See also 2gas
1gas ಗ್ಯಾಸ್‍
ನಾಮವಾಚಕ
(ಬಹುವಚನ gases ಉಚ್ಚಾರಣೆ ಗ್ಯಾಸಿಸ್‍).
  1. ಅನಿಲ:
    1. ಮುಖ್ಯವಾಗಿ ಸಾಮಾನ್ಯ ತಾಪದಲ್ಲಿ ದ್ರವ ಯಾ ಘನವಾಗದಿರುವ ಪದಾರ್ಥ.
    2. ಇಂಧನಾನಿಲ; ಸಾಮಾನ್ಯವಾಗಿ ವಿವಿಧ ಹೈಡ್ರೊಕಾರ್ಬನ್ನುಗಳನ್ನೊಳಗೊಂಡಿರುವ, ಕಲ್ಲಿದ್ದಲು ಅನಿಲದಂತೆ ಇಂಧನವಾಗಿ ಉಪಯೋಗಿಸುವ ಯಾವುದೇ ಮಿಶ್ರಾನಿಲ.
    3. (ಗಣಿಗಾರಿಕೆ) ಈಥೇನ್‍ ಮತ್ತು ವಾಯುವಿನ ಸ್ಫೋಟಕ ಮಿಶ್ರಣ.
    4. ಬಲೂನುಗಳನ್ನು ತುಂಬಲು ಬಳಸುವ ಹೈಡ್ರೋಜನ್‍, ಹೀಲಿಯಂ, ಮೊದಲಾದವು.
    5. ಪ್ರಜ್ಞೆ ತಪ್ಪಿಸಲು ಬಳಸುವ ನೈಟ್ರಸ್‍ ಆಕ್ಸೈಡು ಯಾ ಇತರ ಅನಿಲ.
    6. ಯುದ್ಧದಲ್ಲಿ ಶತ್ರುಗಳ ಉಸಿರು ಕಟ್ಟಿಸಲು ಬಳಸುವ ಯಾವುದೇ ವಿಷಾನಿಲ.
    7. ದೀಪಗಳಿಗೆ ಬಳಸುವ ಅನಿಲಧಾರೆ.
  2. (ಅಮೆರಿಕನ್‍ ಪ್ರಯೋಗ) (ಆಡುಮಾತು) ಪೆಟ್ರೋಲು; ಗ್ಯಾಸೊಲೀನು.
  3. (ಆಡುಮಾತು) ಗೊಡ್ಡು ಹರಟೆ; ಕೆಲಸಕ್ಕೆ ಬಾರದ ಮಾತು.
  4. (ಆಡುಮಾತು) ಗೊಡ್ಡುಹರಟೆ; ಕೆಲಸಕ್ಕೆ ಬಾರದ ಬಡಾಯಿ; ಬೊಗಳೆ; ಬುರುಡೆ; ಪೊಳ್ಳುಮಾತು.
  5. (ಅಶಿಷ್ಟ) ತುಂಬ ಆಕರ್ಷಕವಾದ ಯಾ ಪ್ರಭಾವಕಾರಿಯಾದ ವ್ಯಕ್ತಿ, ವಸ್ತು.
ಪದಗುಚ್ಛ
  1. natural gas ನೈಸರ್ಗಿಕಾನಿಲ; ಭೂಮಿಯಡಿ ದೊರೆಯುವ, ಕಲ್ಲಿದ್ದಲು ಮೊದಲಾದವುಗಳ ಅನಿಲ.
  2. poison gas = 1gas \((1f)\).
ನುಡಿಗಟ್ಟು

step on the gas

  1. ಕಾಲಿನಿಂದ ವೇಗವರ್ಧಕದ ಪೆಡಲನ್ನು ಒತ್ತಿ ಮೋಟಾರು ವಾಹನದ ವೇಗ ಹೆಚ್ಚಿಸು.
  2. (ರೂಪಕವಾಗಿ) ಅವಸರ ಮಾಡು; ಅವಸರಪಡಿಸು; ತ್ವರೆಮಾಡು.
See also 1gas
2gas ಗ್ಯಾಸ್‍
ಸಕರ್ಮಕ ಕ್ರಿಯಾಪದ
  1. ಅನಿಲಕ್ಕೆ – ಒಡ್ಡು, ಒಳಪಡಿಸು.
  2. (ಕೊಠಡಿಗೆ, ರೈಲ್ವೆ ಬೋಗಿಗೆ) ಅನಿಲ ಒದಗಿಸು.
  3. (ಶತ್ರುವಿನ ಯಾ ಒಂದು ಸ್ಥಳದ ಮೇಲೆ) ವಿಷಾನಿಲ ಪ್ರಯೋಗಿಸು.
  4. (ದಾರದಿಂದ ಯಾ ಕಸೂತಿ ಪಟ್ಟಿಯಿಂದ ಎದ್ದುಕೊಂಡ ಬಿಡಿದಾರಗಳನ್ನು ಹೋಗಲಾಡಿಸಲು) ಅನಿಲ ಜ್ವಾಲೆಯಲ್ಲಿ ಆಡಿಸು.
  5. (ಅಮೆರಿಕನ್‍ ಪ್ರಯೋಗ) (ಆಡುಮಾತು) (ಮೋಟಾರು ವಾಹನದ ಟ್ಯಾಂಕಿಗೆ) ಪೆಟ್ರೋಲ್‍ ತುಂಬು, ಭರ್ತಿಮಾಡು.
ಅಕರ್ಮಕ ಕ್ರಿಯಾಪದ

(ಆಡುಮಾತು) ಬುರುಡೆ ಹೊಡಿ; ಬೊಗಳೆ ಬಿಡು; ಬಡಾಯಿ ಕೊಚ್ಚು; ಗಹಾ ಹೊಡಿ.

ಪದಗುಚ್ಛ

gas up (ಅಮೆರಿಕನ್‍ ಪ್ರಯೋಗ) = 2gas ಸಕರ್ಮಕ ಕ್ರಿಯಾಪದ \((5)\).