See also 2gazette
1gazette ಗಸೆಟ್‍
ನಾಮವಾಚಕ
  1. (ಚರಿತ್ರೆ) ಸುದ್ದಿಯ ಹಾಳೆ.
  2. (ಚರಿತ್ರೆ) (ಪ್ರಚಲಿತ ಸಂಗತಿಗಳನ್ನು ತಿಳಿಸುವ) ನಿಯತಕಾಲಿಕ (ಪತ್ರಿಕೆ).
  3. ಗೆಸೆಟ್ಟು; ಸರ್ಕಾರದ ಪ್ರಕಟನ ಪತ್ರಿಕೆ:
    1. ಸರ್ಕಾರೀ ನೇಮಕಗಳು, ದಿವಾಳಿ ಆದವರು ಮತ್ತು ಇತರ ಸಾರ್ವಜನಿಕ ಪ್ರಕಟಣೆಗಳನ್ನೊಳಗೊಂಡ, ವಾರಕ್ಕೆರಡು ಬಾರಿ ಹೊರಡಿಸುವ ಇಂಗ್ಲೆಂಡಿನ ಸರ್ಕಾರದ ಮೂರು ಅಧಿಕೃತ ಪತ್ರಿಕೆಗಳಲ್ಲಿ ಒಂದು: London Gazette, Edinburgh Gazette, Belfast Gazette ಲಂಡನ್‍, ಎಡಿನ್‍ಬರೋ, ಬೆಲ್‍ಹಾಸ್ಟ್‍ ಗೆಸೆಟ್ಟು.
    2. ಕಾನೂನುಬದ್ಧ ತಿಳಿವಳಿಕೆ ಪತ್ರಗಳು, ಅಧಿಕಾರಿಗಳ ನೇಮಕ, ಬಡ್ತಿ, ಮೊದಲಾದ ಸುದ್ದಿಗಳನ್ನೊಳಗೊಂಡ ಸರ್ಕಾರದ ನಿಯತಕಾಲಿಕ ಪತ್ರಿಕೆ.
  4. (ಕೆಲವು ವೃತ್ತಪತ್ರಿಕೆಗಳ ಅಂಕಿತದಲ್ಲಿ ಬರುವಾಗ) ವೃತ್ತಪತ್ರಿಕೆ: Bermingham Gazette ಬರ್ಮಿಂಗ್‍ಹ್ಯಾಮ್‍ ಗೆಸೆಟ್ಟು.
See also 1gazette
2gazette ಗಸೆಟ್‍
ಸಕರ್ಮಕ ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ) (ಮುಖ್ಯವಾಗಿ ಕರ್ಮಣಿಪ್ರಯೋಗದಲ್ಲಿ) ಸರ್ಕಾರೀ ಗೆಸೆಟ್ಟಿನಲ್ಲಿ ಪ್ರಕಟಿಸು.