See also 2future
1future ಹ್ಯೂಚರ್‍
ಗುಣವಾಚಕ
  1. ಆಗಲಿರುವ; ಸಂಭವಿಸಲಿರುವ; ಬರಲಿರುವ; ಮುಂದೆ ಆಗುವ; ಮುಂಬರುವ; ಮುಂದಿನ; ಭವಿಷ್ಯದ: future events ಭವಿಷ್ಯದ ಘಟನೆಗಳು.
  2. ಭಾವೀ; ಮುಂದೆ ಆಗಲಿರುವ; my future wife ನನ್ನ ಭಾವೀ ಪತ್ನಿ; ಮುಂದೆ ನನ್ನ ಹೆಂಡತಿಯಾಗಲಿರುವವಳು.
  3. ಭವಿಷ್ಯಕಾಲದ; ಮುಂದಿನ, ಮುಂಬರುವ – ಕಾಲದ; ಬರಲಿರುವ ಕಾಲದ: future prospects ಮುಂದಿನ ನಿರೀಕ್ಷೆಗಳು.
  4. (ವ್ಯಾಕರಣ) ಭವಿಷ್ಯತ್ಕಾಲದ; ಮುಂದಾಗಲಿರುವ ಘಟನೆಯನ್ನು ವರ್ಣಿಸುವ.
ಪದಗುಚ್ಛ
  1. future life ಆಮುಷ್ಮಿಕ ಬದುಕು; ಪಾರಲೌಕಿಕ ಜೀವನ; ಮರಣಾನಂತರದ ಬದುಕು.
  2. future state ಪಾರಲೌಕಿಕ ಸ್ಥಿತಿ; ಆಮುಷ್ಮಿಕ ಸ್ಥಿತಿ; ಮರಣಾನಂತರದ ಸ್ಥಿತಿ.
ನುಡಿಗಟ್ಟು

future shock ಭವಿಷ್ಯದಾಘಾತ; ತ್ವರಿತ ಪ್ರಗತಿಯೊಡನೆ ಹೊಂದಿಕೊಳ್ಳಲಾಗದಿರುವಿಕೆ.

See also 1future
2future ಹ್ಯೂಚರ್‍
ನಾಮವಾಚಕ
  1. ಮುಂಬರುವ ಕಾಲ; ಭವಿಷ್ಯತ್ಕಾಲ; ಮುಂದಿನ ಕಾಲ; ಮುಂದಿನದು; past, present, and future ಭೂತ, ವರ್ತಮಾನ, ಮತ್ತು ಭವಿಷ್ಯತ್ಕಾಲ.
  2. ಮುಂದೆ ಆಗುವುದು; ಮುಂದೆ ನಡೆಯುವುದು; ಭವಿಷ್ಯ: the past determines the future ಗತಕಾಲವು ಭವಿಷ್ಯವನ್ನು ನಿರ್ಧರಿಸುತ್ತದೆ.
  3. (ವ್ಯಕ್ತಿ, ದೇಶ, ವಿಜಯ, ಮೊದಲಾದವುಗಳ) ಭವಿಷ್ಯಸ್ಥಿತಿ: that project has no future ಆ ಯೋಜನೆಗೆ ಭವಿಷ್ಯವಿಲ್ಲ, ಅದು ಸಹಲವಾಗುವುದಿಲ್ಲ. such a country has no future ಅಂಥ ನಾಡಿಗೆ ಯಾವುದೇ ಭವಿಷ್ಯವಿಲ್ಲ; ಆ ನಾಡು ಏಳಿಗೆಗೆ ಬರುವುದಿಲ್ಲ. I gave up that job, because there was no future in it ನಾನು ಆ ಕೆಲಸ ಬಿಟ್ಟೆ, ಏಕೆಂದರೆ ಅದರಲ್ಲಿ ಯಾವ ಭವಿಷ್ಯವೂ (ಅಂದರೆ ಹೆಚ್ಚಿನ ಸಂಬಳ, ಬಡ್ತಿ, ಮೊದಲಾದವು) ಇರಲಿಲ್ಲ.
  4. (ವ್ಯಾಕರಣ) ಭವಿಷ್ಯತ್ಕಾಲ.
  5. ಗೊತ್ತಾದ ಗಂಡು ಯಾ ಹೆಣ್ಣು; ನಿಶ್ಚಿತ ಪತಿ ಯಾ ಪತ್ನಿ: he took his pretty future to the church ಅವನು ತಾನು ಮದುವೆಯಾಗಲಿರುವ ಚೆಲುವೆಯನ್ನು ಚರ್ಚಿಗೆ ಕರೆದೊಯ್ದ.
  6. (ಬಹುವಚನದಲ್ಲಿ) (ವಾಣಿಜ್ಯ)
    1. ~ಮುಮ್ಮಾರಿಕೆಯ ಸರಕುಗಳು ಮತ್ತು ಸಾಲಪತ್ರಗಳು; ಕೊಳ್ಳುವ ಕಾಲದಲ್ಲಿ ಒಪ್ಪಂದವಾದ ಬೆಲೆಗಳಿಗೆ ಕೊಂಡ, ಆದರೆ ಅನಂತರದ ಕಾಲದ ದುಡ್ಡು ಕೊಡಬೇಕಾದ ಮತ್ತು ಒದಗಿಸಬೇಕಾದ ಸರಕುಗಳು ಮತ್ತು ಸ್ಟಾಕುಪತ್ರಗಳು: American futures are in better demand ಅಮೆರಿಕದ ಮುಮ್ಮಾರಿಕೆಯ ಸರಕುಗಳಿಗೆ ಹೆಚ್ಚಿನ ಬೇಡಿಕೆಯಿದೆ.
    2. ಮುಮ್ಮಾರಿಕೆಯ ಒಪ್ಪಂದಗಳು, ಕರಾರುಗಳು; ಭಾವೀ ಸರಕಿನ ಯಾ ಸಾಲಪತ್ರಗಳ ಒಪ್ಪಂದಗಳು.
ಪದಗುಚ್ಛ
  1. for the future ಭವಿಷ್ಯತ್ಕಾಲಕ್ಕೆ; ಮುಂದಿನ ಕಾಲಕ್ಕೆ; ಮುಂದಿನ ಕಾಲವನ್ನು ಮನಸ್ಸಿನಲ್ಲಿ, ಗಮನದಲ್ಲಿ ಇಟ್ಟುಕೊಂಡು: have you provided for the future? ನೀನು ಮುಂದಕ್ಕೆ, ಭವಿಷ್ಯತ್ತಿಗಾಗಿ ಏನಾದರೂ ಮಾಡಿಕೊಂಡಿದ್ದೀಯಾ? (ಅಂದರೆ, ಹಣ ಉಳಿಸಿರುವುದು, ಜೀವವಿಮೆ ಮಾಡಿರುವುದು, ಇತ್ಯಾದಿ).
  2. in future ಇನ್ನು ಮುಂದಕ್ಕೆ; ಇನ್ನು ಮೇಲೆ; ಮುಂದೆ: try to live a better life in future ಇನ್ನು ಮುಂದಾದರೂ ಒಳ್ಳೆಯ ಜೀವನ ನಡೆಸಲು ಪ್ರಯತ್ನಿಸು.