gambit ಗ್ಯಾಂಬಿಟ್‍
ನಾಮವಾಚಕ
  1. (ಚದುರಂಗದ) ಬಲಿ ನಡೆ; ಸ್ಥಾನಬಲ ಪಡೆಯಲು ಪೇದೆ ಯಾ ಇತರ ಕಾಯನ್ನು ಉದ್ದೇಶಪೂರ್ವಕವಾಗಿ ಬಲಿಕೊಟ್ಟು ಆರಂಭಿಸುವ ಆಟದ ಒಂದು ನಡೆ.
  2. (ರೂಪಕವಾಗಿ) (ಯಾವುದೇ ಕಾರ್ಯಾಚರಣೆಯಲ್ಲಿ) ಮೊದಲ ಹೆಜ್ಜೆ; ಮೊಟ್ಟ ಮೊದಲನೆಯ ನಡೆ, ಚಲನ.
  3. (ಸಂಭಾಷಣೆ, ಚರ್ಚೆ, ಮೊದಲಾದವನ್ನು ಪ್ರಾರಂಭಿಸುವ) ಮೊದಲ ಮಾತು; ಪೀಠಿಕೆಯ ಮಾತು; ಆರಂಭದ ಮಾತು; ಪ್ರಾಸ್ತಾವಿಕ ಅಂಶ.
  4. ತಂತ್ರ; ಹೂಟ; ಉಪಾಯ.