galvanize ಗ್ಯಾಲ್ವನೈಸ್‍
ಸಕರ್ಮಕ ಕ್ರಿಯಾಪದ

ಗ್ಯಾಲ್ವನೀಕರಿಸು:

  1. ನೇರ ವಿದ್ಯುತ್ಪ್ರವಾಹದಿಂದ ಯಾ ವಿದ್ಯುತ್ತಿನಿಂದಲೋ ಎಂಬಂತೆ ಪ್ರಚೋದಿಸು (ರೂಪಕವಾಗಿ ಸಹ): galvanize into life ಆಘಾತ ಯಾ ಉದ್ರೇಕದಿಂದ ಹುರಿದುಂಬಿಸು.
  2. ವಿದ್ಯುದ್ವಿಚ್ಛೇದನೆಯಿಂದ ಲೋಹವನ್ನು ಲೇಪಿಸು.
  3. ಕಬ್ಬಿಣವು ತುಕ್ಕು ಹಿಡಿಯದಂತೆ (ವಿದ್ಯುತ್ತನ್ನು ಬಳಸದೆ) ಅದರ ಮೇಲೆ ಸತುವನ್ನು ಲೇಪಿಸು.