generation ಜೆನರೇಷನ್‍
ನಾಮವಾಚಕ
  1. ಸಂತಾನ; ಸಂತಾನೋತ್ಪತ್ತಿ; ಸಂತಾನಾಭಿವೃದ್ಧಿ.
  2. (ನೈಸರ್ಗಿಕ ಯಾ ಕೃತಕ) ಉತ್ಪತ್ತಿ; ಉತ್ಪಾದನೆ; ಮುಖ್ಯವಾಗಿ ವಿದ್ಯುದುತ್ಪಾದನೆ.
  3. ಸಂತತಿ; ಪೀಳಿಗೆ; ತಲೆಮೊರೆ; ತಲೆಮಾರು; ವಂಶವೃಕ್ಷದಲ್ಲಿ ಒಂದು ಹಂತ: have known them for three generations ಮೂರು ತಲೆಮಾರುಗಳಿಂದ ಅವರನ್ನು ಬಲ್ಲೆ. his descendant in the tenth generation ಅವರ ಹತ್ತನೇ ಪೀಳಿಗೆಯವ.
  4. ಸಂತತಿ; ಪೀಳಿಗೆ; ತಲೆಮಾರು:
    1. ಹೆಚ್ಚು ಕಡಿಮೆ ಒಂದೇ ಕಾಲದಲ್ಲಿ ಹುಟ್ಟಿದವರೆಲ್ಲರು: my generation ನನ್ನ ತಲೆಮಾರಿನವರು. the postwar generation ಯುದ್ಧೋತ್ತರ ಪೀಳಿಗೆಯವರು. the rising generation ಬೆಳೆಯುತ್ತಿರುವ, ಪ್ರವರ್ಧಮಾನಕ್ಕೆ ಬರುತ್ತಿರುವ ಪೀಳಿಗೆಯವರು.
    2. ತಂದೆತಾಯಿಗಳ ಸ್ಥಳವನ್ನು ಮಕ್ಕಳು ಆಕ್ರಮಿಸಲು ಬೇಕಾಗುವುದೆಂದು ಗಣಿಸಲಾಗಿರುವ ಸರಾಸರಿ ಕಾಲ (ಸುಮಾರು 30 ವರ್ಷ): a generation ago ಒಂದು ತಲೆಮಾರಿನ ಹಿಂದೆ.
    3. ಒಂದು ಕಾಲದಲ್ಲಿ ಒಂದೇ ವರ್ಗಕ್ಕೆ, ಸಮಾನವರ್ಗಕ್ಕೆ ಸೇರಿದವರು: the generation of silent – screen stars ಮೂಕ ಚಲನಚಿತ್ರದ ನಟನಟಿಯರ ಪೀಳಿಗೆ.
  5. ಪೀಳಿಗೆ; ವಿಕಾಸದ, ಬೆಳವಣಿಗೆಯ ಹಂತ: third-generation computers ಮೂರನೇ ಪೀಳಿಗೆಯ ಕಂಪ್ಯೂಟರುಗಳು.
ಪದಗುಚ್ಛ
  1. equivocal generation ಸ್ವಯಂ ಜನನ; ಸ್ವಯಂಸಂತಾನ; ನಿರ್ಜೀವ ವಸ್ತುಗಳಿಂದ ಜೀವಿಗಳು ತಮಗೆ ತಾವೇ ಉದ್ಭವಿಸುವುದು.
  2. spontaneous generation = ಪದಗುಚ್ಛ \((1)\).