galley ಗ್ಯಾಲಿ
ನಾಮವಾಚಕ
(ಬಹುವಚನ galleys).
  1. (ಮುಖ್ಯವಾಗಿ ಚರಿತ್ರೆ) (ಹಾಯಿಗಳನ್ನೂ ಹುಟ್ಟುಗಳನ್ನೂ ಬಳಸುವ, ಸಾಮಾನ್ಯವಾಗಿ ಗುಲಾಮರೋ ಕೈದಿಗಳೋ ನಡೆಸುವ) ಒಂದಂತಸ್ತಿನ ಚಪ್ಪಟೆಯ ಹಡಗು. Figure: galley-1
  2. (ಚರಿತ್ರೆ) (ಒಂದು ಯಾ ಹೆಚ್ಚು ಅಂತಸ್ತುಗಳಲ್ಲಿ ಹುಟ್ಟು ಹಾಕಿ ನಡೆಸುವ) ಪ್ರಾಚೀನ ರೋಮನ್ನರ ಯಾ ಗ್ರೀಕರ ಯುದ್ಧನೌಕೆ.
  3. (ಯುದ್ಧದ ಹಡಗಿನ ಕ್ಯಾಪ್ಟನ್‍ ಉಪಯೋಗಿಸುವ ತರಹದ) ತೆರಪು ದೋಣಿ; ಮೇಲುಗಡೆಯಲ್ಲಿ ಮುಚ್ಚಿರದ ದೊಡ್ಡ ಹುಟ್ಟು ದೋಣಿ.
  4. ಹಡಗಿನ ಯಾ ವಿಮಾನದ ಅಡಿಗೆಮನೆ.
  5. (ಮುದ್ರಣ) ಗ್ಯಾಲಿ; ಜೋಡಿಸಿದ ಮೊಳೆಗಳ ಸಾಲುಗಳನ್ನು ಇಡುವ, ಮೂರು ಕಡೆ ಅಂಚಿರುವ ಆಯತಾಕಾರದ ತಟ್ಟೆ.
  6. = galley proof.
ನುಡಿಗಟ್ಟು

in this etc. galley ಈ ಅನಿರೀಕ್ಷಿತ ಪರಿಸ್ಥಿತಿಯಲ್ಲಿ.