galaxy ಗಾಲಕ್ಸಿ
ನಾಮವಾಚಕ
  1. (Galaxy) (ಖಗೋಳ ವಿಜ್ಞಾನ)
    1. ಗಾಲಕ್ಸಿ; ಆಕಾಶಗಂಗೆ ಗಾಲಕ್ಸಿ; ರಾತ್ರಿಯ ವೇಳೆ ಆಕಾಶದಲ್ಲಿ ಹಾಲು ಚೆಲ್ಲಿರುವಂತೆ ಕಾಣುವ ಆಕಾಶಗಂಗೆಯಲ್ಲಿರುವ ಕೋಟ್ಯಂತರ ನಕ್ಷತ್ರಗಳನ್ನೂ ಆಕಾಶದಲ್ಲಿ ಕಾಣಿಸುವ ಇತರ ನಕ್ಷತ್ರಗಳನ್ನೂ ನಮ್ಮ ಸೌರವ್ಯೂಹವನ್ನೂ ಒಳಗೊಂಡ ಒಟ್ಟಿಲು.
    2. ಗಾಲಕ್ಸಿ; ನಮ್ಮ ಆಕಾಶಗಂಗೆ ಗಾಲಕ್ಸಿಯ ಹೊರಗಡೆ ದೂರದಲ್ಲಿ(ರುವ), ದೂರದರ್ಶಕದಲ್ಲಿ ಅನೇಕವೇಳೆ ನೀಹಾರಿಕೆಗಳಂತೆ ಕಾಣುವ ಆಕಾಶಗಂಗೆ ಗಾಲಕ್ಸಿಯಂಥದೇ ಆದ ಇತರ ತಾರಾ ಸಮೂಹಗಳು.
  2. ತಾರಾಗಣ; ತೇಜೋಗಣ; ಸುಂದರಿಯರು, ಪ್ರತಿಭಾವಂತರು, ಮೊದಲಾದವರ ಉಜ್ವಲ ಗುಂಪು.