See also 2general
1general ಜೆನರಲ್‍
ಗುಣವಾಚಕ
  1. (ಸಂಪೂರ್ಣವಾಗಿ ಯಾ ಸರಿಸುಮಾರಾಗಿ) ಸರ್ವಸಾಮಾನ್ಯವಾದ; ಸಾಧಾರಣವಾದ; ಸಾರ್ವತ್ರಿಕವಾದ; ಪ್ರಾಯಿಕವಾದ.
  2. ಸಾರ್ವ; ಸಾರ್ವಲೌಕಿಕ:
    1. ಎಲ್ಲರನ್ನೂ, ಎಲ್ಲವನ್ನೂ ಯಾ ಹೆಚ್ಚು ಕಡಮೆ ಎಲ್ಲರನ್ನೂ, ಎಲ್ಲವನ್ನೂ – ಒಳಗೊಂಡಿರುವ.
    2. ಎಲ್ಲ ವ್ಯಕ್ತಿಗಳ, ವಿಷಯಗಳ ಯಾ ಹೆಚ್ಚು ಕಡಮೆ ಎಲ್ಲ ವ್ಯಕ್ತಿಗಳ, ವಿಷಯಗಳ ಮೇಲೆ ಪರಿಣಾಮ ಉಂಟುಮಾಡುವ ಯಾ ಪ್ರಭಾವ ಬೀರುವ.
  3. ಏಕದೇಶವಲ್ಲದ; ಆಂಶಿಕವಲ್ಲದ.
  4. ವಿಶೇಷವಲ್ಲದ; ಅವಿಶಿಷ್ಟ; ವ್ಯಕ್ತಿಸೀಮಿತವಲ್ಲದ.
  5. ಸ್ಥಳೀಯವಲ್ಲದ; ಪ್ರಾದೇಶಿಕವಲ್ಲದ; ಸಾರ್ವದೇಶಿಕ; ಸಾರ್ವದೇಶೀಯ.
  6. ವರ್ಗೀಯವಲ್ಲದ; ಪಾಂಥಿಕವಲ್ಲದ: general confession (ಕ್ರೈಸ್ತರಲ್ಲಿ) ಸಾಮೂಹಿಕ ಪಾಪನಿವೇದನ; ಒಂದು ಚರ್ಚಿಗೆ ಸೇರಿದವರೆಲ್ಲ ಒಟ್ಟಾಗಿ ಪಾದ್ರಿಯ ಎದುರಿನಲ್ಲಿ, ಚರ್ಚಿನಲ್ಲಿ ತಮ್ಮ ಪಾಪಗಳನ್ನು ಒಪ್ಪಿಕೊಳ್ಳುವುದು.
  7. ಪ್ರಚಲಿತ; ರೂಢಿಯಲ್ಲಿರುವ; ಬಳಕೆಯಲ್ಲಿರುವ.
  8. ಎಲ್ಲೆಲ್ಲೂ ಹರಡಿರುವ; ಸಾರ್ವತ್ರಿಕವಾದ.
  9. ವಾಡಿಕೆಯಾದ; ಪದ್ಧತಿಗನುಗುಣವಾದ: in a general way (ಲೋಕ)ರೂಢಿಯಂತೆ; ವಾಡಿಕೆಯ ಪ್ರಕಾರ; ಸಾಮಾನ್ಯ ಪದ್ಧತಿಯಂತೆ.
  10. ಸರ್ವಾನ್ವಯಿ(ಕ); ಸಾಧಾರಣ; ಒಂದು ಪರಿಮಿತ ಕ್ಷೇತ್ರಕ್ಕೆ ಮಾತ್ರ ಅನ್ವಯಿಸದ; ವಸ್ತುಗಳು, ಸಂದರ್ಭಗಳು, ಮೊದಲಾದವುಗಳ ಇಡೀ ವರ್ಗಕ್ಕೆ ಸಂಬಂಧಿಸಿದ; ಸರ್ವಾನ್ವಯವಾದ ಯಾ ಹೆಚ್ಚು ಕಡಿಮೆ ಎಲ್ಲಕ್ಕೂ ಅನ್ವಯಿಸುವ: as a general rule ಸಾಮಾನ್ಯವಾಗಿ; ಸಾಧಾರಣವಾಗಿ; ಸಾಮಾನ್ಯತಃ; ಬಹು ಸಂದರ್ಭಗಳಲ್ಲಿ.
