gadget ಗಾಜಿಟ್‍
ನಾಮವಾಚಕ

(ಆಡುಮಾತು)

  1. ಯಂತ್ರೋಪಕರಣ; ಯಂತ್ರ ಸಲಕರಣೆ; ಯಂತ್ರ ಮೊದಲಾದವುಗಳಲ್ಲಿ ಅಳವಡಿಸಿರುವ ಒಂದು ಸಣ್ಣ ಉಪಕರಣ ಯಾ ಸಲಕರಣೆ.
  2. ಅನುಷಂಗ; ಅನುಬಂಧ; ಗೌಣವಾದ ಯಾ ಪ್ರಾಸಂಗಿಕವಾದ ವಸ್ತು ಯಾ ಸಾಧನ.
  3. ಯಂತ್ರಕ; ಯಂತ್ರವಿಶೇಷ; ಸಾಮಾನ್ಯವಾಗಿ ಚಿಕ್ಕ, ನವೀನ, ಚಿತ್ರವಿಚಿತ್ರ ಯಾಂತ್ರಿಕ ವಸ್ತು.
  4. (ಕೇವಲ) ಥಳಕುಪಳಕು ವಸ್ತು; ನಿರುಪಯುಕ್ತವಾದ, ಕೇವಲ ಆಲಂಕಾರಿಕವಾದ ಹಗುರ ಪೀಠೋಪಕರಣ, ಒಡವೆ, ಮೊದಲಾದವು.