See also 2gaff  3gaff  4gaff
1gaff ಗಾಹ್‍
ನಾಮವಾಚಕ
  1. ಕೊಕ್ಕೆ ಈಟಿ; ಮೀನು ಹಿಡಿಯಲು ಬಳಸುವ, ಕೊಕ್ಕೆ ಮುಳ್ಳುಳ್ಳ ಈಟಿ.
  2. ಮೀನುಕೊಕ್ಕೆ; ದೊಡ್ಡ ಮೀನುಗಳನ್ನು ಚುಚ್ಚಿ ದಡಕ್ಕೆ ತರುವ, ಕಬ್ಬಿಣದ ಕೊಕ್ಕೆ ಹಾಕಿದ ದಡಿ. Figure: gaff-2
  3. ಗ್ಯಾಹ್‍; ಹಡಗಿನ ಹಿಂತುದಿಯಿಂದ ಮುಂತುದಿಯವರೆಗೆ ಚಾಚಿದ, ಕೂವೆ ಹಗ್ಗದ ಮೇಲೆ ನಿಲ್ಲಿಸಿರದ ಚೌಕಾಕಾರದ ಹಾಯಿಪಟದ ಮೇಲ್ಭಾಗವನ್ನು ಬಿಚ್ಚಿಡಲು, ಚಾಚಲು ಕಟ್ಟುವ ದಂಡ, ಅಡ್ಡಗೋಲು.
See also 1gaff  3gaff  4gaff
2gaff ಗಾಹ್‍
ಸಕರ್ಮಕ ಕ್ರಿಯಾಪದ

ಕೊಕ್ಕೆ ಈಟಿಯಿಂದ (ಮೀನು) ಹಿಡಿ.

See also 1gaff  2gaff  4gaff
3gaff ಗಾಹ್‍
ನಾಮವಾಚಕ

ಠಕ್ಕು; ಮೋಸ; ವಂಚನೆ.

ನುಡಿಗಟ್ಟು
  1. blow the gaff (ಅಶಿಷ್ಟ)
    1. ಒಳಸಂಚನ್ನು ಹೊರಗೆಡವು; ಪಿತೂರಿ ಬಯಲು ಮಾಡು.
    2. ಗುಟ್ಟು ರಟ್ಟು ಮಾಡು; ರಹಸ್ಯ ಬಿಟ್ಟುಕೊಡು.
  2. stand the gaff (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಕಷ್ಟ ಸಹಿಸಿಕೊ; ತೊಂದರೆ, ಉಪಟಳ, ಟೀಕೆ, ಮೊದಲಾದವನ್ನು – ತಡೆದುಕೊ.
See also 1gaff  2gaff  3gaff
4gaff ಗಾಹ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. (ಪ್ರಾಚೀನ ಪ್ರಯೋಗ) (ಅಶಿಷ್ಟ)ಸಾರ್ವಜನಿಕ ವಿನೋದ ಸ್ಥಳ.
  2. ಕೆಳದರ್ಜೆಯ ಅಗ್ಗದ ನಾಟಕ ಶಾಲೆ ಯಾ ಸಂಗೀತ ಮಂದಿರ.
ಪದಗುಚ್ಛ

penny gaff = 4gaff(2).