garble ಗಾರ್ಬ್‍ಲ್‍
ಸಕರ್ಮಕ ಕ್ರಿಯಾಪದ
  1. (ವಿರಳ ಪ್ರಯೋಗ) ಅತ್ಯುತ್ತಮವಾದುದನ್ನು – ಆರಿಸು, ಆಯು, ಚುನಾಯಿಸು; ಎಲ್ಲಕ್ಕಿಂತ ಒಳ್ಳೆಯದನ್ನು ತೆಗೆದುಕೊ.
  2. (ವಿಷಯಗಳು, ಹೇಳಿಕೆಗಳು, ಮೊದಲಾದವುಗಳಿಂದ ತನಗೆ ಬೇಕಾದುದನ್ನು ಮಾತ್ರ, ಸಾಮಾನ್ಯವಾಗಿ ದುರುದ್ದೇಶದಿಂದ) ಆಯ್ಕೆ ಮಾಡು; ಎತ್ತಿ ಹೇಳು.
  3. ತಪ್ಪು ಅಭಿಪ್ರಾಯ ಕೊಡಲು (ಹೇಳಿಕೆಯಲ್ಲಿ) ಕೆಲವು ಭಾಗ ಬಿಟ್ಟು – ಉದಾಹರಿಸು, ಉಲ್ಲೇಖಿಸು.
  4. (ಏನೊಂದೂ ದುರುದ್ದೇಶವಿಲ್ಲದೆ ಹೇಳಿಕೆ, ವಾಸ್ತವಾಂಶ, ಮೊದಲಾದವನ್ನು) ತಿರುಚು; ತಿರುಚಿ ಹೇಳು; ಆಭಾಸ ಮಾಡಿ ಹೇಳು; ಅಸ್ತವ್ಯಸ್ತಗೊಳಿಸು; ಗೊಂದಲಗೊಳಿಸು; ಗೊಂದಲವಾಗುವಂತೆ ನಿರೂಪಿಸು.