See also 2gag
1gag ಗಾಗ್‍
ನಾಮವಾಚಕ
  1. ಬಾಯಿಗಿಡುಗು; ಬಾಯಿಗಿಡಿ; ಮಾತನಾಡದಂತೆ ಯಾ ಶಸ್ತ್ರಚಿಕಿತ್ಸೆಯಲ್ಲಿ ಚಿಕಿತ್ಸೆಯ ಸೌಲಭ್ಯಕ್ಕೆ ಬಾಯನ್ನು ತೆರೆದಿಡಲು ಬಾಯಿಗೆ ತುರುಕುವ ಪದಾರ್ಥ.
  2. (ಶಾಸನ ಸಭೆ) ಮಾತು ತಡೆತ; ವಾಕ್‍ಸ್ತಂಭನ; ಚರ್ಚೆ ಮುಗಿತ; ಚರ್ಚೆ ಸಾಕುಮಾಡಬೇಕೆಂಬ ತಡೆ, ಅಡ್ಡಿ.
  3. ಮುಕ್ತ ಭಾಷಣಕ್ಕೆ ತಡೆಮಾಡುವ ವಸ್ತು ಯಾ ಪರಿಸ್ಠಿತಿ.
  4. ನಟನ ಪ್ರಕ್ಷಿಪ್ತಗಳು; ನಾಟಕ ಸಂಭಾಷಣೆಯಲ್ಲಿ ನಟನು ಸೇರಿಸುವ ಮಾತುಗಳು.
  5. (ನಾಟಕಶಾಲೆ) (ಮುಖ್ಯವಾಗಿ ನಾಟಕ, ಸಂಗೀತ ಶಾಲೆ, ಮನರಂಜನೆ), ಮೊದಲಾದವುಗಳ ನಡುವೆ ಮೊದಲೇ ಸಿದ್ಧಪಡಿಸಿದ ಒಡ್ಡಿದ (ಸೇರಿಸಿದ) ನಕಲಿ ಶ್ಯ; ಹಾಸ್ಯ ಪ್ರಸಂಗ.
  6. ತಮಾಷೆ; ಗೇಲಿ.
  7. ತಮಾಷೆಯ ಕಾರ್ಯ ಯಾ ಸಂದರ್ಭ.
  8. ಸುಳ್ಳು; ಮೋಸ; ವಂಚನೆ.
See also 1gag
2gag ಗಾಗ್‍
ಕ್ರಿಯಾಪದ

(ವರ್ತಮಾನ ಕೃದಂತ gagging ಭೂತರೂಪ ಮತ್ತು ಭೂತಕೃದಂತ gagged.)

ಸಕರ್ಮಕ ಕ್ರಿಯಾಪದ
  1. ಬಾಯಿ ಗಿಡಿ; ಬಾಯಿಕಟ್ಟು; ಮಾತಾಡದಂತೆ ಯಾ ಬಾಯಿ ತೆರೆದಿಡುವಂತೆ ಯಾವುದೇ ಪದಾರ್ಥವನ್ನು ಬಾಯಿಗೆ ತುರುಕು.
  2. ಬಾಯಿ ಮುಚ್ಚಿಸು; ಮಾತನಾಡದಂತೆ ಮಾಡು; ವಾಕ್‍ ಸ್ವಾತಂತ್ರಕ್ಕೆ ತಡೆಯೊಡ್ಡು.
  3. (ನಟನ ವಿಷಯದಲ್ಲಿ, ನಾಟಕ ಸಂಭಾಷಣೆಯಲ್ಲಿ) ಮಧ್ಯೆ ಮಾತು ಸೇರಿಸು.
  4. ಕುದುರೆಗೆ ಗಿಡುಗು ಕಡಿವಾಣ ಹಾಕು.
  5. ವಂಚಿಸು; ಮೋಸಮಾಡು.
  6. ಗಂಟಲು ಕಟ್ಟಿಸು.
  7. ವಾಂತಿ ಮಾಡಿಸು.
ಅಕರ್ಮಕ ಕ್ರಿಯಾಪದ
  1. (ನಾಟಕ ಮೊದಲಾದ ಮನರಂಜನೆಯ ನಡುವೆ) ನಕಲಿ ಸೇರಿಸು; ಹಾಸ್ಯ ಸೇರಿಸು; ಹಾಸ್ಯ ಪ್ರಸಂಗ ಜೋಡಿಸು; ವಿನೋದವನ್ನು ಗಿಡುಗು.
  2. ವಂಚನೆಯನ್ನು ಅಭ್ಯಾಸಮಾಡು; ಮೋಸ ಮಾಡುವುದನ್ನು ಕಲಿತುಕೊ.
  3. ಗಂಟಲು ಕಟ್ಟು ಯಾ ಕಟ್ಟಿಕೊ.
  4. ವಾಂತಿ ಮಾಡು.