gather ಗ್ಯಾದರ್‍
ಸಕರ್ಮಕ ಕ್ರಿಯಾಪದ
  1. ಒಟ್ಟುಗೂಡಿಸು; ಒಟ್ಟೈಸು; ಒಟ್ಟಿಗೆ – ತರು, ಸೇರಿಸು, ಕೂಡಿಸು.
  2. ಕೂಡಹಾಕು; ಸಂಗ್ರಹಿಸು; ಸಂಚಯಿಸು; ಸಂಕಲಿಸು; ಶೇಖರಿಸು.
  3. (ಹೂವನ್ನು) ಸಂಗ್ರಹಿಸು; ಸಂಚಯಮಾಡು; ಹೆಕ್ಕು; ತಿರಿ; ಆಯು; ಬಿಡಿಸು; ಕೊಯ್ಯು; ಕೀಳು.
  4. (ಕುಯಿಲಿನ ಧಾನ್ಯವನ್ನು) ಒಟ್ಟುಗೂಡಿಸು; ಸಂಗ್ರಹಿಸು; ಶೇಖರಿಸು.
  5. (ಶಕ್ತಿ, ತ್ರಾಣ) ತಂದುಕೊ; ಕೂಡಿಸಿಕೊ: invalid is gathering strength ರೋಗಿಯು ಶಕ್ತಿಯನ್ನು ಕೂಡಿಸಿಕೊಳ್ಳುತ್ತಿದ್ದಾನೆ.
  6. (ಉಸಿರು) ತಂದುಕೊ; ಕೂಡಿಸಿಕೊ: gathering my breath I resumed the climb ಉಸಿರುಗೂಡಿಸಿಕೊಂಡು ಪುನಃ ಏರತೊಡಗಿದೆ.
  7. ಊಹಿಸು; ಗ್ರಹಿಸು; ಅನುಮಾನಿಸು; ತರ್ಕಿಸು; ಯಾವುದೇ ಆಧಾರದಿಂದ ನಿರ್ಣಯಿಸು: I gather that he is the real leader ಅವನೇ ನಿಜವಾದ ಮುಂದಾಳು ಎಂದು ನಾನು ಊಹಿಸುತ್ತೇನೆ, ತರ್ಕಿಸುತ್ತೇನೆ.
  8. (ವಸ್ತ್ರ, ಉಡುಪು,ಮೊದಲಾದವನ್ನು) ಮಡಿಕೆಮಡಿಕೆಯಾಗಿ ಸೇರಿಸು; ತೆರೆತೆರೆಯಾಗಿ ಜೋಡಿಸು; ನಿರಿಗೆನಿರಿಗೆಯಾಗಿ ಕಟ್ಟು.
  9. (ಹುಬ್ಬು) ಗಂಟುಹಾಕಿಕೊ.
  10. ನೆಲದಿಂದ ಎತ್ತಿಕೊ, ಆಯ್ದುಕೊ.
  11. (ಕೈಕಾಲು, ದೇಹ, ಮೊದಲಾದವನ್ನು) ಮಡಿಚಿಕೊ; ಮುದುರು; ಸಂಕುಚಿಸು.
  12. (ಅಸ್ತವ್ಯಸ್ತವಾಗಿರುವ ಸಂಗತಿಗಳನ್ನು, ಸತ್ಯಾಂಶಗಳನ್ನು) ಒಟ್ಟುಗೂಡಿಸು; ಸಂಗ್ರಹಿಸು; ಕ್ರೋಡೀಕರಿಸು.
  13. (ಯಾವುದೇ ಕಾರ್ಯ, ಪ್ರಯತ್ನಕ್ಕಾಗಿ ಆಲೋಚನೆ, ಮೊದಲಾದವನ್ನು) ಕೂಡಿಸಿಕೊ: He rose, gathering up his thoughts ತನ್ನ ಆಲೋಚನೆಗಳನ್ನೆಲ್ಲ ಕೂಡಿಸಿಕೊಂಡು ಅವನು ಮೇಲಕ್ಕೆದ್ದ.
  14. ಹೆಚ್ಚಾಗಿ ಪಡೆ; ಅಧಿಕವಾಗಿ ಕೂಡಿಸಿಕೊ; ಹೆಚ್ಚುವರಿಯಾಗಿ ಹೊಂದು: books gathering dust ಧೂಳು ತುಂಬುತ್ತಿರುವ ಪುಸ್ತಕಗಳು. train gathered speed ರೈಲು ವೇಗವಾಯಿತು, ವೇಗ ಹೆಚ್ಚಿಸಿಕೊಂಡಿತು.
