See also 2garden  3garden
1garden ಗಾರ್ಡನ್‍
ನಾಮವಾಚಕ
  1. (ಹೂವು, ಹಣ್ಣು, ಕಾಯಿಪಲ್ಯಗಳು ಬೆಳೆಯುವ) ತೋಟ.
  2. (ಸಾರ್ವಜನಿಕ ವಿಹಾರಕ್ಕಾಗಿ ಮಾಡಿರುವ) ವನ; ಉಪವನ; ಉದ್ಯಾನ.
  3. ವಿಶೇಷ ಫಲವತ್ತಾದ ಪ್ರದೇಶ; ಪ್ರಾಂತ: the garden of England ಇಂಗ್ಲೆಂಡಿನ ಕೆಂಟ್‍ ಪ್ರಾಂತ, ಎವಶಾಂನ ಕಣಿವೆ ಮೊದಲಾದ ಪ್ರದೇಶಗಳು.
  4. (ಸಾಮಾನ್ಯವಾಗಿ ಬಹುವಚನದಲ್ಲಿ ಹೆಸರಿನ ಮುಂದೆ) (ಬೀದಿ, ಊರು, ಮೊದಲಾದವುಗಳ ಹೆಸರಿಗೆ ಸಮಾಸ ಉತ್ತರ ಪದವಾಗಿ ಬಂದಾಗ) ಬೀದಿ, ಚೌಕ, ಮೊದಲಾದವು; ತೋಟವೆಂದು ಹೆಸರಿಟ್ಟ ಮನೆಗಳ ತಂಡ, ಶ್ರೇಣಿ: Onslow Gardens, Spring Gardens.
  5. ಆಹಾರ ಪಾನೀಯಗಳನ್ನು ಒದಗಿಸುವ ವ್ಯವಸ್ಥೆ ಇರುವ ಉಪವನ: beer garden ಬಿಯರ್‍ ಉದ್ಯಾನ. tea garden ಟೀ ಉದ್ಯಾನ.
  6. (ಅಮೆರಿಕನ್‍ ಪ್ರಯೋಗ) ದೊಡ್ಡ ಸಾರ್ವಜನಿಕ ಸಭಾಂಗಣ.
ಪದಗುಚ್ಛ
  1. common or garden (ಆಡುಮಾತು) ಸಾಧಾರಣವಾದ; ಸಾಮಾನ್ಯವಾದ.
  2. the Garden ಎಪಿಕ್ಯೂರಿಯನ್‍ ತತ್ತ್ವ; ಎಪಿಕ್ಯೂರಸ್‍ ಎಂಬ ಕ್ರಿಸ್ತಪೂರ್ವ 3ನೇ ಶತಮಾನದ ಗ್ರೀಕ್‍ ತತ್ತ್ವಜ್ಞಾನಿ (ಉದ್ಯಾನದಲ್ಲಿ ಬೋಧೆ ಮಾಡುತ್ತಿದ್ದ ಕಾರಣದಿಂದ) ಬೋಧಿಸಿದ ಮತ, ಸಿದ್ಧಾಂತ.
ನುಡಿಗಟ್ಟು
  1. everything in the garden is lovely (ಆಡುಮಾತು) ಎಲ್ಲವೂ ಚೆನ್ನಾಗಿದೆ, ಸರಿಯಾಗಿದೆ: But not everything in the garden was lovely and the public, in particular, was not sure what the higher education was for ಆದರೆ, ಎಲ್ಲವೂ ಸರಿಯಾಗಿರಲಿಲ್ಲ; ಮುಖ್ಯವಾಗಿ ಸಾರ್ವಜನಿಕರಿಗೆ ಉಚ್ಚ ಶಿಕ್ಷಣದಿಂದ ಏನು ಪ್ರಯೋಜನ ಎಂಬುದು ಖಾತ್ರಿಯಾಗಿರಲಿಲ್ಲ.
  2. lead up the garden (path) (ಆಡುಮಾತು) ದಾರಿ ತಪ್ಪಿಸು; ತಪ್ಪುದಾರಿಗೆ ಎಳೆ; ಕೆಟ್ಟ ಹಾದಿಗೆ ಸೆಳೆ.
See also 1garden  3garden
2garden ಗಾರ್ಡನ್‍
ಗುಣವಾಚಕ
  1. ಕೃಷಿಮಾಡಿದ; ನೈಸರ್ಗಿಕವಾಗಿ ಬೆಳೆದಿರದ: garden plants ಉದ್ಯಾನ ಸಸ್ಯಗಳು; ತೋಟದಲ್ಲಿ (ಬೆಳೆಸಿದ) ಗಿಡಗಳು.
  2. (ಸರ್ವೇ) ಸಾಮಾನ್ಯವಾದ; ಸಾಧಾರಣವಾದ.
  3. ತೋಟವಾಸಿ; ಉದ್ಯಾನವಾಸಿ; ತೋಟದಲ್ಲಿ ವಾಸಿಸುವ, ಜೀವಿಸುವ: garden-spider ತೋಟದ ಜೇಡ.
See also 1garden  2garden
3garden ಗಾರ್ಡನ್‍
ಅಕರ್ಮಕ ಕ್ರಿಯಾಪದ

ತೋಟ ಮಾಡು; ತೋಟದ ಯಾ ತೋಟದಲ್ಲಿ ಕೆಲಸ ಮಾಡು; ತೋಟಗಾರನಾಗಿ ಕೆಲಸ ಮಾಡು.