See also 2gamble
1gamble ಗ್ಯಾಂಬ್‍ಲ್‍
ಸಕರ್ಮಕ ಕ್ರಿಯಾಪದ
  1. ಪಣ ಒಡ್ಡು.
  2. ಪಣವಾಗಿ ಒಡ್ಡಿ (ಹಣ) ಕಳೆದುಕೊ.
ಅಕರ್ಮಕ ಕ್ರಿಯಾಪದ
  1. ದುಡ್ಡಿಟ್ಟು (ಮುಖ್ಯವಾಗಿ ಹೆಚ್ಚಾಗಿ ಹಣ ಒಡ್ಡಿ) ಜೂಜಾಡು; ಜುಗಾರಾಡು; ದ್ಯೂತವಾಡು.
  2. ನಷ್ಟಕರ ಕೆಲಸಕ್ಕೆ ಕೈಹಾಕು; ಅಪಾಯಕರ ಸಾಹಸಕ್ಕೆ ಕೈಹಾಕು; ಯುದ್ಧ, ಹಣಕಾಸಿನ ವ್ಯವಹಾರ, ಮೊದಲಾದವುಗಳಲ್ಲಿ ಮಹತ್ಫಲ ಸಾಧಿಸಲು ಅಪಾಯದ ಪ್ರಯತ್ನಗಳನ್ನು ಕೈಗೊಳ್ಳು.
ಪದಗುಚ್ಛ

gamble away ಜೂಜಾಡಿ ಕಳೆ; ಪಣ ಒಡ್ಡಿ ಕಳೆದುಕೊ.

ನುಡಿಗಟ್ಟು

gamble on ಆಸೆ ಯಾ ಭರವಸೆಯ ಮೇಲೆ ಕ್ರಮ ಕೈಗೊಳ್ಳು, ನಡೆ, ಮುಂದುವರಿ: gamble on weather being fine tomorrow ನಾಳೆ ಹವೆ ಸರಿಯಾಗಿರುತ್ತದೆಂಬ ಭರವಸೆಯ ಮೇಲೆ ಮುಂದುವರಿ.

See also 1gamble
2gamble ಗ್ಯಾಂಬ್‍ಲ್‍
ನಾಮವಾಚಕ
  1. ಜೂಜು; ಜುಗಾರು; ದ್ಯೂತ: on the gamble ಜೂಜಿಗೊಡ್ಡಿದ; ಪಣವಾಗಿಟ್ಟ.
  2. ನಷ್ಟಕರ ಸಾಹಸ; ಅಪಾಯದ ಉದ್ಯಮ; ನಷ್ಟಕ್ಕೆ, ಅಪಾಯಕ್ಕೆ – ಸಿಕ್ಕಬಹುದಾದ ಉದ್ಯಮ, ಪ್ರಯತ್ನ.