gap ಗ್ಯಾಪ್‍
ನಾಮವಾಚಕ
  1. (ಗೋಡೆ ಯಾ ಬೇಲಿಯಲ್ಲಿನ) ಕಂಡಿ; ತೆರಪು; ಸಂದು.
  2. ಕಣಿವೆ; ಗಿರಿಕಂದರ; ಘಾಟಿ.
  3. ತೆರಪು; ಖಾಲಿ; ಅನುಕ್ರಮದಲ್ಲಿ ನಡುವೆ ಬಿಟ್ಟುಹೋದ ಜಾಗ, ಅಂತರ, ಯಾ ಸಂಭವಿಸಿದ ಭಂಗ.
  4. (ಅಭಿಪ್ರಾಯ, ಸಹಾನುಭೂತಿ, ಮೊದಲಾದವುಗಳ ನಡುವಣ, ಸಾಮಾನ್ಯವಾಗಿ ಅಹಿತಕರವಾದ) ವ್ಯತ್ಯಾಸ; ಅಂತರ: the gap between ideals and actions ಆದರ್ಶಗಳಿಗೂ ಆಚರಣೆಗಳಿಗೂ ನಡುವಣ ಅಂತರ, ವ್ಯತ್ಯಾಸ.
ಪದಗುಚ್ಛ

bridge, close, fill, stop, supply a gap ಕೊರತೆಯನ್ನು ತುಂಬು, ಭರ್ತಿಮಾಡು.