See also 2game  3game  4game
1game ಗೇಮ್‍
ನಾಮವಾಚಕ
  1. ಚೆಲ್ಲಾಟ; ಹಾಸ್ಯ; ವಿನೋದ; ತಮಾಷೆ; ಗೇಲಿ: was only playing a game with you ನಿನ್ನೊಡನೆ ಬರಿ ಚೆಲ್ಲಾಟವಾಡುತ್ತಿದ್ದ.
  2. ಕ್ರೀಡೆ; ಕೇಳಿ; ಆಟ: a game of ball ಚೆಂಡಾಟ.
  3. ವಿನೋದದ, ಕುಶಾಲಿನ – ಸಂಗತಿ, ಸಮಾಚಾರ, ವಿಷಯ: what a game! ಎಂಥ ವಿನೋದ! ಏನು ಕುಶಾಲು!
  4. (ಜಾಣತನ, ಶಕ್ತಿ, ಅದೃಷ್ಟಗಳಿಂದ ಗೆಲ್ಲಬಹುದಾದ, ನಿಯಮಾನುಸಾರ ಆಡುವ) ಆಟ; ಆಟದ ಪಂದ್ಯ.
  5. (ಬಹುವಚನದಲ್ಲಿ)
    1. (ಗ್ರೀಕ್‍, ರೋಮನ್‍, ಪ್ರಾಕ್ತನಶಾಸ್ತ್ರ) (ವ್ಯಾಯಾಮ, ನಾಟಕ, ಸಂಗೀತ, ಮೊದಲಾದವುಗಳ) ಪಂದ್ಯಗಳು; ಶರ್ಯತ್ತುಗಳು.
    2. ಕತ್ತಿಕಾಳಗ, ಮಲ್ಲಯುದ್ಧ, ಮೊದಲಾದ ಪ್ರದರ್ಶನಗಳು.
    3. ಕ್ರೀಡಾಸ್ಪರ್ಧೆಗಳು; ವ್ಯಾಯಾಮ ಸ್ಪರ್ಧೆಗಳು: Olympic games ಒಲಂಪಿಕ್‍ ಸ್ಪರ್ಧೆಗಳು.
    4. ಕ್ರೀಡಾಕೂಟಗಳು; ಶಾಲೆ, ಕಾಲೇಜು, ಮೊದಲಾದವುಗಳಲ್ಲಿ ಏರ್ಪಡಿಸುವ ಕ್ರೀಡೆಗಳು ಯಾ ವ್ಯಾಯಾಮ ಪ್ರದರ್ಶನಗಳು.
  6. (ಆಟದಂತೆಯೇ) ಆಸಕ್ತಿಯಿಂದ ನಡೆಸುವ, ಉದ್ಯಮ; ಕೆಲಸ; ಯೋಜನೆ; ಕಾರ್ಯಕ್ರಮ: a winning game ಗೆಲ್ಲುವ ಆಟ; ಯಶಸ್ವಿಯಾಗುವ ಉದ್ಯಮ; ಯಶಸ್ವಿಯಾಗುವ ಭರವಸೆಯುಳ್ಳ ಪ್ರಯತ್ನ, ಯೋಜನೆ, ತಂತ್ರ, ಮೊದಲಾದವು. a losing game ಸೋಲುವ ಆಟ; ಯಶಸ್ವಿಯಾಗುವ ಭರವಸೆ ಇಲ್ಲದ ಉದ್ಯಮ, ಹೂಡಿಕೆ, ತಂತ್ರ, ಮೊದಲಾದವು.
  7. ಹೂಟ; ಹಂಚಿಕೆ; ಒಳಸಂಚು; ಪಿತೂರಿ: was playing a deep game ಆಳವಾದ ಒಳಸಂಚು ನಡೆಸುತ್ತಿದ್ದ. a double game ಇಬ್ಬಂದಿ ಆಟ; ಮೋಸದ ಹೂಟ. spoilt my game ನನ್ನ ಹಂಚಿಕೆ ಹಾಳುಮಾಡಿದ.
