See also 2gauge
1gauge ಗೇಜ್‍
ನಾಮವಾಚಕ
  1. ಗೇಜು; ವಸ್ತುಗಳನ್ನು ತಯಾರಿಸುವಲ್ಲಿ ಅನುಸರಿಸಲೇಬೇಕಾದ, ಮುಖ್ಯವಾಗಿ ಪೀಪಾಯಿಯ ಒಳಗಣ ಘನ ಅಳತೆಯ, ತುಪಾಕಿ ಗುಂಡಿನ ವ್ಯಾಸದ, ನೂಲಿನೆಳೆಯ ನವುರಿನ, ಕಬ್ಬಿಣದ ತಗಡಿನ, ದಪ್ಪದ ಪ್ರಮಾಣದ ಅಳತೆ.
  2. ವ್ಯಾಪನಶಕ್ತಿ; ಎಷ್ಟು ದೂರ ಹರಡಬಲ್ಲುದೋ ಅಷ್ಟು ಶಕ್ತಿ.
  3. ವ್ಯಾಪ್ತಿ; ವಿಸ್ತಾರ; ಹರವು.
  4. (ರೈಲಿನ) ಗೇಜು; ಪ್ರಮಾಣಕ (ಅಳತೆ); ರೈಲು ಮಾರ್ಗದಲ್ಲಿ ಕಂಬಿಗಳ ಯಾ ಎದುರುಬದುರಿನ ಚಕ್ರಗಳ ನಡುವಣ ಅಗಲ: broad gauge ಬ್ರಾಡ್‍ ಗೇಜು; ಪ್ರಮಾಣಕ ಅಳತೆಗಿಂತ ಹೆಚ್ಚು ಗೇಜಿನ. narrow gauge ಪ್ರಮಾಣಕ ಅಳತೆಗಿಂತ ಕಡಿಮೆ ಗೇಜಿನ.
  5. (ನೌಕಾಯಾನ) (ಗಾಳಿ ಬೀಸುವ ದಿಕ್ಕಿಗೂ ಮತ್ತೊಂದು ಹಡಗಿಗೂ ಸಂಬಂಧಿಸಿದಂತೆ) ಹಡಗಿನ ಸ್ಥಾನ; ಹಡಗೊಂದು ಇರುವ ಜಾಗ.
  6. ಮಾಪಕ:
    1. ಮಳೆಯ ಮೊತ್ತ, ಹೊಳೆಯ ಉಬ್ಬರವಿಳಿತ, ಸಮುದ್ರದ ಏರಿಳಿತ, ಗಾಳಿಯ ಬಲ, ಮೊದಲಾದವನ್ನುಅಳೆಯುವ, ಅಳತೆಗುರುತುಗಳುಳ್ಳ ಉಪಕರಣ, ಸಾಧನ.
    2. ಪಾತ್ರೆಯ ಒಳಗೆ ಇರುವ ದ್ರವ ಮೊದಲಾದವುಗಳ ಎತ್ತರವನ್ನು ತೋರಿಸಲು ಪಾತ್ರೆಗೆ ತಗುಲಿಸಿರುವ ಅಳೆಯುವ ಸಾಧನ.
    3. ತಂತಿ, ಉಪಕರಗಳು, ಮೊದಲಾದವುಗಳ ಅಳತೆಗಳನ್ನು ಪರೀಕ್ಷಿಸಿ, ಸರಿನೋಡುವ ಸಾಧನ.
  7. (ಸಮಾನಾಂತರ ರೇಖೆಗಳನ್ನೆಳೆಯುವುದಕ್ಕಾಗಿ ಬಳಸುವ, ಬೇಕಾದಂತೆ ಹೊಂದಿಸಿಕೊಳ್ಳಬಲ್ಲ) ಬಡಗಿಯ ರೇಖಕಸಾಧನ.
  8. (ಮುದ್ರಣ) (ಪುಟದ ಅಂಚಿನ ಅಗಲ ಮೊದಲಾದವನ್ನು ತಕ್ಕಂತೆ ಹೊಂದಿಸಿಕೊಳ್ಳಲು ಬಳಸುವ) ಅಳತೆಯ ಪಟ್ಟಿ.
  9. ಅಂದಾಜು; ಅಂದಾಜು ಮಾಡಲು ಆಧಾರವಾದ ಸಾಧನ, ವಿಧಾನ, ಉಪಾಯ.
  10. ಮನದಂಡ; ಅಳತೆಗೋಲು; ಒರೆಗಲ್ಲು; ನಿಕಷ; ಒಂದು ವಸ್ತು ಯಾ ವಿಷಯದ ಮೌಲ್ಯವನ್ನು ಗೊತ್ತುಹಚ್ಚಲು ಬೇಕಾದ ಮಾಪಕ.
ಪದಗುಚ್ಛ
  1. have the weather gauge of
    1. (ಹಡಗಿನ ವಿಷಯದಲ್ಲಿ)(ಮತ್ತೊಂದು ಹಡಗಿರುವ ಸ್ಥಾನಕ್ಕೆ ಸಂಬಂಧಿಸಿದಂತೆ) ಗಾಳಿಯ ದಿಕ್ಕಿಗೆ ಇರು; ಗಾಳಿ ಬೀಸುವ ಕಡೆಗಿರು.
    2. (ರೂಪಕವಾಗಿ) ಅನುಕೂಲ ಸ್ಥಿತಿಯಲ್ಲಿರು; ಮೇಲುಗೈಯಾಗಿರುವ ಸ್ಥಾನದಲ್ಲಿರು; ಎದುರಾಳಿಯನ್ನು ಸೋಲಿಸುವ ಸ್ಥಿತಿಯಲ್ಲಿರು.
  2. take the gauge of ಅಳೆ; ಅಂದಾಜು ಮಾಡು.
See also 1gauge
2gauge ಗೇಜ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ತಂತಿ, ಬೋಲ್ಟು, ಮೊದಲಾದ ಪ್ರಮಾಣಕ ಗಾತ್ರದ ವಸ್ತುಗಳನ್ನು, ಮೊತ್ತದಲ್ಲೋ ಬಲದಲ್ಲೋ ಏರಿಳಿತಗಳುಳ್ಳ ಮಳೆ, ಗಾಳಿ, ಮೊದಲಾದವನ್ನು ಯಾವುದೇ ಧಾರಕದಲ್ಲಿರುವ ದ್ರವದ ಆಳವನ್ನು) ಮಾಪನ ಮಾಡು; ನಿಷ್ಕೃಷ್ಟವಾಗಿ ಅಳೆ.
  2. (ಪೀಪಾಯಿ ಮೊದಲಾದವುಗಳ) ಒಳಗಣ ಘನ ಅಳತೆಯನ್ನು (ಗಣಿತದಿಂದಲೋ ಅಳೆಯುವುದರಿಂದಲೋ) ಕಂಡುಹಿಡಿ.
  3. (ವ್ಯಕ್ತಿ, ಶೀಲ, ಮೊದಲಾದವನ್ನು) ಅಂದಾಜುಮಾಡು; ಅಳೆ.
    1. ಪ್ರಮಾಣಕ ಗಾತ್ರಕ್ಕೆ, ಅಳತೆಗೆ, ಯಾ ಆಕಾರಕ್ಕೆ ತರು.
    2. ಹೀಗೆ ಏಕರೂಪಗೊಳಿಸು.