See also 2fustian
1fustian ಹಸ್ಟಿಅನ್‍, ಹಸ್ಟ್ಯನ್‍
ನಾಮವಾಚಕ
  1. (ಹುರಿನೂಲಿನ ಮೂಲೆನೆಯ್ಗೆಯ ಮೋಟು ಜುಂಗಿನ, ಸಾಮಾನ್ಯವಾಗಿ ಮಬ್ಬು ಬಣ್ಣದ) ದಪ್ಪ ಹತ್ತಿ ಬಟ್ಟೆ; ಹಚ್ಚಡ; ದುಪಟಿ; ಹಸ್ಟಿಯನ್‍.
  2. ವಾಗಾಡಂಬರ; ಆಡಂಬರದ ಭಾಷಣ ಯಾ ಬರವಣಿಗೆ; ಆಟಾಟೋಪದ – ಮಾತು, ಬರಹ; ಪೊಳ್ಳು ಮಾತು ಯಾ ಬೊಜ್ಜು ಬರವಣಿಗೆ; ಡಂಬದ ಮಾತು ಯಾ ಬರಹ: fustian cannot disguise the author’s meagre plot ಗ್ರಂಥಕರ್ತನ ನಿಸ್ಸಾರ ಕಥಾವಸ್ತುವನ್ನು ಆಡಂಬರದ ಶೈಲಿ ಮರೆಮಾಚಲಾರದು.
See also 1fustian
2fustian ಹಸ್ಟಿಅನ್‍, ಹಸ್ಟನ್‍
ಗುಣವಾಚಕ
  1. ಹಸ್ಟಿಯನ್‍ ಬಟ್ಟೆಯಿಂದ ಮಾಡಿದ; ದಪ್ಪ ಹತ್ತಿ ಬಟ್ಟೆಯಿಂದ ಮಾಡಿದ.
  2. (ರೂಪಕವಾಗಿ)
    1. ಆಡಂಬರದ; ಬರಿಡೌಲಿನ; ಆಟೋಪದ: fustian language ಆಟೋಪದ ಭಾಷೆ.
    2. ಹುರುಳಿಲ್ಲದ ಕೆಲಸಕ್ಕೆ ಬಾರದ; ನಿಷ್ಪ್ರಯೋಜಕ; ನಿರುಪಯುಕ್ತ: fustian companion ನಿಷ್ಪ್ರಯೋಜಕ – ಜೊತೆಗಾರ, ಸಂಗಾತಿ.