garnishment ಗಾರ್ನಿಷ್‍ಮಂಟ್‍
ನಾಮವಾಚಕ
  1. ಅಲಂಕರಣ; ಅಂದಗೊಳಿಕೆ; ಅಂದವಾಗಿ ಅಣಿಮಾಡುವುದು.
  2. (ನ್ಯಾಯಶಾಸ್ತ್ರ) ಗಾರ್ನಿಷ್‍ಮೆಂಟು; ಗಾರ್ನಿಷಿ ನೋಟೀಸು, ಪತ್ರ:
    1. ಹಣದ ಜಫ್ತಿಗೆ ಗುರಿಯಾದ ಸಾಲಗ್ರಾಹಿಯ ಯಾ ಪ್ರತಿವಾದಿಯ ಹಣವನ್ನು ಇಟ್ಟುಕೊಂಡಿರುವ ಅವನ ಉತ್ತರಾಧಿಕಾರಿಯಿಂದ ಯಾ ಇತರ ವ್ಯಕ್ತಿಯಿಂದ ಆ ಹಣವನ್ನು ಕಾನೂನುರೀತ್ಯಾ ಜಫ್ತಿ ಮಾಡಲು, ವಶಪಡಿಸಿಕೊಳ್ಳಲು ಹೊರಡಿಸುವ ನೋಟೀಸು, ಆಜ್ಞಾಪತ್ರ, ಯಾ ತಿಳಿವಳಿಕೆ ಪತ್ರ.
    2. ಹಣದ ಜಫ್ತಿಗೆ ಗುರಿಯಾದ ಸಾಲಗ್ರಾಹಿಯ ಹಣವನ್ನು ಇಟ್ಟುಕೊಂಡಿರುವವನಿಗೆ ಆ ಹಣವನ್ನು ಜಫ್ತಿ ಮಾಡಲಾಗುತ್ತದೆಯೆಂದು ತಿಳಿಸುವ ಕೋರ್ಟಿನ ನೋಟೀಸು, ತಿಳಿವಳಿಕೆ ಪತ್ರ.