See also 2gangway
1gangway ಗ್ಯಾಂಗ್‍ವೇ
ನಾಮವಾಚಕ

ಗ್ಯಾಂಗ್‍ವೇ; ನಡುಹಾದಿ:

  1. (ಮುಖ್ಯವಾಗಿ ಪೀಠಪಂಕ್ತಿಗಳ ಮಧ್ಯೆ ತಿರುಗಾಡಲು ಬಿಟ್ಟಿರುವ) ನಡುದಾರಿ; ಓಣಿ.
  2. ಬ್ರಿಟಿಷ್‍ ಪಾರ್ಲಿಮೆಂಟಿನಲ್ಲಿ ಪ್ರತಿಯೊಂದು ಪಕ್ಷದ ಪ್ರಭಾವೀ ಸದಸ್ಯರನ್ನೂ ಹಿಂಬೆಂಚಿಗರನ್ನೂ ಪ್ರತ್ಯೇಕಿಸುವಂತೆ ಪೀಠಪಂಕ್ತಿಗಳ ನಡುವೆ ಅಡ್ಡಲಾಗಿ ಹಾದುಹೋಗುವ ದಾರಿ.
  3. ಹಡಗಿನ ಮುನ್ನಟ್ಟಕ್ಕೂ ಮೇಲಟ್ಟಕ್ಕೂ ನಡುವೆ ಇರುವ ವೇದಿಕೆಯಂಥ ಎತ್ತರದ ಹಾದಿ.
  4. ಹಡಗಿನ ಕಟಕಟೆಗಳ ನಡುವೆಯಿಂದ ಹಡಗನ್ನು ಹತ್ತಲು ಯಾ ಅದರಿಂದ ಇಳಿದು ಬರಲು ಅನುಕೂಲವಾಗುವಂತೆ ಹಾಕಿದ ಹಲಗೆಹಾದಿ, ನಡುಸೇತುವೆ, ಮೊದಲಾದವು.
  5. ಸೇತುವೆ; ಹಡಗಿನಿಂದ ದಂಡೆಗೆ ಹೋಗಲು ಕಟ್ಟಡ ನಿರ್ಮಾಣವಾಗುತ್ತಿರುವ ಜಾಗ ಮೊದಲಾದವುಗಳಲ್ಲಿ ಓಡಾಡಲು ಮಾಡಿರುವ ಸೇತುವೆಯಂಥ ಹಾದಿ.
ಪದಗುಚ್ಛ
  1. above gangway (ಸದಸ್ಯರ ವಿಷಯದಲ್ಲಿ) ಪಕ್ಷದ ಅಧಿಕೃತ ಧೋರಣೆಗೆ ನಿಕಟವಾಗಿರುವ, ಹತ್ತಿರದ.
  2. below gangway (ಸದಸ್ಯರ ವಿಷಯದಲ್ಲಿ) ಪಕ್ಷದ ಅಧಿಕೃತ ಧೋರಣೆಗೆ ನಿಕಟವಾಗಿರದ, ದೂರವಿರುವ.
See also 1gangway
2gangway ಗ್ಯಾಂಗ್‍ವೇ
ಭಾವಸೂಚಕ ಅವ್ಯಯ

(ದಯವಿಟ್ಟು) ದಾರಿಬಿಡಿ!