gargoyle ಗಾರ್ಗಾಯ್ಲ್‍
ನಾಮವಾಚಕ
  1. ನೀರುಮೂತಿ; ಜಲಮುಖ; ಜಲಸೂತ್ರ; ಮಾಳಿಗೆಯಿಂದ ಸುರಿಯುವ ನೀರು ಗೋಡೆಗೆ ತಗುಲದಂತೆ ಕೆಳಕ್ಕೆ ಬೀಳಲು ಮಾಡಿರುವ (ಮುಖ್ಯವಾಗಿ ಹಳೆಯ ಗಾಥಿಕ್‍ ಶಿಲ್ಪದ ಕಟ್ಟಡಗಳಲ್ಲಿ ಮನುಷ್ಯನ ಯಾ ಪ್ರಾಣಿಯ ಮುಖ, ಬಾಯಿ, ದೇಹ, ಮೊದಲಾದವುಗಳ ರೂಪಿನ) ವಿಕಟಾಕೃತಿಯ ಮೂತಿ, ದೋಣಿ. Figure: gargoyle-1
  2. (ಯಾವುದೇ) ವಿಕಟಶಿಲ್ಪ; ವಿಕಟಾಕೃತಿ: strange Ethiopian gargoyle carved on the ebony footposts of his bed ಅವನ ಎಬೊನಿ ಮರದ ಮಂಚದ ಕಾಲಿನ ಮೇಲೆ ಕೊರೆದ ವಿಚಿತ್ರ ಇತಿಯೋಪಿಯನ್‍ ಆಕೃತಿಗಳು.
  3. ವಿಕಟಮುಖಿ; ವಿಕಟವಾದ ಮುಖ, ಮೂತಿಯುಳ್ಳ ವ್ಯಕ್ತಿ: what you need is a woman, older of course... but not a gorgon or a gargoyle ನಿನಗೆ ಬೇಕಾಗಿರುವುದು ಒಂದು ಹೆಣ್ಣು, .... ನಿಜವಾಗಿ ಸ್ವಲ್ಪ ವಯಸ್ಸಾಗಿರುವ ಹೆಣ್ಣು, ಆದರೆ ಕರಾಳಮುಖಿಯೋ ವಿಕಟಮುಖಿಯೋ ಅಲ್ಲ.