generate ಜೆನರೇಟ್‍
ಸಕರ್ಮಕ ಕ್ರಿಯಾಪದ
  1. (ಶಾಖ, ಬಲ, ಬೆಳಕು, ಘರ್ಷಣೆ, ವಿದ್ಯುತ್ತು, ಫಲಿತಾಂಶ, ವಿದ್ಯಮಾನ, ಮನಃಸ್ಥಿತಿ, ಮೊದಲಾದವನ್ನು) ಹುಟ್ಟಿಸು; ಉತ್ಪಾದಿಸು; ಅಸ್ತಿತ್ವಕ್ಕೆ ತರು; ವಿಕಾಸಗೊಳಿಸು.
  2. (ಗಣಿತ) (ಚಲಿಸುತ್ತಿರುವುದೆಂದು ಪರಿಗಣಿತವಾದ ಬಿಂದು, ರೇಖೆ ಯಾ ತಲದ ವಿಷಯದಲ್ಲಿರೇಖೆ, ತಲ ಯಾ ಘನ ಆಕೃತಿಯನ್ನು) ರಚಿಸು; ನಿರ್ಮಿಸು.