generalize ಜೆನರಲೈಸ್‍
ಸಕರ್ಮಕ ಕ್ರಿಯಾಪದ
  1. ಸಾಮಾನ್ಯೀಕರಿಸು:
    1. ಸಾಮಾನ್ಯ ನಿಯಮಗಳ, ಭಾವನೆಯ, ತತ್ತ್ವದ ರೂಪಕ್ಕೆ ತರು, ಇಳಿಸು.
    2. ಸಾಮಾನ್ಯ ಹೆಸರಿನಿಂದ ಕರೆ.
    3. (ಗಣಿತ ಮತ್ತು ತತ್ತ್ವಶಾಸ್ತ್ರ) ಸಾಮಾನ್ಯರೂಪಕ್ಕೆ ತರು.
    4. (ಗಣಿತ ಮತ್ತು ತತ್ತ್ವಶಾಸ್ತ್ರ) (ಸತ್ಯಾಂಶಗಳ) ಅನ್ವಯವನ್ನು ಯಾ ವ್ಯಾಪ್ತಿಯನ್ನು ಹೆಚ್ಚಿಸು; ವ್ಯಾಪ್ತಿ ವಿಸ್ತರಿಸು.
    5. (ಸತ್ಯಾಂಶ, ವಸ್ತುಸಂಗತಿ, ಮೊದಲಾದವುಗಳ ಆಧಾರದ ಮೇಲೆ) ಸಾಮಾನ್ಯ ಹೇಳಿಕೆಯನ್ನು, ನಿರೂಪಣೆಯನ್ನು – ಸ್ಥಾಪಿಸು, ಕಲ್ಪಿಸು.
    6. (ಬಿಡಿ ಸಂಗತಿಗಳು ಮೊದಲಾದವುಗಳ ಗುಣಲಕ್ಷಣಗಳನ್ನು ಬೇರ್ಪಡಿಸುವ ಮೂಲಕ) ಸಾಮಾನ್ಯ ಭಾವನೆಗಳನ್ನು, ಕಲ್ಪನೆಗಳನ್ನು ರಚಿಸು.
  2. ಅನುಗಮನ ತರ್ಕದಿಂದ (ಸಾಮಾನ್ಯ ನಿಯಮವನ್ನು, ನಿರ್ಣಯವನ್ನು) – ಊಹಿಸು, ಅನುಮಾನಿಸು.
  3. (ಚಿತ್ರ) ವಿಶಿಷ್ಟ ಲಕ್ಷಣಗಳನ್ನು ಮಾತ್ರ ನಿರೂಪಿಸು, ರೂಪಿಸು.
  4. ಅಸ್ಪಷ್ಟಗೊಳಿಸು; ವಿವರಗಳನ್ನು ನೀಡದೆ ನಿಷ್ಕೃಷ್ಟವಲ್ಲದಂತೆ, ಖಚಿತವಾಗಿರದಂತೆ ಮಾಡು.
  5. ಅಸ್ಪಷ್ಟವಾಗಿ, ವಿವರಗಳಿಲ್ಲದೆ, ಖಚಿತವಾಗಿರದ, ನಿಷ್ಕೃಷ್ಟವಲ್ಲದ ರೀತಿಯಲ್ಲಿ – ಮಾತನಾಡು.
  6. ಸಾಮಾನ್ಯ ರೂಢಿಗೆ ತರು.
ಅಕರ್ಮಕ ಕ್ರಿಯಾಪದ
  1. (ವಸ್ತುಗಳ ಯಾ ವಿಷಯಗಳ ಸಾಮಾನ್ಯ ಲಕ್ಷಣಗಳನ್ನು ಪ್ರತ್ಯೇಕವಾಗಿ ಭಾವಿಸಿಕೊಂಡು) ಸಾಮಾನ್ಯ ಭಾವನೆಗಳನ್ನು ಕಲ್ಪಿಸು, ನಿರೂಪಿಸು.
  2. ಸಾಮಾನ್ಯ ಹೇಳಿಕೆಗಳನ್ನು ನಿರೂಪಣೆಗಳನ್ನು ಬಳಸು.
  3. ಅಸ್ಪಷ್ಟವಾಗಿ ಮಾತನಾಡು.