  11. ಸಾಮಾನ್ಯ; ಸಾಧಾರಣ; ಒಂದು ವರ್ಗದ ವ್ಯಕ್ತಿಗಳ, ವಸ್ತುಗಳ ಪರಸ್ಪರ ಭೇದಗಳನ್ನು ಲೆಕ್ಕಿಸದೆ ಸಾಮಾನ್ಯಾಂಶಗಳನ್ನೊಳಗೊಂಡ: general word ಸಾಮಾನ್ಯ ಪದ. general notion ಸಾಮಾನ್ಯ ಭಾವನೆ.
  12. ಸಾಮಾನ್ಯ; ಒಂದು ಶಾಖೆಗೆ ಯಾ ವಿಷಯಕ್ಕೆ ಈಸಲಲ್ಲದ; ವಿಶಿಷ್ಟ ಬಗೆಯದಲ್ಲದ: general dealer ಸಾಮಾನ್ಯ ಸರಕು ವ್ಯಾಪಾರಿ.
  13. ಸ್ಥೂಲವಾಗಿ ಹೊಂದುವ; ವಿವರಗಳಿಂದ ಕೂಡಿರದ; ಹೆಚ್ಚು ಕಡಮೆ ಸಮರ್ಪಕವಾದ; ಸಾಮಾನ್ಯ ವ್ಯವಹಾರಗಳಿಗೆ ಸಾಕಾಗುವ: general resemblance ಸಾಮಾನ್ಯ ಹೋಲಿಕೆ; ಹೆಚ್ಚು ಕಡಮೆ ಹೋಲುವುದು.
  14. ಅಸ್ಪಷ್ಟ; ಮೊಗುಂ; ಅನಿರ್ದಿಷ್ಟ; ಅನಿಷ್ಕೃಷ್ಟ; ಖಚಿತವಲ್ಲದ; ಸ್ಥೂಲ: spoke only in general terms ಸ್ಥೂಲವಾಗಿ ಮಾತನಾಡಿದ; ಮೊಗುಂ ಆಗಿ ಮಾತನಾಡಿದ.
  15. (ಸೈನ್ಯಾಧಿಕಾರಿಗಳ ವಿಷಯದಲ್ಲಿ) ಜನರಲ್‍; ಕರ್ನಲ್ಲಿಗೆ ಮೇಲ್ಪಟ್ಟ ಅಧಿಕಾರದ ಮತ್ತು ಅಂತಸ್ತಿನ.
  16. ಮುಖ್ಯ; ಪ್ರಧಾನ; ಮುಖ್ಯಸ್ಥನಾದ; ಅಧಿಕಾರ ಮತ್ತು ಕಾರ್ಯಕ್ಷೇತ್ರಗಳಲ್ಲಿ ಪರಿಮಿತಿ ಇಲ್ಲದ, ಅಂಕೆ ಇಲ್ಲದ (ಅನೇಕ ವೇಳೆ Adjutant-General, Attorney-General, Secretary-General, Solicitor-General ಮೊದಲಾದ ಹುದ್ದೆಗಳ ಹೆಸರುಗಳಲ್ಲಿ ಪ್ರಯೋಗ): general manager ಮುಖ್ಯ ನಿರ್ವಾಹಕ, Secretary general ಮುಖ್ಯ ಕಾರ್ಯದರ್ಶಿ; ಮಹಾಕಾರ್ಯದರ್ಶಿ.
  17. (ಹಾಸ್ಯ ಪ್ರಯೋಗ) ( ನಾಮವಾಚಕಗಳೊಡನೆ) ಎಲ್ಲರಿಗೂ ಸಂಬಂಧಿಸಿದ; ಸರ್ವಸಂಬಂಧಿ: lover general ಸರ್ವಸ್ತ್ರೀಯರಲ್ಲೂ ಪ್ರಣಯ ತಳೆಯುವ, ತೋರುವ; ಸರ್ವಸ್ತ್ರೀಪ್ರೇಮಿ; ಸರ್ವಪ್ರಣಯಿ.
