1gammon ಗ್ಯಾಮನ್‍
ನಾಮವಾಚಕ
  1. ಪಕ್ಕದ ಹಾಗೂ ಕೆಳತೊಡೆಯ ಭಾಗದ ಹಂದಿಮಾಂಸ: gammon of bacon ಹಂದಿಮಾಂಸ ಖಂಡ.
  2. ಉಪ್ಪೂರಿಸಿದ ಯಾ ಹೊಗೆಯಲ್ಲಿಟ್ಟು ಸಂಸ್ಕರಿಸಿದ ಹಂದಿಮಾಂಸ.
2gammon ಗ್ಯಾಮನ್‍
ಸಕರ್ಮಕ ಕ್ರಿಯಾಪದ

(ಹಂದಿಮಾಂಸವನ್ನು) ಉಪ್ಪುಹಾಕಿ ಪರಿಷ್ಕರಿಸು, ಸಂಸ್ಕರಿಸು.

3gammon ಗ್ಯಾಮನ್‍
ನಾಮವಾಚಕ

ಬ್ಯಾಕ್‍ಗ್ಯಾಮನ್‍ ಎಂಬ ಆಟದಲ್ಲಿ (ಎರಡು ಆಟ ಗೆದ್ದು) ಪಡೆದ ಪೂರ್ತಿಜಯ.

4gammon ಗ್ಯಾಮನ್‍
ಸಕರ್ಮಕ ಕ್ರಿಯಾಪದ

(ಬ್ಯಾಕ್‍ಗ್ಯಾಮನ್‍ ಆಟದಲ್ಲಿ ಎರಡು ಆಟಗಳನ್ನು ಗೆದ್ದು ಎದುರಾಳಿಯನ್ನು) ಸೋಲಿಸು.

5gammon ಗ್ಯಾಮನ್‍
ನಾಮವಾಚಕ

ಠಕ್ಕು; ಮೋಸ; ವಂಚನೆ.

6gammon ಗ್ಯಾಮನ್‍
ಸಕರ್ಮಕ ಕ್ರಿಯಾಪದ
  1. ನಂಬಿಕೆ ತೋರುವಂತೆ ಮಾತನಾಡು, ನಟಿಸು; ನಂಬಿಸುವಂತೆ ಮಾತನಾಡು.
  2. ಮೋಸಮಾಡು; ವಂಚಿಸು.
ಅಕರ್ಮಕ ಕ್ರಿಯಾಪದ

ನಟನೆಮಾಡು; ಸೋಗುಹಾಕು.

7gammon ಗ್ಯಾಮನ್‍
ಸಕರ್ಮಕ ಕ್ರಿಯಾಪದ

(ನೌಕಾಯಾನ) ಹಡಗಿನ ಮೂತಿಯ ತೊಲೆಯನ್ನು ಹಡಗಿನ ಮುಂಭಾಗಕ್ಕೆ ಹಗ್ಗಗಳಿಂದ ಬಿಗಿ.

8gammon ಗ್ಯಾಮನ್‍
ನಾಮವಾಚಕ
  1. ಹಡಗಿನ ಮೂತಿಯ ತೊಲೆಯನ್ನು ಹಡಗಿನ ಮುಂಗೋಟಿಗೆ ಹಗ್ಗಗಳಿಂದ ಬಿಗಿಯುವುದು.
  2. ಹಾಗೆ ಬಿಗಿದ ಹಗ್ಗ.
9gammon ಗ್ಯಾಮನ್‍
ಭಾವಸೂಚಕ ಅವ್ಯಯ

ಅವಿವೇಕ! ಅಸಂಬದ್ಧ!