಶ್ರೇಯಸ್ಸು ಸಾಧಿಸಲು ಅನುಕೂಲವಾದ ದೇವತೆ. evil genius ದೌರ್ಭಾಗ್ಯ ದೇವತೆ; ದುರ್ದೇವತೆ; ವ್ಯಕ್ತಿಯು ನರಕಕ್ಕೆ ಯಾ ದುರ್ಗತಿಗೆ ಗುರಿಯಾಗಲು ಕಾರಣವಾದ ದೇವತೆ.
  5. (ಸಾಮಾನ್ಯವಾಗಿ ಬಹುವಚನದಲ್ಲಿ genii) = genie.
  6. (ರಾಷ್ಟ್ರ, ಯುಗ, ಮೊದಲಾದವುಗಳ ಪ್ರಚಲಿತ) ಮನೋಧರ್ಮ; ಭಾವನೆ; ದೃಷ್ಟಿ; ಅಭಿರುಚಿ.
  7. (ಭಾಷೆ, ಕಾನೂನು, ಮೊದಲಾದವುಗಳ) ಸ್ವಭಾವ; ಲಕ್ಷಣ; ಸ್ವರೂಪ; ಧರ್ಮ; ಜೀವಾಳ; ಜಾಯಮಾನ; ಮರ್ಯಾದೆ; ಮರ್ಜಿ; ಮರ್ಮ; ರೀತಿ; ಪ್ರವೃತ್ತಿ; ವಿಧಾನ; ಸಂಪ್ರದಾಯ.
  8. (ಒಂದು ಸ್ಥಳದೊಡನೆ ಬೆರೆತುಹೋಗಿರುವ ಮತ್ತು ಅದರ ಸ್ಮರಣೆಯೊಡನೆಯೇ ಬರುವ) ಸ್ಮೃತಿಗಳು ಯಾ ಸ್ಫೂರ್ತಿಗಳು.
  9. ಸಹಜ – ಶಕ್ತಿ, ಸಾಮರ್ಥ್ಯ ಯಾ ಪ್ರವೃತ್ತಿ.
  10. ವಿಶಿಷ್ಟವಾದ ಬುದ್ಧಿಶಕ್ತಿ; ವಿಶೇಷ ಲಕ್ಷಣಗಳಿಂದ ಕೂಡಿದ ಬುದ್ಧಿಯ – ಗುಣ, ಸಾಮರ್ಥ್ಯ.
  11. ಉನ್ನತ, ಅಸಾಧಾರಣ – ಬೌದ್ಧಿಕ ಶಕ್ತಿ.
  12. (ವಿಭಾವನೆ, ಕಲಾಸೃಷ್ಟಿ ಮತ್ತು ವಸ್ತುಸೃಷ್ಟಿಗಳಲ್ಲಿ ಸಹಜಸಿದ್ಧವಾದ) ಅಸಾಧಾರಣ ಶಕ್ತಿ; ಪ್ರತಿಭೆ.
  13. (ಬಹುವಚನ ದಲ್ಲಿ, geniuses) ಪ್ರತಿಭಾಶಾಲಿಗಳು; ಅಸಾಧಾರಣ ವ್ಯಕ್ತಿಗಳು.