ಪದಗುಚ್ಛ
  1. General Certificate of Education ಸಾಮಾನ್ಯ ಶಿಕ್ಷಣ ಸರ್ಟಿಹಿಕೇಟು:
    1. ಇಂಗ್ಲೆಂಡು ಮತ್ತು ವೇಲ್ಸ್‍ಗಳಲ್ಲಿ, ಮುಖ್ಯವಾಗಿ ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸುವ ಪರೀಕ್ಷೆ.
    2. ಈ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಕೊಡುವ ಪ್ರಮಾಣಪತ್ರ.
  2. in general ಸಾಮಾನ್ಯವಾಗಿ; ಸಾಧಾರಣವಾಗಿ; ಎಲ್ಲ ನಿದರ್ಶನಗಳಿಗೂ ಸಾಮಾನ್ಯವಾಗಿ ಅನ್ವಯಿಸುವಂತೆ; ಕೆಲವು ವಿಶೇಷ ನಿದರ್ಶನಗಳನ್ನು ಬಿಟ್ಟು; ಬಹುವಾಗಿ; ಬಹುಶಃ; ಮುಕ್ಕಾಲುಪಾಲು ಎಲ್ಲಕ್ಕೂ ಅನ್ವಯಿಸುವಂತೆ.
See also 1general
2general ಜೆನರಲ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) (the ಒಡನೆ) ಜನಸಾಮಾನ್ಯ; ಜನತೆ.
  2. (ಬಹುವಚನ ದಲ್ಲಿ) (ಈಗ ವಿರಳ ಪ್ರಯೋಗ) ಸಾಮಾನ್ಯ ತತ್ತ್ವಗಳು, ಭಾವನೆಗಳು ಯಾ ನಿಯಮಗಳು.
  3. ಧಾರ್ಮಿಕ ಮುಖಂಡ; ಒಂದು ಮತೀಯ ಪಂಥದ ಮುಂದಾಳು; ನಾಯಕ, ಉದಾಹರಣೆಗೆ ಜೆಸೂಟ್‍, ಡಾಮಿನಿಕನ್‍, ಮೊದಲಾದ ಕ್ರೈಸ್ತ ಪಂಥಗಳ ಮುಖ್ಯಸ್ಥ.
  4. (ಸೈನ್ಯ) ಜನರಲ್‍; ಹೀಲ್ಡ್‍ ಮಾರ್ಷಲ್‍ ಹುದ್ದೆಗಿಂತ ಒಂದು ಅಂತಸ್ತು ಕಡಿಮೆ ಅಂತಸ್ತಿನವನು ಯಾ ಲೆಹ್ಟಿನಂಟ್‍ ಜನರಲ್‍ಗಿಂತ ಮೇಲಿನವನು.
  5. ಸೈನ್ಯಾಧಿಪತಿ; ಸೇನಾಪತಿ.
  6. (ಅಮೆರಿಕನ್‍ ಪ್ರಯೋಗ) ಸೇನೆಯ ಯಾ ವಾಯುಸೇನೆಯ ಜನರಲ್‍, ಅತ್ಯುಚ್ಚ ಅಧಿಕಾರಿ.
  7. ಕಾರ್ಯತಂತ್ರಕುಶಲ; ಕಾರ್ಯನೀತಿಜ್ಞ; ಉಪಾಯಜ್ಞ.
  8. ವಿಶೇಷ ಪರಿಣತಿ ಇರುವವನು; ತಜ್ಞ; ಪರಿಣತ: a good general ಉತ್ತಮ ತಂತ್ರಕುಶಲ.
  9. (ಆಡುಮಾತು) ಸಾಮಾನ್ಯ ಕೆಲಸಗಾತಿ; ಮನೆಗೆಲಸದವಳು.
  10. (ಆಡುಮಾತು) ಜನರಲ್‍ ಪೋಸ್ಟ್‍ ಆಹೀಸು.