  8. (ಬಹುವಚನದಲ್ಲಿ) ಮೋಸ; ಉಪಾಯ; ಯುಕ್ತಿಗಳು; ಕುಟಿಲ ತಂತ್ರಗಳು; ಹೂಟಗಳು: none of your games! ನಿನ್ನ ಆಟವನ್ನೆಲ್ಲಾ ನನ್ನ ಎದುರು ತೋರಿಸಬೇಡ; ನಿನ್ನ ಆಟವನ್ನು ನನ್ನ ಹತ್ತಿರ ಕಟ್ಟಿಡು; ನಿನ್ನ ಬೇಳೆ ಇಲ್ಲಿ ಬೇಯುವುದಿಲ್ಲ.
  9. (ಬ್ರಿಡ್ಜ್‍, ಇಸ್ಪೀಟಾಟ, ಟೆನಿಸ್‍, ಮೊದಲಾದ ಪಂದ್ಯಗಳಲ್ಲಿ) ಒಂದು ಆಟ; ಗೇಮು; ಇಡೀ ಆಟದ ಒಂದು ಭಾಗ: game all ಇಬ್ಬರದೂ ಒಂದೊಂದು ಗೇಮು; ಪ್ರತಿಯೊಂದು ಕಡೆಯದೂ ಒಂದೊಂದು ಆಟ.
  10. ಆಟದ ಸಾಮಾನು; ಕ್ರೀಡೋಪಕರಣಗಳು.
  11. (ಆಟದಲ್ಲಿ) ಸ್ಕೋರಿನ ಸಂಖ್ಯೆ; ಗಳಿಸಿದ ಅಂಕ; ಗೆಲ್ಲಂಕ.
  12. ಆಟದ – ಸ್ಕೋರು, ಪಾಯಿಂಟು: the game is four all ಈಗ ಎರಡೂ ಪಕ್ಷಗಳು ನಾಲ್ಕು ನಾಲ್ಕು ಆಟಗಳನ್ನು, ಪಾಯಿಂಟುಗಳನ್ನು ಗೆದ್ದಿವೆ.
  13. ಬೇಟೆಯ ಪ್ರಾಣಿ; ಅಟ್ಟಿಕೊಂಡು ಹೋದ ಬೇಟೆ.
  14. (ರೂಪಕವಾಗಿ) (ಸಾಧಿಸಬೇಕಾದ) ಉದ್ದೇಶ; ಗುರಿ.
    1. (ಸಮುದಾಯವಾಚಕ ಪ್ರಯೋಗದಲ್ಲಿ) (ಕ್ರೀಡೆಗಾಗಿ, ಆಹಾರಕ್ಕಾಗಿ) ಬೇಟೆ; ಮನುಷ್ಯ ಬೇಟೆಯಾಡುವ ಕಾಡುಮೃಗ, ಪಕ್ಷಿ, ಈನು, ಮೊದಲಾದವು.
    2. ಇವುಗಳ ಮಾಂಸ.
  15. (ವಿನೋದಕ್ಕಾಗಿ) ಸಾಕಿದ (ಹಂಸಗಳ) ಹಿಂಡು.
ಪದಗುಚ್ಛ
  1. be off one’s game
    1. ಹುರುಪಿಲ್ಲದಿರು; ಉತ್ಸಾಹ ಕಳೆದ ಸ್ಥಿತಿಯಲ್ಲಿರು.
    2. ಸರಿಯಾಗಿ ಆಟ ಆಡದಿರು.
  2. be on one’s game
    1. ಹುರುಪಿನಿಂದಿರು; ಉತ್ಸಾಹ ತುಂಬಿ ಒಳ್ಳೆಯ ಸ್ಥಿತಿಯಲ್ಲಿರು.
    2. ಚೆನ್ನಾಗಿ ಆಟ ಆಡುತ್ತಿರು.
  3. big game (ಸಿಂಹ, ಆನೆ, ಮೊದಲಾದ) ಭಾರಿ ಮೃಗಗಳು; ಭಾರಿ ಬೇಟೆ (ಪ್ರಾಣಿಗಳು).