  15. (ಪುಸ್ತಕದ ರಟ್ಟುಕಟ್ಟುವ ಕೆಲಸದಲ್ಲಿ) ಮುದ್ರಿತ ಹಾಳೆಗಳನ್ನು ಅನುಕ್ರಮದಲ್ಲಿ ಜೋಡಿಸು.
ಅಕರ್ಮಕ ಕ್ರಿಯಾಪದ
  1. ಒಟ್ಟುಗೂಡು; ಒಟ್ಟಿಗೆ ಸೇರು; ಒಟ್ಟಾಗು.
  2. ಗುಂಪುಗೂಡು; ಗುಂಪಾಗಿ ಸೇರು; ಸಾಮೂಹಿಕವಾಗಿ ನೆರೆ.
  3. ರಾಶಿಯಾಗು; ಸಮೂಹವಾಗು; ಸಂಚಯವಾಗು; ಸೇರಿಕೊಳ್ಳುತ್ತಾ ಹೋಗು; ಸೇರಿಕೊಂಡು ಬೆಳೆ; ಅಂಶಗಳು ರಾಶಿಗೂಡುತ್ತಾ, ಬೆಳೆಯುತ್ತಾ ಹೋಗು: the tale gathered like a snowball ಆ ಕತೆಯು ಹಿಮದ ಉಂಡೆಯಂತೆ (ಹೊಸ ಹೊಸ ಅಂಶಗಳನ್ನು ಕೂಡಿಸಿಕೊಳ್ಳುತ್ತಾ) ಬೆಳೆಯಿತು.
  4. (ಗಾಯ ಮೊದಲಾದವುಗಳ ವಿಷಯದಲ್ಲಿ) ಪಕ್ವವಾಗು; ಹಣ್ಣಾಗು; ತುಂಬಿಕೊಂಡು ಪಕ್ವಸ್ಥಿತಿಗೆ ಬರು; ಕೀವುಗಟ್ಟಿ ಊದುತ್ತಾ ಹೋಗಿ ವ್ರಣ ಒಡೆಯುವಂತಾಗು: a redness arose in the skin, swelled, gathered and burst ಚರ್ಮ ಕೆಂಪಾಗಿ, ಉಬ್ಬಿಕೊಂಡು ಹುಣ್ಣಾಗಿ ಕೊನೆಗೆ ಒಡೆದುಹೋಯಿತು.
  5. (ರೂಪಕವಾಗಿ) (ಸಾಮಾನ್ಯವಾಗಿ ವಿಷಮಸ್ಥಿತಿಯ ವಿಷಯದಲ್ಲಿ) ಪರಿಪಕ್ವವಾಗು; ಹದಕ್ಕೆ ಬರು; ಸ್ಫೋಟಕ ಸ್ಥಿತಿಗೆ ಬರು.
ಪದಗುಚ್ಛ

gather way (ಹಡಗಿನ ವಿಷಯದಲ್ಲಿ) ಚಲಿಸಲಾರಂಭಿಸು; ಚಲಿಸತೊಡಗು: the ship soon gathered way ಹಡಗು ಬೇಗ ಚಲಿಸತೊಡಗಿತು.

ನುಡಿಗಟ್ಟು
  1. be gathered to one’s fathers ಪಿತೃಲೋಕ ಸೇರು; ಸಾಯು.
  2. gather head
    1. ಶಕ್ತಿ ಗಳಿಸು; ಬಲಗೂಡಿಸಿಕೊ: I will go to a health resort and gather head ಆರೋಗ್ಯಧಾಮಕ್ಕೆ ಹೋಗಿ ನಾನು ಬಲಗೂಡಿಸಿಕೊಳ್ಳುತ್ತೇನೆ.
    2. ವರ್ಧಿಸುತ್ತಾ ಹೋಗು; ಬೆಳೆಯುತ್ತಾ ಹೋಗು: sin gathering head shall lead to death ಪಾಪ ಬೆಳೆಯುತ್ತಾ ಹೋಗಿ ಸಾವಿಗೆ ಒಯ್ಯುತ್ತದೆ.
  3. rolling stone gathers no $^1$moss.