See also 2gain
1gain ಗೇನ್‍
ನಾಮವಾಚಕ
  1. (ಆಸ್ತಿ ಮೊದಲಾದವುಗಳ) ಅಭಿವೃದ್ಧಿ; ಹೆಚ್ಚಳ.
  2. ಲಾಭ; ಸಂಪಾದನೆ; ಪಡಪು; ಹಾಯಿದೆ; ನಫೆ.
  3. ಮುಂದುವರೆತ; ಮುಂದುವರೆಯುವುದು.
  4. ಉತ್ತಮಿಕೆ; ಉತ್ತಮ ಸ್ಥಿತಿಗೆ ಬರುವುದು.
  5. ಐಶ್ವರ್ಯ ಸಂಪಾದನೆ; ಸಿರಿಗಳಿಕೆ; ಹಣ ಮೊದಲಾದವುಗಳ ಗಳಿಕೆ.
  6. (ಬಹುವಚನದಲ್ಲಿ) ಸಂಪಾದನೆ; ಗಳಿಕೆ; ಸಂಬಳ ಸಾರಿಗೆ; ವರಮಾನ; ಆದಾಯ; ವ್ಯಾಪಾರ ಮೊದಲಾದವುಗಳಿಂದ ಸಂಪಾದಿಸಿದ, ಜೂಜಿನಲ್ಲಿ ಗೆದ್ದ – ಹಣ, ದುಡ್ಡು.
  7. (ಮೊತ್ತದಲ್ಲಿ) ವೃದ್ಧಿ; ಹೆಚ್ಚಳ; ಏರಿಕೆ
  8. (ಇಲೆಕ್ಟ್ರಾನಿಕ್ಸ್‍)
    1. ಲಾಭ; ಹೆಚ್ಚಳ; ಆಧಿಕ್ಯ; ಅಧಿಕಾಂಶ; ವಿದ್ಯುಚ್ಛಕ್ತಿ ಮೊದಲಾದವುಗಳ ಹೆಚ್ಚಳದ ಪ್ರಮಾಣ (ಸಾಮಾನ್ಯವಾಗಿ ಲಾಗರಿದಮ್‍ನಲ್ಲಿ ವ್ಯಕ್ತಪಡಿಸುವುದು).
    2. ಇದರ ಲಾಗರಿದಮ್‍.
See also 1gain
2gain ಗೇನ್‍
ಸಕರ್ಮಕ ಕ್ರಿಯಾಪದ
  1. (ಅಪೇಕ್ಷಿಸಿದ ಯಾ ಅಪೇಕ್ಷಣೀಯ ವಸ್ತುವನ್ನು) ಪಡೆ; ಹೊಂದು; ಗಳಿಸು; ಸಂಪಾದಿಸು; gain advantage, recognition, one’s ends ಲಾಭ, ಮನ್ನಣೆ, ತನ್ನ ಗುರಿ – ಪಡೆ.
  2. ಲಾಭಗಳಿಸು; ನಫೆ ಹೊಂದು; ಪ್ರಯೋಜನ ಪಡೆ.
  3. (ಯಾವುದರಲ್ಲಾದರೂ) ಅನುಕೂಲ ಹೊಂದು; ಅಭಿವೃದ್ಧಿ ಪಡೆ.
  4. (ತಾರತಮ್ಯದಿಂದ, ಇನ್ನೊಬ್ಬನಿಗಿಂತ) ಮೇಲೆನಿಸಿಕೊ; ಮೇಲಾಗು; ಹೆಚ್ಚಳಿಕೆ ಪಡೆ.
  5. ಆಧಿಕ್ಯ ಹೊಂದು; ಅಧಿಕವಾಗು; ಹೆಚ್ಚಿನದಾಗಿ, ಸೇರಿಕೆಯಾಗಿ – ಪಡೆ, ಹೊಂದು: gain momentum, weight ಆವೇಗ, ತೂಕ – ಪಡೆ.
  6. (ಸಮುದ್ರ, ಶತ್ರು, ಮೊದಲಾದವುಗಳು ಆಕ್ರಮಿಸಿದ ಜಮೀನು, ಪ್ರದೇಶ, ಮೊದಲಾದವನ್ನು) ಬಿಡಿಸಿಕೊ; ಹಿಂದಕ್ಕೆ ಪಡೆ.
  7. (ಹೋರಾಟ, ಸ್ಪರ್ಧೆ, ವಿವಾದ, ಮೊದಲಾದವುಗಳಲ್ಲಿ) ಜಯಗಳಿಸು; ಗೆಲ್ಲು.