  4. fair game
    1. ಕಾನೂನುಬದ್ಧ ಬೇಟೆ (ಪ್ರಾಣಿ); ಕಾನೂನಿನ ಸಮ್ಮತಿಯ ಪ್ರಕಾರ ಬೇಟೆಯಾಡಬಹುದಾದ ಪ್ರಾಣಿ.
    2. (ರೂಪಕವಾಗಿ) ನ್ಯಾಯಸಮ್ಮತವಾಗಿಯೇ ಟೀಕಿಸಬಹುದಾದ ಯಾ ಖಂಡಿಸಬಹುದಾದ ವ್ಯಕ್ತಿ ಯಾ ಸಂಸ್ಥೆ; ಟೀಕಾರ್ಹ, ಖಂಡನಾರ್ಹ, ಆಕ್ರಮಣಾರ್ಹ – ವ್ಯಕ್ತಿ, ಸಂಸ್ಥೆ, ಮೊದಲಾದವು.
  5. forbidden game
    1. ನಿಷಿದ್ಧ ಬೇಟೆ; ಬೇಟೆಯಾಡಕೂಡದೆಂದು ಕಾನೂನು ನಿಷೇಧಿಸಿರುವ ಪ್ರಾಣಿ, ಮೃಗ.
    2. ಟೀಕಾತೀತ, ಖಂಡನಾತೀತ ವ್ಯಕ್ತಿ, ಸಂಸ್ಥೆ, ಮೊದಲಾದವು; ಟೀಕೆ, ಆಕ್ರಮಣ, ಮೊದಲಾದವನ್ನು ನಿಷೇಧಿಸಿರುವ ವ್ಯಕ್ತಿ, ಸಂಸ್ಥೆ, ಮೊದಲಾದವು.
  6. game all ಪ್ರತಿ ಪಕ್ಷವೂ ಒಂದೊಂದು ಆಟ ಗೆದ್ದಿದೆ.
  7. game and (game and set ಎನ್ನುವುದರ ಹ್ರಸ್ವರೂಪ) (ಟೆನಿಸ್‍) ಆಟ ಗೆದ್ದು ಸೆಟ್‍ ಮುಗಿಯಿತು.
  8. play a good game
    1. ಒಳ್ಳೆಯ ಆಟವಾಡು.
    2. ಚಾತುರ್ಯದಿಂದ ವರ್ತಿಸು.
  9. play a poor game
    1. ಕಳಪೆ ಆಟವಾಡು.
    2. (ರೂಪಕವಾಗಿ) ಚಾತುರ್ಯವಿಲ್ಲದೆ ವರ್ತಿಸು.
  10. play the game
    1. ನಿಯಮಗಳನ್ನು ಪಾಲಿಸು; ನಿಯಮಗಳಿಗೆ ಅನುಸಾರವಾಗಿ ಆಡು.
    2. (ರೂಪಕವಾಗಿ)ಸಭ್ಯ ರೀತಿಯಲ್ಲಿ ವರ್ತಿಸು; ಧರ್ಮದಿಂದ, ನ್ಯಾಯವಾಗಿ ನಡೆದುಕೊ; ಗೌರವಾರ್ಹವಾಗಿ ನಡೆದುಕೊ.
  11. the game (ಅಶಿಷ್ಟ)
    1. ಸೂಳೆಗಾರಿಕೆ; ವ್ಯಭಿಚಾರ.
    2. ಕಳ್ಳತನ: on the game
    3. ವ್ಯಭಿಚಾರದಲ್ಲಿ ತೊಡಗಿ.
    4. ಕದಿಯುತ್ತ.
ನುಡಿಗಟ್ಟು
  1. beat person at his own game ಅವನ ಪಟ್ಟನ್ನೇ ಹಾಕಿ, ಅವನದೇ ತಂತ್ರ ಬಳಸಿ ಅವನನ್ನು – ಈರಿಸು, ಸೋಲಿಸು, ಕೆಡವು.
