See also 2garnish
1garnish ಗಾರ್ನಿಷ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ತಿಂಡಿ ತೀರ್ಥಗಳನ್ನು ಊಟದ ಮೇಜಿನ ಮೇಲೆ) ಆಕರ್ಷಕವಾಗಿ ಅಲಂಕರಿಸು; ಅಂದವಾಗಿ ಅಣಿಮಾಡು.
  2. (ನ್ಯಾಯಶಾಸ್ತ್ರ) ಸಾಲಗ್ರಾಹಿಗೆ ಯಾ ಪ್ರತಿವಾದಿಗೆ ಸೇರಿದ ಹಣವನ್ನು ಕಾನೂನು ರೀತ್ಯಾ ಜಫ್ತಿ ಮಾಡಲು ಯಾ ವಶಪಡಿಸಿಕೊಳ್ಳಲು (ಅದನ್ನು ಇಟ್ಟುಕೊಂಡಿರುವ ವ್ಯಕ್ತಿಗೆ) ನೋಟೀಸನ್ನು ಜಾರಿಮಾಡು, (ಬರಹದಲ್ಲಿ) ತಿಳುವಳಿಕೆ ಕೊಡು.
  3. ಈಗಾಗಲೇ ಬೇರೆಯವರ ನಡುವೆ ನಡೆಯುತ್ತಿರುವ ದಾವೆಗೆ (ಒಬ್ಬನನ್ನು) ಕಕ್ಷಿಯನ್ನಾಗಿ ಕೋರ್ಟು ಮೂಲಕ – ಕರೆಸು, ಬರಮಾಡು.
See also 1garnish
2garnish ಗಾರ್ನಿಷ್‍
ನಾಮವಾಚಕ
  1. ಭೋಜ್ಯಾಲಂಕಾರ; ಖಾದ್ಯಾಲಂಕಾರ; ತಿಂಡಿ ತೀರ್ಥಗಳು ಚೆನ್ನಾಗಿ ಕಾಣುವಂತೆ ಯಾ ರುಚಿಕರವಾಗುವಂತೆ ಮಾಡಲು ಅವಕ್ಕೆ ಸೇರಿಸುವ ಅಲಂಕಾರದ ಯಾ ರುಚಿಕಾರಕ ವಸ್ತುಗಳು, ಪದಾರ್ಥಗಳು.
  2. (ರೂಪಕವಾಗಿ) ಕಾವ್ಯಾಲಂಕಾರಗಳು; ಸಾಹಿತ್ಯಕೃತಿ ಸುಂದರವಾಗಿ ಕಾಣಿಸುವಂತಾಗಲು ಬಳಸುವ ಅಲಂಕಾರ ರೀತಿಗಳು.