  8. ಒಲಿಸಿಕೊ; ಒಡಂಬಡಿಸು; ತನ್ನ ಕಡೆಗೆ, ಅಭಿಪ್ರಾಯಕ್ಕೆ ಬರುವಂತೆ ಮಾಡಿಕೊ; ಒಪ್ಪುವಂತೆ ಮಾಡು.
  9. (ಉದ್ದೇಶಿಸಿದ ಸ್ಥಳವನ್ನು) ಸೇರು; ಮುಟ್ಟು; ತಲಪು.
  10. (ಸಮುದ್ರದ ವಿಷಯದಲ್ಲಿ) ನೆಲವನ್ನು ಆಕ್ರಮಿಸು.
  11. (ಗಡಿಯಾರದ ವಿಷಯದಲ್ಲಿ) (ನಿರ್ದಿಷ್ಟ ಕಾಲ) ಮುಂದಾಗು; (ನಿಜವಾದ ಸಮಯಕ್ಕಿಂತ) ಮುಂದೆ ಓಡು.
ಅಕರ್ಮಕ ಕ್ರಿಯಾಪದ
  1. ಲಾಭ – ಗಳಿಸು, ಪಡೆ.
  2. ಪ್ರಯೋಜನ – ಹೊಂದು, ಪಡೆ.
  3. (ಯಾವುದರಲ್ಲೇ) ಸುಧಾರಿಸು; ಮುಂದೆ ಬರು; ಮುಂದುವರಿ: to gain in health after an illness ರೋಗ ವಾಸಿಯಾದ ಮೇಲೆ ಆರೋಗ್ಯ ಸುಧಾರಿಸು.
  4. (ಗಡಿಯಾರದ ವಿಷಯದಲ್ಲಿ) ಮುಂದೆ ಹೋಗು; ನಿಜವಾದ ಸಮಯಕ್ಕಿಂತ ಹೆಚ್ಚಿನ ಸಮಯ ತೋರಿಸು: gain by an hour a day ದಿನಕ್ಕೊಂದು ಘಂಟೆ ಮುಂದೆ ಹೋಗುತ್ತದೆ.
  5. (ಹೋಲಿಕೆಯಿಂದ ಯಾ ವ್ಯತ್ಯಾಸದಿಂದ) ಮೇಲಾಗು; ಉತ್ತಮವಾಗು; ಅತಿಶಯಿಸು.
ನುಡಿಗಟ್ಟು
  1. gain face ತನ್ನ ವರ್ಚಸ್ಸು, ಕೀರ್ತಿ, ಅಧಿಕಾರ, ಅಂತಸ್ತು, ಮೊದಲಾದವನ್ನು – ಹೆಚ್ಚಿಸಿಕೊ, ಸ್ಥಾಪಿಸಿಕೊ: a petty official trying to gain face by treating his subordinates arrogantly ತನ್ನ ಕೈಕೆಳಗಿನವರನ್ನು ಸೊಕ್ಕಿನಿಂದ ಕಾಣುತ್ತಾ ತನ್ನ ಅಂತಸ್ತನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿರುವ ಕೆಳಗಣ ಅಧಿಕಾರಿ.
  2. gain 1ground.
  3. gain ground (up)on(ತಾನು ಬೆನ್ನಟ್ಟಿರುವ ವ್ಯಕ್ತಿ ಯಾ ವಸ್ತುವನ್ನು) ಸಮೀಪಿಸು.
  4. gain the ear of ಸುಮುಖವಾಗಿ ಕೇಳುವಂತೆ (ಒಬ್ಬನನ್ನು) ಒಲಿಸಿಕೊ; ಹೇಳಿದುದಕ್ಕೆ ಕಿವಿಗೊಡುವಂತೆ ಮಾಡಿಕೊ.
  5. gain the upper hand ಮೇಲುಗೈ ಪಡೆ, ಸಾಧಿಸು.
  6. gain time (ನೆಪ ಹೇಳುತ್ತಾ ಯಾ ನಿಧಾನೋಪಾಯದಿಂದ) ಕಾಲತಳ್ಳು; ಕಾಲಕಳೆ; ಕಾಲಹರಣ ಮಾಡು.
  7. gain upon ಒಬ್ಬನ ಒಲವು, ಅನುಗ್ರಹ, ದಯೆ, ಕೃಪೆ – ಸಂಪಾದಿಸು.