  2. game that two can play (ಸಾಮಾನ್ಯವಾಗಿ ಕೆಟ್ಟ ವ್ಯವಹಾರಕ್ಕೆ ಪ್ರತೀಕಾರ ಮಾಡಬಹುದೆಂಬ ಬೆದರಿಕೆ ಹಾಕುವಾಗ) ಈ ಆಟ ಎರಡು ಕಡೆಯವರೂ ಆಡಬಹುದು; ಇತರರೂ ಅದೇ ರೀತಿ ಮಾಡಬಹುದು, ಅದೇ ತಂತ್ರ ಬಳಸಬಹುದು.
  3. give the game away ಉದ್ದೇಶ ಬಯಲು ಮಾಡು; ಇಂಗಿತ ಬಿಟ್ಟುಕೊಡು.
  4. have the game in one’s hands ಗೆಲ್ಲುವ ನೆಚ್ಚಿಕೆ ಹೊಂದಿರು; ಆಟವನ್ನು ಅನುಕೂಲಕ್ಕೆ ತಕ್ಕಂತೆ ತಿರುಗಿಸಬಲ್ಲವನಾಗಿರು; ಆಟದ ಮೇಲೆ ಹತೋಟಿ ಪಡೆದಿರು.
  5. make game of ಹಾಸ್ಯ, ತಮಾಷೆ – ಮಾಡು.
  6. not in the game ಗೆಲ್ಲುವ – ಸಂಭವವಿಲ್ಲದೆ, ಭರವಸೆಯಿಲ್ಲದೆ.
  7. on the game (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಸೂಳೆಗಾರಿಕೆಯಲ್ಲಿ ಯಾ ಕಳ್ಳತನದಲ್ಲಿ ಸಿಕ್ಕಿಕೊಂಡಿರು, ತೊಡಗಿರು.
  8. play person’s game ಬೇರೊಬ್ಬನ ಯೋಜನೆಯನ್ನು ಅನುದ್ದೇಶಿತವಾಗಿ ಮುಂದುವರಿಸು.
  9. the game is up ಈಗ ಆಟ ಮುಗಿಯಿತು, ಕೆಟ್ಟಿತು; ಗೆಲುವು ಸಾಧ್ಯವಿಲ್ಲ.
See also 1game  3game  4game
2game ಗೇಮ್‍
ಗುಣವಾಚಕ
  1. ಕಾಳಗದ ಹುಂಜದಂಥ.
  2. ಜೋರಾದ; ಆವೇಶದ.
  3. ಉತ್ಸಾಹಭರಿತ; ಹುರುಪುಳ್ಳ; ಮಾಡಲು ಹುಮ್ಮಸ್ಸುಳ್ಳ.
  4. ಧೈರ್ಯವುಳ್ಳ; ಧೈರ್ಯದಿಂದ ಸಿದ್ಧವಾಗಿರುವ.
ನುಡಿಗಟ್ಟು

as game as Ned Kelly (ಆಸ್ಟ್ರೇಲಿಯ, ಆಡುಮಾತು) ತುಂಬ ಧೈರ್ಯವುಳ್ಳ; ಬಹಳ ಧೀರನಾದ; ಕೆಚ್ಚೆದೆಯುಳ್ಳ.

See also 1game  2game  4game
3game ಗೇಮ್‍
ಸಕರ್ಮಕ ಕ್ರಿಯಾಪದ

ಜೂಜಾಡಿ – ಕಳೆ, ಹಾಳುಮಾಡು.

ಅಕರ್ಮಕ ಕ್ರಿಯಾಪದ

ದುಡ್ಡು ಕಟ್ಟಿ ಜೂಜಾಡು.

See also 1game  2game  3game
4game ಗೇಮ್‍
ಗುಣವಾಚಕ
  1. (ಕೈ ಮೊದಲಾದವುಗಳ ವಿಷಯದಲ್ಲಿ) ಊನವಾದ; ವಿಕಲವಾದ.
  2. (ಕಾಲಿನ ವಿಷಯದಲ್ಲಿ)ಕುಂಟ; ಕುಂಟಾದ.