gamut ಗ್ಯಾಮಟ್‍
ನಾಮವಾಚಕ
  1. (ಸಂಗೀತ) ಮಧ್ಯಯುಗದ ಸ್ವರಶ್ರೇಣಿಯಲ್ಲಿ ಮೊದಲ ಸ್ವರ.
  2. (ಸಂಗೀತ) (ಅಂಗೀಕೃತವಾಗಿರುವ ಎಲ್ಲ ಸ್ವರಗಳ) ಪೂರ್ಣ ಸ್ವರಶ್ರೇಣಿ; ಸ್ವರಗ್ರಾಮ.
  3. (ಸಂಗೀತ) ವರೀಯ ಸ್ವರಾಷ್ಟಕ ಶ್ರೇಣಿ.
  4. (ಒಂದು ಕಾಲದ ಯಾ ಜನರ) ಅಂಗೀಕೃತ ಸ್ವರಗ್ರಾಮ; ಪುರಸ್ಕೃತ ಸ್ವರಶ್ರೇಣಿ.
  5. (ಶಾರೀರದ ಯಾ ವಾದ್ಯದ) ಧ್ವನಿವ್ಯಾಪ್ತಿ; ನಾದದ ಹರವು.
  6. (ಯಾವುದೇ ವಿಷಯದ, ವಸ್ತುವಿನ) ಪೂರ್ಣವ್ಯಾಪ್ತಿ; ಪ್ರಸರ; ಹರವು: the whole gamut of crime ಸಕಲ ವಿಧವಾದ ಪಾತಕಕೃತ್ಯಗಳು. run up and down the gamut ಅಮೂಲಾಗ್ರವಾಗಿ ನೋಡಿಬಿಡು; ಬುಡದಿಂದ ತುದಿಯವರೆಗೂ ನೋಡಿಬಿಡು.