gelatin ಜೆಲಟಿನ್‍
ನಾಮವಾಚಕ

ಜೆಲಟಿನ್‍; ಪ್ರಾಣಿಗಳ ಚರ್ಮ, ಮೂಳೆ, ಅಸ್ಥಿರಜ್ಜು, ಮೊದಲಾದವನ್ನು ನೀರಿನಲ್ಲಿ ಕುದಿಸಿ ತಯಾರಿಸುವ, ನಸು ಹಳದಿ ಬಣ್ಣದ, ಒಣಗಿದಾಗ ಭಿದುರವಾಗಿಯೂ ಪಾರದರ್ಶಕವಾಗಿಯೂ ಇರುವ ಜೆಲ್ಲಿಗಳನ್ನು ತಯಾರಿಸಲು ಉಪಯೋಗಿಸುವ, ರುಚಿಯಿಲ್ಲದ ಪ್ರೋಟೀನ್‍ ಪದಾರ್ಥ.

ಪದಗುಚ್ಛ
  1. blasting gelatin ಸ್ಫೋಟಕ ಜೆಲಟಿನ್‍; ನೈಟ್ರೊ ಗ್ಲಿಸರಿನ್‍ ಮತ್ತು ನೈಟ್ರೊ ನೆಲ್ಯುಲೋಸ್‍ಗಳಿಂದ ತಯಾರಿಸಿದ, ರಬ್ಬರಿನಂತಿರುವ ಅಪಾರದರ್ಶಕ ಸ್ಫೋಟಕ ಪದಾರ್ಥ.
  2. vegetable gelatin ಸಸ್ಯ ಜೆಲಟಿನ್‍; ಸಸ್ಯಮೂಲದಿಂದ ತಯಾರಿಸಿದ ಜೆಲಟಿನ್‍ನಂಥ ಪದಾರ್ಥ.