See also 2gallop
1gallop ಗ್ಯಾಲಪ್‍
ನಾಮವಾಚಕ
  1. (ಕುದುರೆ ಮೊದಲಾದವುಗಳ) ನಾಗಾಲೋಟ; ದೌಡು; ಪ್ರತಿ ದಾಪಿನಲ್ಲಿಯೂ ನಾಲ್ಕು ಕಾಲುಗಳನ್ನು ನೆಲದಿಂದ ಮೇಲಕ್ಕೆತ್ತಿ ಓಡುವ ಓಟ.
  2. ನಾಗಾಲೋಟದ ಸವಾರಿ.
  3. ನಾಗಾಲೋಟ ಪಥ; ಅಂಥ ಸವಾರಿಗಾಗಿ ಇರುವ ಹಾದಿ ಯಾ ಮೈದಾನ.
ಪದಗುಚ್ಛ
  1. at a gallop ದೌಡಾಯಿಸುತ್ತಿರುವ; ನಾಗಾಲೋಟದಲ್ಲಿ ಓಡುತ್ತಿರುವ.
  2. full gallop ದೌಡೋಟ; ನಾಗಾಲೋಟ.
See also 1gallop
2gallop ಗ್ಯಾಲಪ್‍
ಕ್ರಿಯಾಪದ
(ವರ್ತಮಾನ ಕೃದಂತ galloping, ಭೂತರೂಪ ಮತ್ತು ಭೂತಕೃದಂತ galloped).
ಸಕರ್ಮಕ ಕ್ರಿಯಾಪದ
  1. ನಾಗಾಲೋಟದಲ್ಲಿ ಸವಾರಿ ಮಾಡು.
  2. (ಕುದುರೆಯನ್ನು) ನಾಗಾಲೋಟದಲ್ಲಿ ಓಡಿಸು; ಭರದಿಂದ ಓಡಿಸು.
ಅಕರ್ಮಕ ಕ್ರಿಯಾಪದ
  1. (ಕುದುರೆಯ, ಅದರ ಸವಾರನ ಯಾ ಇತರ ಚತುಷ್ಪಾದಿಯ ವಿಷಯದಲ್ಲಿ) ನಾಗಾಲೋಟ ಓಡು; ನಾಗಾಲೋಟದಲ್ಲಿ ಹೋಗು.
  2. ವೇಗವಾಗಿ ಓದು, ಪಠಿಸು ಯಾ ಮಾತನಾಡು.
  3. ವೇಗವಾಗಿ ಹೋಗು; ನಾಗಾಲೋಟದಲ್ಲಿ ಸಾಗು; ದೌಡು ಹೊಡಿ; ಓಟ ಕೀಳು.
  4. ನಾಗಾಲೋಟದಲ್ಲಿ ಹೋಗು; ಭರದಿಂದ ಮುಂದುವರಿ; ತೀವ್ರವಾಗು; ಹೆಚ್ಚಾಗು; ಪ್ರಬವಾಗು: galloping inflation ನಾಗಾಲೋಟದಲ್ಲಿ ಏರುತ್ತಿರುವ ಹಣದುಬ್ಬರ. galloping consumption ಕ್ಷಿಪ್ರವಾಗಿ ತೀವ್ರವಾಗುತ್ತಿರುವ ಕ್ಷಯರೋಗ.