See also 2gay
1gay ಗೇ
ಗುಣವಾಚಕ
( ತರರೂಪ gayer, ತಮರೂಪ gayest).
  1. ಗೆಲವಿನ; ನಲಿವಿನ; ಗೆಲವನ್ನು ಸೂಚಿಸುವ.
  2. ಗೆಲವು ತುಂಬಿದ; ಉಲ್ಲಾಸಭರಿತ; ಉಲ್ಲಾಸಪೂರ್ಣ.
  3. ಗಲವಿನ ಸ್ವಭಾವದ; ಉಲ್ಲಾಸಶೀಲ; ಉಲ್ಲಾಸ – ಪ್ರವೃತ್ತಿಯ, ಪ್ರಕೃತಿಯ.
  4. ನಿರಾಲೋಚನೆಯ; ಆರಾಮವಾದ; ನಿಶ್ಚಿಂತೆಯ; ನಿರಾತಂಕವಾದ; ಹಾಯಾಗಿರುವ ಸ್ವಭಾವದ; ಹಗುರ ಹೃದಯದ; ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದ.
  5. (ಸೌಮ್ಯೋಕ್ತಿ) ನೀತಿಗೆಟ್ಟ; ನೀತಿಭ್ರಷ್ಟ; ವಿಲಾಸಿಯಾದ; ವಿಷಯಲಂಪಟನಾದ; ಲಂಡನಾದ.
  6. (ಹೆಂಗಸಿನ ವಿಷಯದಲ್ಲಿ) ವಿಲಾಸಿನಿಯಾದ; ವ್ಯಭಿಚಾರದಿಂದ ಬದುಕುವ.
  7. ಬೆಡಗಿನ; ಥಳಕು ಪಳಕಿನ; ಆಡಂಬರದ.
  8. ಹೊಳಪಿನ; ಉಜ್ಜ್ವಲ; ಉಜ್ಜ್ವಲವರ್ಣದ; ಥಳಥಳಿಸುವ ಬಣ್ಣದ.
  9. ಷೋಕಿ; ಸೊಗಸಾದ ಉಡುಪು ಧರಿಸಿದ; ಚೆನ್ನಾಗಿ ಸಿಂಗರಿಸಿಕೊಂಡ: the King wanted to know this gay gentleman ಈ ಷೋಕಿಲಾಲ ಮಹನೀಯ ಯಾರೆಂದು ಅರಸ ಅರಿಯಬಯಸಿದ.
  10. (ಅಶಿಷ್ಟ) ಸಲಿಂಗಕಾಮಿಯಾದ.
  11. (ಅಶಿಷ್ಟ)(ಸ್ಥಳದ ವಿಷಯದಲ್ಲಿ) ಸಲಿಂಗಕಾಮಿಗಳು ಪದೇ ಪದೇ ಭೇಟಿಮಾಡುವ; ಸಲಿಂಗಕಾಮಿಗಳಿಗಾಗಿ ಇರುವ ಯಾ ಸಲಿಂಗಕಾಮಿಗಳು ಬಳಸುವ: a gay bar ಸಲಿಂಗಕಾಮಿಗಳ ಬಾರು, ಮದ್ಯದಂಗಡಿ.
See also 1gay
2gay ಗೇ
ನಾಮವಾಚಕ

(ಅಶಿಷ್ಟ) ಸಲಿಂಗಕಾಮಿ (ಮುಖ್ಯವಾಗಿ ಗಂಡಸು).